ಸಹಕಾರ ಕ್ಷೇತ್ರದಲ್ಲಿ ಪಳಗಿದರೆ ರಾಜಕಾರಣ ಮಾಡಬಹುದು: ಮಧು ಜಿ.ಮಾದೇಗೌಡ

| Published : Jan 20 2024, 02:02 AM IST

ಸಹಕಾರ ಕ್ಷೇತ್ರದಲ್ಲಿ ಪಳಗಿದರೆ ರಾಜಕಾರಣ ಮಾಡಬಹುದು: ಮಧು ಜಿ.ಮಾದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಕ್ಷೇತ್ರದಲ್ಲಿ ಸಮಾಜಕ್ಕೆ ಸೇವೆ ಮಾಡುವ ಸಾಕಷ್ಟು ಮುಕ್ತ ಅವಕಾಶಗಳಿವೆ. ಈ ಕ್ಷೇತ್ರಗಳಲ್ಲಿ ಬೇರೆ ಬೇರೆ ಜನರು ಬಂದು ಕುಲಗೆಡಿಸಿ ರಾಜಕಾರಣದಲ್ಲಿ ಹೊಲಸು ಆಗುವ ಮಟ್ಟಿಗೆ ಬಂದಿರುವುದು ಶೋಚನೀಯ. ನನ್ನ ಪರಿಷತ್ ಅನುದಾನದಲ್ಲಿ ಜಿ.ಮಾದೇಗೌಡ ಸಭಾಂಗಣಕ್ಕೆ ನೀಡಿದ್ದೇನೆ. ಮೊದಲು ಈ ಅನುದಾನವನ್ನು ಬೇರೆಯವರಿಗೆ ಕೊಟ್ಟಿದ್ದೆ. ಅದನ್ನು ರದ್ದುಪಡಿಸಿ ಇಲ್ಲಿಗೆ ಕೊಟ್ಟಿದ್ದೇನೆ. ಸಭಾಂಗಣ ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರುವ ರೀತಿ ಕೆಲಸ ಮಾಡಿ.

ಕನ್ನಡಪ್ರಭ ವಾರ್ತೆ ಮಂಡ್ಯವಿಶಿಷ್ಟ ಕ್ಷೇತ್ರವಾದ ಸಹಕಾರ ಕ್ಷೇತ್ರದಲ್ಲಿ ಪಳಗಿದರೆ ರಾಜಕಾರಣ ಮಾಡಬಹುದು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.

ನಗರದ ಕೆ.ಆರ್.ರಸ್ತೆಯ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ (ಪಿ.ಎಲ್.ಡಿ.ಬ್ಯಾಂಕ್) ನೂತನವಾಗಿ ನಿರ್ಮಿಸಿರುವ ಮಂಡ್ಯದ ಗಾಂಧಿ ಡಾ.ಜಿ.ಮಾದೇಗೌಡ ಸಹಕಾರ ಸಭಾಂಗಣದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರ ಕ್ಷೇತ್ರದಲ್ಲಿ ಸಮಾಜಕ್ಕೆ ಸೇವೆ ಮಾಡುವ ಸಾಕಷ್ಟು ಮುಕ್ತ ಅವಕಾಶಗಳಿವೆ. ಈ ಕ್ಷೇತ್ರಗಳಲ್ಲಿ ಬೇರೆ ಬೇರೆ ಜನರು ಬಂದು ಕುಲಗೆಡಿಸಿ ರಾಜಕಾರಣದಲ್ಲಿ ಹೊಲಸು ಆಗುವ ಮಟ್ಟಿಗೆ ಬಂದಿರುವುದು ಶೋಚನೀಯ ಎಂದರು.

ನನ್ನ ಪರಿಷತ್ ಅನುದಾನದಲ್ಲಿ ಜಿ.ಮಾದೇಗೌಡ ಸಭಾಂಗಣಕ್ಕೆ ನೀಡಿದ್ದೇನೆ. ಮೊದಲು ಈ ಅನುದಾನವನ್ನು ಬೇರೆಯವರಿಗೆ ಕೊಟ್ಟಿದ್ದೆ. ಅದನ್ನು ರದ್ದುಪಡಿಸಿ ಇಲ್ಲಿಗೆ ಕೊಟ್ಟಿದ್ದೇನೆ. ಸಭಾಂಗಣ ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರುವ ರೀತಿ ಕೆಲಸ ಮಾಡಿ ಎಂದರು.

ಪಿಎಲ್‌ ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್ ಮಾತನಾಡಿ, ಜಿ.ಮಾದೇಗೌಡರು ನಮಗೆಲ್ಲ ಸ್ಫೂರ್ತಿ ತುಂಬಿ ಬೆಳೆಸಿದವರು. ಈ ಸಭಾಂಗಣಕ್ಕೆ ಬ್ಯಾಂಕಿನ ಆಡಳಿತ ಮಂಡಳಿಯವರೆಲ್ಲರೂ ಚರ್ಚೆ ಮಾಡಿ ಜಿ.ಮಾದೇಗೌಡರ ಹೆಸರನ್ನು ಇಟ್ಟು ನಿರ್ಮಿಸಿದ್ದೇವೆ ಎಂದರು.

ನಾವು ಅಧಿಕಾರಕ್ಕೆ ಬಂದ ವೇಳೆ ಬ್ಯಾಂಕ್ 19 ಕೋಟಿ ನಷ್ಟದಲ್ಲಿತ್ತು. ಈಗ 6.50 ಕೋಟಿಗೆ ತಂದು ನಿಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡ್ಡಿ ಮನ್ನಾ ಮಾಡಿರುವುದರಿಂದ ವಸೂಲಾತಿ ಯಲ್ಲಿ ಪ್ರಗತಿ ಸಾಧಿಸಿದರೆ ಬ್ಯಾಂಕು ಲಾಭದಾಯದತ್ತ ಬರುತ್ತದೆ ಎಂದರು.

ಈ ವೇಳೆ ಶಾಸಕ ಪಿ.ರವಿಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಸಿ.ಎ. ಅರವಿಂದ್, ನಿರ್ದೇಶಕರಾದ ಎಚ್.ಸಿ.ಶಿವಲಿಂಗೇಗೌಡ, ಬಿ.ಎಲ್. ಬೋರೇಗೌಡ, ಟಿ.ಬಿ. ಶಿವಲಿಂಗೇಗೌಡ, ಸುನಂದಮ್ಮ, ಸಿದ್ದರಾಮು, ಮರಿಗೌಡ, ಎಂ. ಯೋಗೇಶ್, ಬಿ.ಕೆ.ರಾಮೇಗೌಡ, ಸವಿತಾ ಶಂಕರ್, ಚಿಕ್ಕಬೆಟ್ಟಯ್ಯ, ಸರಸ್ವತಿ ಶೇಖರ್, ನಂಜುಂಡ, ಎಂ.ಪ್ರಕಾಶ್, ಎಂ.ಸಿ.ಕೃಷ್ಣೇಗೌಡ, ಎ.ಶೇಖರ್, ಇನ್ನಿತರರು ಇದ್ದರು.