ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕಾಂಗ್ರೆಸ್ ಸರ್ಕಾರ ನನ್ನ ವಿರುದ್ಧ ದ್ವೇಷದ ರಾಜಕಾರಣಿ ಮಾಡುತ್ತಿದೆ. ಸರ್ಕಾರದ ಅಧಿಕಾರ ದುರುಪಯೋಗದ ಬಗ್ಗೆ ದಾಖಲೆಗಳಿರುವುದರಿಂದ ನನ್ನ ವಿರುದ್ಧ ಯುದ್ಧ ಶುರು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಡೀ ಸರ್ಕಾರ ಒಬ್ಬ ಕುಮಾರಸ್ವಾಮಿಯನ್ನು ಸೈಲೆಂಟ್ ಮಾಡಲು ಪ್ರಯತ್ನಿಸುತ್ತಿದೆ. ಸರ್ಕಾರದ ಅಕ್ರಮಗಳ ಬಗ್ಗೆ ನನ್ನ ಬಳಿ ಟನ್‌ಗಟ್ಟಲೆ ದಾಖಲೆಗಳಿವೆ. ಯಾವುದೇ ದಾಖಲೆಗಳನ್ನು ಕೊಟ್ಟರು ಇವತ್ತಿನ ತನಿಖಾ ಸಂಸ್ಥೆಗಳ ಮೇಲೆ ನನಗೆ ನಂಬಿಕೆ ಇಲ್ಲ. ನಮ್ಮದು ಬಂದು ಸಂಸ್ಕೃತಿಯಲ್ಲ. ಸರ್ವ ಜನಾಂಗದ ಶಾಂತಿಯ ತೋಟದ ಸಂಸ್ಕೃತಿ ಎಂದು ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು.
ಕರ್ನಾಟಕ ಸಿಡಿ ಮತ್ತು ಪೆನ್ ಡ್ರೈವ್ ತಯಾರು ಮಾಡುವ ರಾಜ್ಯವಾಗಿದೆ ಎಂದು ನೇರವಾಗಿ ಆರೋಪಿಸಿದ ಕುಮಾರಸ್ವಾಮಿ, ಹನಿ ಟ್ರ್ಯಾಪ್ ಮತ್ತು ಸುಪಾರಿ ಕುರಿತಂತೆ ಗೃಹ ಮಂತ್ರಿಗಳು ಯಾವ ರೀತಿಯ ತನಿಖೆ ಮಾಡಿಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ಇಲ್ಲವೇ?, ಯಾರ ಮನೆ ಮೇಲೆ ದಾಳಿ ಮಾಡಿಸಿದರು?. ಆ ಮನೆಯಲ್ಲಿ ಏನೇನು ಸಿಕ್ಕಿತು?. ಯಾಕೆ ಸುಪಾರಿ ಕೊಟ್ಟರು ಎಂದೆಲ್ಲಾ ಅಂಶಗಳ ಬಗ್ಗೆ ತನಿಖೆ ನಡೆಸಿ ಸತ್ಯವನ್ನು ಹೊರಗೆ ತರುತ್ತಾರಾ ?. ಆ ಧೈರ್ಯ ಈ ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನಿಸಿದರು.ನಾನು ಕೇವಲ ಪ್ರಚಾರಕ್ಕೆ ದಾಖಲೆ ಕೊಟ್ಟರೂ ನ್ಯಾಯ ದೊರಕುವುದಿಲ್ಲ ಎಂದು ನನಗೆ ಗೊತ್ತಿದೆ. ದಾಖಲೆಗಳು ನನ್ನ ಬಳಿ ಭದ್ರವಾಗಿವೆ. ಒಂದು ಬಾರಿ 5 ವರ್ಷದ ಸ್ವತಂತ್ರ ಸರ್ಕಾರ ಕೊಡಿ. ಎಲ್ಲರ ಆಡಳಿತವನ್ನು ನೋಡಿದ್ದೀರಿ. ನನಗೂ ಒಂದು ಅವಕಾಶ ಕೊಡಿ. ಎಲ್ಲಾ ಅಕ್ರಮಗಳಿಗೂ ತಾರ್ಕಿಕ ಅಂತ್ಯ ಕಾಣಿಸುತ್ತೇನೆ ಎಂದು ವಿಶ್ವಾಸದಿಂದ ನುಡಿದರು.
ನಾನು ಪ್ರಧಾನ ಮಂತ್ರಿಯ ಮಗ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ. ಈಗ ಕೇಂದ್ರ ಮಂತ್ರಿ. ನಾನು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಲು ಸಾಧ್ಯವೇ. ಕಂದಾಯ ಪ್ರಕರಣದಲ್ಲಿ ಡಿವೈಎಸ್ಪಿ ಅವರನ್ನು ತನಿಖಾಧಿಕಾರಿಯನ್ನಾಗಿ ಮಾಡಿದ್ದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು. ನನಗೆ ಈ ಪರಿಸ್ಥಿತಿಯನ್ನು ತಂದವರು ಇನ್ನೆಷ್ಟು ಮನೆ ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು..ಚಲುವರಾಯಸ್ವಾಮಿ ಒಬ್ಬ ಜೋಕರ್: ಕುಮಾರಸ್ವಾಮಿಕನ್ನಡಪ್ರಭ ವಾರ್ತೆ ಮಂಡ್ಯ
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಒಬ್ಬ ಜೋಕರ್. ಆ ಜೋಕರ್ ಮಾತುಗಳಿಗೆ ಉತ್ತರ ಕೊಡಬೇಕಾ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2004ರಲ್ಲಿ ಚಲುವರಾಯಸ್ವಾಮಿ ಆರು ತಿಂಗಳು ಮಂತ್ರಿಯಾಗಿದ್ದರು. ಆಗ ಮಧ್ಯರಾತ್ರಿ ಮೂರು ಗಂಟೆಯಾದರೂ ನನ್ನನ್ನು ಮನೆಗೆ ಹೋಗಲು ಬಿಡುತ್ತಿರಲಿಲ್ಲ. ಅವರು ಯಾರಿಂದ ಮಂತ್ರಿಯಾದರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಪಾಪ ನನ್ನನ್ನು ಸಿಎಂ ಮಾಡಿದವರು ಅವರೇ ಅಲ್ಲವೇ. ಅವರು ಮಂತ್ರಿ ಆಗುವಾಗ ಏನೇನು ಆಯ್ತು ಎನ್ನುವುದನ್ನು ಸ್ವಲ್ಪ ನೆನಪಿಸಿಕೊಳ್ಳಲಿ ಎಂದು ಮಾತುಗಳಿಂದಲೇ ತಿವಿದರು.
ಕೆರೆಯನ್ನು ನುಂಗಿ ಹಾಕಿ ಅಣ್ಣನ ಹೆಸರಿಗೆ ನೋಂದಣಿ ಮಾಡಿಸಿ ದಾನ ಪಡೆಯುವವರು ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.ಮೆಡಿಕಲ್ ಕಾಲೇಜು, ಸಾರಿಗೆ ಬಸ್ ನಿಲ್ದಾಣಗಳ ಆಧುನೀಕರಣ ಮಾಡಿದೆ. ಐಐಟಿ ಬಗ್ಗೆಯೂ ಮಾತನಾಡಿದ್ದಾರೆ. ಬಿಡಿ ಅಂತ ಜೋಕರ್‌ಗಳ ಮಾತುಗಳಿಗೆ ನಾನು ಉತ್ತರ ಕೊಡಲ್ಲ ಎಂದು ನಿರಾಕರಿಸಿದರು.