ಕ್ರೀಡೆಯಲ್ಲಿ ರಾಜಕಾರಣ ಮಾಡಬಾರದು. ದೇಶ ಯುವಕರಿಂದ ಕೂಡಿದ್ದು, ಭವ್ಯ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬಲಿಷ್ಠ ಯುವಕರ ತಂಡ ನಿರ್ಮಾಣಕ್ಕೆ ಪ್ರಧಾನಿ ಕರೆ ನೀಡಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹುಬ್ಬಳ್ಳಿ: ಕ್ರೀಡೆಯಲ್ಲಿ ರಾಜಕಾರಣ ಮಾಡಬಾರದು. ದೇಶ ಯುವಕರಿಂದ ಕೂಡಿದ್ದು, ಭವ್ಯ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬಲಿಷ್ಠ ಯುವಕರ ತಂಡ ನಿರ್ಮಾಣಕ್ಕೆ ಪ್ರಧಾನಿ ಕರೆ ನೀಡಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಇಲ್ಲಿನ ನೆಹರು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಅವರು ಪ್ರಸ್ತುತ ಪಡಿಸಿದ ಕ್ರೀಡಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಆರ್ಥಿಕವಾಗಿ ದೇಶ ಬಲಿಷ್ಠ ಮಾಡುವ ಜತೆಗೆ ರಕ್ಷಣಾ ವ್ಯವಸ್ಥೆ ಸುಭದ್ರ ಮಾಡಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲೆಡೆ ಉತ್ತಮ ಕ್ರೀಡಾಪಟುಗಳು ಹೊರಬರುತ್ತಿದ್ದಾರೆ. ಅಥ್ಲೆಟಿಕ್ಸ್, ಕಬಡ್ಡಿ ಸೇರಿದಂತೆ ಎಲ್ಲ ಕ್ರೀಡೆಗಳಲ್ಲಿ ಉತ್ತಮ ಕ್ರೀಡಾಪಟುಗಳು ಹೊರಬರಲಿ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಮಾತನಾಡಿ, ಭಾರತ ಕ್ರೀಡೆಯಲ್ಲಿ ಮುನ್ನುಗ್ಗಬೇಕೆಂಬುದು ಪ್ರಧಾನಿ ಮೋದಿ ಅವರ ಆಶಯ. ಅದರಂತೆ‌ ಎಲ್ಲ ಲೋಕಸಭಾ ಕ್ಷೇತ್ರದಲ್ಲಿ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಭಾರತ ಕ್ರೀಡೆಯಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದೆ. ಪಾಲಕರು ಮಕ್ಕಳಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಬೇಕು. ಮೊಬೈಲ್, ಟಿವಿಗಳಿಂದ ಮಕ್ಕಳನ್ನು ದೂರ ಇಡಿ. ಅಭ್ಯಾಸದ ಜೊತೆಗೆ ‌ಕ್ರೀಡೆಯಲ್ಲಿ ಹೆಚ್ಚು ಪಾಲ್ಗೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಿ ಎಂದರು.

ಪ್ರಾಸ್ತಾವಿಕವಾಗಿ ಮೇಯರ್ ಜ್ಯೋತಿ ಪಾಟೀಲ ಮಾತನಾಡಿದರು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ ಮಕ್ಕಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ತಹಸೀಲ್ದಾರ್ ಮಹೇಶ ಗಸ್ತಿ ವಹಿಸಿದ್ದರು. ಭರತ ಬೊಮ್ಮಾಯಿ, ಉಪಮೇಯರ್‌ ಸಂತೋಷ ಚವ್ಹಾಣ, ಮಾಜಿ ಮೇಯರ್‌ ಈರೇಶ ಅಂಚಟಗೇರಿ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಮಂಜು ಕಾಟ್ಕರ, ಮಹೇಂದ್ರ ಕೌತಾಳ, ರಂಗಾ ಬದ್ದಿ, ಲಿಂಗರಾಜ ಪಾಟೀಲ ಹಾಗೂ ಇತರರು ಇದ್ದರು.

ಅಸಂಸದೀಯ ಪದ ಬಳಕೆ ಸರಿಯಲ್ಲ

ಹುಬ್ಬಳ್ಳಿ: ಶಿವಲಿಂಗೇಗೌಡರು ಹಿರಿಯ ಶಾಸಕರು. ನಮ್ಮಂತಹ ಮೊದಲ ಬಾರಿ ಶಾಸಕರಾದವರಿಗೆ ಹಿರಿಯ ಶಾಸಕರ, ಸಚಿವರ ಮಾರ್ಗದರ್ಶನ ಅಗತ್ಯ. ಆದರೆ ಅವರೇ ಅಸಂವಿಧಾನಿಕ ಪದ ಬಳಸಿದರೆ ಹೇಗೆ? ಎಂದು ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಪ್ರಶ್ನಿಸಿದರು. ಇದೇ ವೇಳೆ ಗೃಹಲಕ್ಷ್ಮಿ, ಅನ್ನಭಾಗ್ಯದ ದುಡ್ಡು ಫಲಾನುಭವಿಗಳ ಖಾತೆಗೆ ಬರುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಸ್ಪಷ್ಟಪಡಿಸಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದನವನ್ನು ರಾಜ್ಯದ ಜನತೆಯೇ ನೋಡುತ್ತಿರುತ್ತದೆ. ಅಲ್ಲಿ ಬಳಸುವ ಪದಗಳು ಅವರ ಸಂಸ್ಕೃತಿಯನ್ನು ತೋರಿಸುತ್ತವೆ. ಅದು ಅವರಿಗೆ ಶೋಭೆ ತರುವುದಿಲ್ಲ. ರಾಜ್ಯದ ಜನತೆಯೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.ಹೋರಾಟ ನಿಲ್ಲದು

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ತಮಗೆ ಸಹೋದರಿ ಇದ್ದಂತೆ. ಅವರು ನನ್ನ ಬಗ್ಗೆ ಮಾತನಾಡಿದ ವೈಯಕ್ತಿಕ ಟೀಕೆಗಳನ್ನು ಪ್ರೀತಿಯಿಂದಲೇ ಸ್ವೀಕರಿಸುತ್ತೇನೆ. ನಾನು ಸದನದಲ್ಲಿ ಧ್ವನಿ ಎತ್ತಿರುವುದು ಇಲಾಖೆಯ ಲೋಪದೋಷದ ವಿರುದ್ಧ ಹೊರತು, ವೈಯಕ್ತಿಕವಲ್ಲ. ಆದರೆ, ಅವರು ನನ್ನ ಬಗ್ಗೆ ವೈಯಕ್ತಿಕ ಹೇಳಿಕೆ ನೀಡಿದ್ದಾರೆ ಎಂದರು.ಅನ್ನಭಾಗ್ಯದ್ದು ಇದೇ ಕಥೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರು ಹಸವಿನಿಂದ ಇರಬಾರದು, ಬಡವರ ಪರ ಸರ್ಕಾರ, ಎಲ್ಲರಿಗೂ ಉಚಿತ ಅಕ್ಕಿ ಎಂದು ಹೇಳಿದ್ದರು. ಆದರೆ 1.24 ಕೋಟಿ ಪಡಿತರರದಾರರಿಗೆ 2025ರ ಜನವರಿ ತಿಂಗಳ ಅಕ್ಕಿಯನ್ನೂ ನೀಡಿಲ್ಲ. ದುಡ್ಡು ನೀಡಿಲ್ಲ. ₹662 ಕೋಟಿ ಎಲ್ಲಿ ಹೋಯ್ತು ಎಂಬ ಪ್ರಶ್ನೆ ಎದ್ದಿದೆ. ಇದನ್ನು ಸಚಿವ ಮುನಿಯಪ್ಪ ಸದನದಲ್ಲೇ ಒಪ್ಪಿಕೊಂಡಿದ್ದಾರೆ. ಈ ಎರಡು ಗ್ಯಾರಂಟಿಗಳ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಬೇಕು. ಅಲ್ಲಿ ವರೆಗೂ ತಮ್ಮ ಹೋರಾಟ ನಿಲ್ಲದು ಎಂದು ಸ್ಪಷ್ಟಪಡಿಸಿದರು.ಅಬಕಾರಿ ಭ್ರಷ್ಟಾಚಾರಹಿಂದೆ ಕಾಂಗ್ರೆಸ್ ನವರು ಪೇ ಸಿಎಂ ಅಂತ ಬಿಜೆಪಿ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಅದಕ್ಕೆ ಈ ವರೆಗೂ ಸಾಕ್ಷಿ ನೀಡಿಲ್ಲ. ಆದರೆ, ಈಗ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು, ಅಬಕಾರಿ ಇಲಾಖೆ ಸಂಬಂಧಿಸಿ ಅಧಿಕಾರಿಗಳ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದಕ್ಕಿಂತ ಇನ್ನೂ ಏನು ಸಾಕ್ಷಿ ಬೇಕು ಎಂದು ಪ್ರಶ್ನಿಸಿದ ಅವರು, ಇದು ಭಂಡ ಸರ್ಕಾರವಾಗಿದೆ. ಸರ್ಕಾರ ಹಗರಣಗಳನ್ನು ಜನರ ಮುಂದೆ ಇಡುವ ಕೆಲಸ ಮಾಡುತ್ತಿದ್ದೇವೆ ಎಂದರು.