ಸುಂಟಿಕೊಪ್ಪ: ಕೆ.ಆರ್.ಎಸ್‌ ಪಕ್ಷದಿಂದ ಮತಯಾಚನೆ

| Published : Apr 24 2024, 02:25 AM IST

ಸಾರಾಂಶ

ಕೆಆರ್‌ಎಸ್‌ ಪಕ್ಷದ ವತಿಯಿಂದ ಸೋಮವಾರ ಸಂಜೆ ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಮತದಾರರಲ್ಲಿ ಮತಯಾಚನೆ ನಡೆಯಿತು. ಮನೆ ಮನೆಗೆ ತೆರಳಿ ಭಿತ್ತಿ ಪತ್ರ ನೀಡಿ ಮತಯಾಚನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮಾತ್ರ ಗುರುತಿಸದೇ ಪ್ರಾದೇಶಿಕ ಕೆ.ಆರ್.ಎಸ್‌. ಪಕ್ಷದ ಕಡೆಗೂ ಒಲವು ತೋರಿಸಿದರೆ ಜನ ಸೇವೆ, ದೇಶ ಸೇವೆಗೂ ನಾವು ಕಟ್ಟಿಬದ್ಧರಾಗಿ ಸಿದ್ಧದ್ದರಿದ್ದೇವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಎಸ್.ಪ್ರವೀಣ್ ಹೇಳಿದರು.

ಕೆ.ಆರ್.ಎಸ್‌ ಪಕ್ಷದ ವತಿಯಿಂದ ಸೋಮವಾರ ಸಂಜೆ ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಮತದಾರರಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.

ನಮ್ಮ ಪಕ್ಷ ಕಳೆದ ಹಲವು ವರ್ಷಗಳಿಂದಲೂ ಜನ ಪರವಾದ ಸೇವೆಗಳು ಸೂಕ್ತ ರೀತಿಯಲ್ಲಿ ದೊರಯಬೇಕು ಎಂದು ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತಿದೆ. ಬಡವರ ಸೇವೆ, ಜನಪರ ಕಾಳಜಿಯೊಂದಿಗೆ ನಿರಂತರವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಬಡವರ ಪರವಾಗಿ ನಿಂತಿದ್ದೇವೆ. ಭ್ರಷ್ಟಚಾರದಿಂದ ಕೂಡಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಪಕ್ಷವನ್ನು ತೊಡೆದು ಹಾಕಿ ಪ್ರಾದೇಶಿಕ ಪಕ್ಷವಾದ ಕೆಆರ್ ಎಸ್ ಪಕ್ಷವನ್ನು ಗೆಲ್ಲಿಸಿ ಅರ್ಹ, ಯೋಗ್ಯ ಅಭ್ಯರ್ಥಿಯನ್ನು ನಿಮ್ಮ ಸೇವೆಗೆ ಕಳುಹಿಸಿಕೊಡುವಂತೆ ಮನವಿ ಮಾಡಿದರು.

ಚಾನಲ್‌ಗಳು ಕೂಡ ಕೇವಲ ಕಾಂಗ್ರೆಸ್, ಬಿಜೆಪಿ ಪಕ್ಷದ ಬಗ್ಗೆ ಮಾತ್ರ ಪ್ರಚಾರ ಮಾಡಿ ಭ್ರಷ್ಟರ ಪರ ನಿಂತಿರುವುದು ಸರಿಯಲ್ಲ. ನಾವು ಕೂಡ ಯೋಗ್ಯ, ವಿದ್ಯಾವಂತ ಅಭ್ಯರ್ಥಿಗಳು. ಹಾಗಾಗಿ ನಿಮ್ಮ ಅಮೂಲ್ಯವಾದ ಮತ ನೀಡಿ ಗೆಲ್ಲಿಸುವಂತೆ ಮತದಾರರಲ್ಲಿ ಮತಯಾಚಿಸಿದರು.

ನಂತರ ಪಟ್ಟಣದ ಅಂಗಡಿ, ಮನೆ ಮನೆಗೆ ತೆರಳಿ ಭಿತ್ತಿಪತ್ರ ನೀಡಿ ಮತಯಾಚನೆ ಮಾಡಿದರು. ಪಕ್ಷದ ಕಾರ್ಯಕರ್ತರು ಇದ್ದರು.