ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್‌ ಸರ್ಕಾರ ಆಗಿದೆ. ಆದರೆ, ಬಿಜೆಪಿ ಹಾಗೂ ಪ್ರಧಾನಿ ಮೋದಿ ಬರೀ ಸುಳ್ಳುಗಳನ್ನು ಹೇಳುತ್ತಾ ಕಳೆದ 10 ವರ್ಷಗಳಲ್ಲಿ ಜನರ ದಿಕ್ಕು ತಪ್ಪಿಸಿದ್ದಾರೆ.

ಹೊಸಪೇಟೆ: ಬಳ್ಳಾರಿ ಲೋಕಸಭಾ ಕೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ತುಕಾರಾಂ ತಾಲೂಕಿನ ಗ್ರಾದಿಗನೂರು, ಬೈಲುವದ್ದಿಗೇರಿ, ಪಾಪಿನಾಯಕನಹಳ್ಳಿ, ಗ್ರಾಮಗಳಲ್ಲಿ ಶನಿವಾರ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿರಾಜ್‌ ಶೇಕ್‌ ಮಾತನಾಡಿ, ಕಾಂಗ್ರೆಸ್‌ ಪಕ್ಷ ಐದು ಗ್ಯಾರಂಟಿಗಳನ್ನು ಈಗಾಗಲೇ ಈಡೇರಿಸಿದೆ. ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್‌ ಸರ್ಕಾರ ಆಗಿದೆ. ಆದರೆ, ಬಿಜೆಪಿ ಹಾಗೂ ಪ್ರಧಾನಿ ಮೋದಿ ಬರೀ ಸುಳ್ಳುಗಳನ್ನು ಹೇಳುತ್ತಾ ಕಳೆದ 10 ವರ್ಷಗಳಲ್ಲಿ ಜನರ ದಿಕ್ಕು ತಪ್ಪಿಸಿದ್ದಾರೆ. ಇಡೀ ದೇಶದಲ್ಲಿ ಈ ಬಾರಿ ಮೋದಿ ಅಲೆ ಇಲ್ಲ. ಜನರು ಬದಲಾವಣೆ ಬಯಸಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚನೆಯಾಗಲಿದೆ. ಬಳ್ಳಾರಿಯಿಂದ ಕಾಂಗ್ರೆಸ್‌ ಅಭ್ಯರ್ಥಿ ತುಕಾರಾಂ ಅವರನ್ನು ಗೆಲ್ಲಿಸಿ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿಗೆ ಉಡುಗೊರೆ ನೀಡೋಣ ಎಂದರು.

ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ ಮಾತನಾಡಿದರು.

ಮುಖಂಡರಾದ ಕೆಎಸ್‌ಎಲ್‌ ಸ್ವಾಮಿ, ಎಚ್.ಆರ್. ಗುರುದತ್ತ, ಕೆ.ಎಂ. ಹಾಲಪ್ಪ, ನಿಂಬಗಲ್ ರಾಮಕೃಷ್ಣ, ವಿನಾಯಕ ಶೆಟ್ಟರ್, ಖಾಜಾ ಹುಸೇನ್, ಡಿ.ವೆಂಕಟರಮಣ, ಎಲ್.ಸಿದ್ದನಗೌಡ, ಬಿ.ಮಾರೆಣ್ಣ, ತಮ್ಮನ್ನಳಪ್ಪ, ಬಣ್ಣದಮನೆ ಸೋಮಶೇಖರ್, ವಿ.ಸೋಮಪ್ಪ, ಎಚ್.ಮಹೇಶಕುಮಾರ್, ಗೋವಿಂದರಾಜ್, ಕೆ.ರಮೇಶ, ಮರಡಿ ಮಂಜುನಾಥ, ಸಣ್ಣ ಈರಪ್ಪ, ಧನರಾಜ್, ಮಲಿಯಪ್ಪ, ಅಂಕ್ಲೇಶ್ ನಾಯಕ, ಹನುಮಂತ ರೆಡ್ಡಿ, ಮುರಳೀಧರ, ಪ್ರಮೋದ್ ಪುಣ್ಯ ಮೂರ್ತಿ,

ಕೋರಿ ಶಿವರಾಮಪ್ಪ, ಪರಶುರಾಮ, ಸದ್ದಾಂ ಹುಸೇನ್, ಅಬ್ದುಲ್ ಜಲೀಲ್, ಖಾಜಾ ಹುಸೇನ್, ನೀಲಕಂಠ ಇದ್ದರು.