ಕ್ರಿಯಾಶೀಲ ಜನಪ್ರತಿನಿಧಿ ಅನುಭವದಿಂದ ಮತಯಾಚನೆ

| Published : May 29 2024, 12:50 AM IST

ಕ್ರಿಯಾಶೀಲ ಜನಪ್ರತಿನಿಧಿ ಅನುಭವದಿಂದ ಮತಯಾಚನೆ
Share this Article
  • FB
  • TW
  • Linkdin
  • Email

ಸಾರಾಂಶ

3 ಬಾರಿ ಶಾಸಕನಾಗಿ, ಅತ್ಯಂತ ಕ್ರಿಯಾಶೀಲ ಜನಪ್ರತಿನಿಧಿಯಾಗಿ ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದೆನೆ. ಈ ಅನುಭವದಿಂದಲೇ 2024ರ ವಿಧಾನ ಪರಿಷತ್ತು ಚುನಾವಣೆ ನೈರುತ್ಯ ಪದವೀಧರರ ಕ್ಷೇತ್ರ ಅಭ್ಯರ್ಥಿಯಾಗಿ ಈ ಬಾರಿ ಸ್ಪರ್ಧಿಸಿದ್ದೇನೆ ಎಂದು ಅಭ್ಯರ್ಥಿ ಕೆ.ರಘುಪತಿ ಭಟ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಮತದಾರರು ಸಾಧನೆ ಪರಿಗಣಿಸಿ ಮತ ನೀಡಲಿ: ಅಭ್ಯರ್ಥಿ ರಘುಪತಿ ಭಟ್‌ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

3 ಬಾರಿ ಶಾಸಕನಾಗಿ, ಅತ್ಯಂತ ಕ್ರಿಯಾಶೀಲ ಜನಪ್ರತಿನಿಧಿಯಾಗಿ ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದೆನೆ. ಈ ಅನುಭವದಿಂದಲೇ 2024ರ ವಿಧಾನ ಪರಿಷತ್ತು ಚುನಾವಣೆ ನೈರುತ್ಯ ಪದವೀಧರರ ಕ್ಷೇತ್ರ ಅಭ್ಯರ್ಥಿಯಾಗಿ ಈ ಬಾರಿ ಸ್ಪರ್ಧಿಸಿದ್ದೇನೆ ಎಂದು ಅಭ್ಯರ್ಥಿ ಕೆ.ರಘುಪತಿ ಭಟ್ ಹೇಳಿದರು.

ಮಂಗಳವಾರ ಪಟ್ಟಣದ ವಾಲ್ಮೀಕಿ ಭವನದಲ್ಲಿ ಮತದಾರರು, ಕಾರ್ಯಕರ್ತರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ಶಾಸಕನಾಗಿ ಸಾಧನೆ ಮಾಡಿರುವ ಆಧಾರದ ಮೇಲೆ ಮತದಾರರು ಮತ ನೀಡುವಂತೆ ಮನವಿ ಮಾಡಿದರು.

ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಸಂಪರ್ಕ ಹೊಂದಿದ್ದೇನೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ ಕ್ಷೇತ್ರಗಳ ಪರಿಚಯ ಕಡಿಮೆ ಇತ್ತು. ಆದರೆ, ವಿಪ ಚುನಾವಣೆ ನೈರುತ್ಯ ಪದವೀಧರ ಕ್ಷೇತ್ರ ಅಭ್ಯರ್ಥಿಯಾಗಿ ಈ ಕ್ಷೇತ್ರಗಳಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅಭಿಮಾನಿಗಳು, ಕಾರ್ಯಕರ್ತರ ಬೆಂಬಲ, ಹುಮ್ಮಸ್ಸು ಕಂಡು ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ ಎಂದರು.

ಹಿಜಾಬ್ ಸಮಸ್ಯೆ ಮೊದಲು ಎದುರಾದದ್ದೇ ಉಡುಪಿ ಜಿಲ್ಲೆಯಲ್ಲಿ. ಈ ಸಮಸ್ಯೆ ಸೇರಿದಂತೆ ಅನೇಕ ರಾಷ್ಟ್ರೀಯ ವಿಚಾರಗಳು ಬಂದಾಗ ಗಟ್ಟಿ ದನಿಯಾಗಿ ನಿಂತು ಸಮಸ್ಯೆಗಳನ್ನು ಎದುರಿಸಿದ್ದೇನೆ. ಜನಪ್ರತಿನಿಧಿಯಾಗಿ ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ಈ ಬಾರಿ ಪದವೀಧರ ಮತದಾರರು ತನ್ನ ಗೆಲುವಿಗೆ ಶ್ರಮಿಸಬೇಕು. ಸ್ಪಂದಿಸಿದಲ್ಲಿ ತಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಬಿಜೆಪಿ ಮುಖಂಡರಾದ ನಾರಾಯಣಪ್ಪ, ಉಮಾನಾಥ್, ಬಿಂಬ ಮಂಜುನಾಥ, ವಕೀಲರಾದ ಶಾಂತವೀರಪ್ಪ, ಮಂಜುನಾಥ, ಕತ್ತಿಗೆ ನಾಗರಾಜ್, ದತ್ತಣ್ಣ, ಅಶ್ವಿನಿ, ಮಾಜಿ ಸೈನಿಕ ವಾಸಪ್ಪ, ಕಾರ್ಯಕರ್ತರು ಇದ್ದರು.

- - - -28ಎಚ್.ಎಲ್.ಐ1:

ಹೊನ್ನಾಳಿ ಪಟ್ಟಣದ ವಾಲ್ಮೀಕಿ ಭವನದಲ್ಲಿ ಮಂಗಳವಾರ ವಿ.ಪ. ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಕೆ.ರಘುಪತಿ ಭಟ್ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.