ಹಾವೇರಿ ನಗರದಲ್ಲಿ ಕ್ಲಿನಿಕ್ ನಡೆಸಲು ಸಂಬಂಧಿಸಿದಂತೆ ಬಿ.ಎಂ.ಡಬ್ಲ್ಯೂ ಪ್ರಮಾಣಪತ್ರ ನೀಡಲು ₹10 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯ ಮಹಿಳಾ ಸಿಬ್ಬಂದಿಯೊಬ್ಬರು ಮುಂಗಡವಾಗಿ ₹6 ಸಾವಿರ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಹಾವೇರಿ:ನಗರದಲ್ಲಿ ಕ್ಲಿನಿಕ್ ನಡೆಸಲು ಸಂಬಂಧಿಸಿದಂತೆ ಬಿ.ಎಂ.ಡಬ್ಲ್ಯೂ ಪ್ರಮಾಣಪತ್ರ ನೀಡಲು ₹10 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯ ಮಹಿಳಾ ಸಿಬ್ಬಂದಿಯೊಬ್ಬರು ಮುಂಗಡವಾಗಿ ₹6 ಸಾವಿರ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.ಸವಿತಾ ಬೆಳ್ಳಿಗಟ್ಟಿ ಎಂಬುವವರೇ ಲೋಕಾಯುಕ್ತ ಬಲೆಗೆ ಬಿದ್ದಿರುವ ಸಿಬ್ಬಂದಿ. ಹಾವೇರಿ ನಗರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಲಂಚ ಪಡೆಯುತ್ತಿರುವಾಗ ಸವಿತಾ ಬೆಳ್ಳಿಗಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹಾವೇರಿಯ ದೂರುದಾರ ನವೀನ್ ಎ.ಎಚ್. ಎಂಬುವವರು ತನ್ನ ಸಹೋದರ ಡಾ. ನಿಖಿಲ್ ಎ.ಎಚ್. ಅವರಿಗೆ ಹಾವೇರಿ ನಗರದಲ್ಲಿ ನಡೆಸುತ್ತಿರುವ ಕ್ಲಿನಿಕ್‌ಗೆ ಸಂಬಂಧಿಸಿದಂತೆ ಬಿ.ಎಂ.ಡಬ್ಲೂ (ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜಮೆಂಟ್ ಸರ್ಟಿಫಿಕೆಟ್) ಪ್ರಮಾಣಪತ್ರ ನೀಡಲು ಸವಿತಾ ಬೆಳ್ಳಿಗಟ್ಟಿ ಅವರು ₹10 ಸಾವಿರಕ್ಕ ಬೇಡಿಕೆ ಇಟ್ಟಿದ್ದರು. ನಂತರ ₹6 ಸಾವಿರ ಗಳಿಗೆ ಒಪ್ಪಿಕೊಂಡು ಮಂಗಳವಾರ ಕಚೇರಿಯಲ್ಲಿ ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರು ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದಾರೆ. ಆರೋಪಿತರನ್ನು ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.ದಾವಣಗೆರೆಯ ಲೋಕಾಯುಕ್ತ ಎಸ್.ಪಿ ಎಂ.ಎಸ್.ಕೌಲಾಪುರೆ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಸಿ.ಮಧುಸೂದನ ನೇತೃತ್ವದಲ್ಲಿ ಪ್ರಕರಣದ ತನಿಖೆಯನ್ನು ಕೈಗೊಳ್ಳಲಾಗಿತ್ತು. ತನಿಖಾಧಿಕಾರಿಗಳಾದ ಪೊಲೀಸ್ ನಿರೀಕ್ಷಕರಾದ ಎಸ್.ಎ. ಪಾಟೀಲ, ದಾದಾವಲಿ ಕೆ.ಎಚ್., ಸಿಬ್ಬಂದಿಯವರಾದ ಸಿ.ಎಂ.ಬಾರ್ಕಿ, ಎಂ.ಕೆ.ನದಾಫ, ಟಿ.ಇ. ತಿರುಮಲೆ, ಎಸ್.ಸಿ. ಮುಗದೂರು, ಬಿ.ಎಂ.ಕರ್ಜಗಿ, ಎಂ.ಕೆ.ಲಕ್ಷ್ಮೇಶ್ವರ, ಎಸ್.ಎನ್. ಕಡಕೋಳ, ಬಿ.ಎಸ್. ಸಂಕಣ್ಣನವರ, ಎಂ.ಎಸ್.ಕೊಂಬಳಿ, ಎ.ಜಿ. ಶೆಟ್ಟರ್, ಎಸ್.ಎಸ್. ಲಿಂಗಮ್ಮನವರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರೆಂದು ಲೋಕಾಯುಕ್ತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.