ಪರಿಸರ ಜಾಗೃತಿಗೆ ಮಾಲಿನ್ಯದ ಮಹಾರಾಜ ಅಭಿಯಾನ: ಸಂತೋಷ್ ಕುಮಾರ್

| Published : Feb 02 2025, 11:46 PM IST

ಪರಿಸರ ಜಾಗೃತಿಗೆ ಮಾಲಿನ್ಯದ ಮಹಾರಾಜ ಅಭಿಯಾನ: ಸಂತೋಷ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಪಟ್ಟಣ ಹಾಗೂ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ ಕಸ ಹಾಕಿ ಪರಿಸರ ಮಾಲಿನ್ಯ ಮಾಡುವವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾಲಿನ್ಯದ ಮಹಾರಾಜ ಎಂಬ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಲ್ನಾಡ್ ಗೆಳೆಯರ ಬಳಗದ ಮುಖ್ಯಸ್ಥ ಬಿ.ಸಿ. ಸಂತೋಷ್ ಕುಮಾರ್ ತಿಳಿಸಿದರು.

ಸ್ವಚ್ಛ ಬಾಳೆಹೊನ್ನೂರಿಗೆ ಮಲ್ನಾಡ್ ಗೆಳೆಯರ ಬಳಗದಿಂದ ವಿಶೇಷ ಕಾರ್ಯಕ್ರಮಕ್ಕೆ ಚಾಲನೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣ ಹಾಗೂ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ ಕಸ ಹಾಕಿ ಪರಿಸರ ಮಾಲಿನ್ಯ ಮಾಡುವವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾಲಿನ್ಯದ ಮಹಾರಾಜ ಎಂಬ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಲ್ನಾಡ್ ಗೆಳೆಯರ ಬಳಗದ ಮುಖ್ಯಸ್ಥ ಬಿ.ಸಿ. ಸಂತೋಷ್ ಕುಮಾರ್ ತಿಳಿಸಿದರು.ಮಾಲಿನ್ಯದ ಮಹಾರಾಜ ಜಾಗೃತಿ ಅಭಿಯಾನದ ಬ್ಯಾನರ್ ಅನ್ನು ಬಿ.ಕಣಬೂರು ಗ್ರಾಪಂ ಆವರಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.ಫೆ.1ರಿಂದ ಆರಂಭವಾಗಿದ್ದು 28ರವರೆಗೆ ಮಾಲಿನ್ಯದ ಮಹಾರಾಜ ಜಾಗೃತಿ ಅಭಿಯಾನ ನಡೆಯಲಿದೆ. ಮಲ್ನಾಡ್ ಗೆಳೆಯರ ಬಳಗ, ಪೊಲೀಸ್ ಠಾಣೆ ಹಾಗೂ ಬಿ.ಕಣಬೂರು ಗ್ರಾಪಂನ ಸಹಯೋಗದಲ್ಲಿ ವಿಶೇಷ ಅಭಿಯಾನ ಆರಂಭಿಸಲಾಗಿದೆ. ಬಾಳೆಹೊನ್ನೂರು ಪಟ್ಟಣದ ಸೌಂದರ್ಯ ಮತ್ತು ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಈ ಅಭಿಯಾನ ಆರಂಭಿಸಿದ್ದು, ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ರಸ್ತೆ ಬದಿ, ಕೆರೆ, ಹಳ್ಳ, ನದಿ ಮುಂತಾದ ಕಡೆಗಳಲ್ಲಿ ಕಸವನ್ನು ಹಾಕಿ ಪರಿಸರ ಮಾಲಿನ್ಯ ಮಾಡುವವರನ್ನು ಗುರುತಿಸಿ ಅಂತಹ ವ್ಯಕ್ತಿ ಗಳಿಗೆ ಮಾಲಿನ್ಯದ ಮಹಾರಾಜ ಎಂಬ ಬಿರುದು ನೀಡಿ(ವ್ಯಂಗ್ಯವಾಗಿ) ಗೌರವಿಸಲಾಗುವುದು.ಬಾಳೆಹೊನ್ನೂರು ಪಟ್ಟಣ ಹಾಗೂ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ ಕಸ ಬಿಸಾಡುವವರ ಅಥವಾ ಪರಿಸರ ಮಾಲಿನ್ಯ ಮಾಡುವ ವ್ಯಕ್ತಿಗಳ ಫೋಟೋ ಅಥವಾ ವಿಡಿಯೋ ಸೆರೆ ಹಿಡಿದು 8277377722, 94448823867, 9380569687 ಮೊಬೈಲ್ ಸಂಖ್ಯೆಗಳಿಗೆ ಕಳುಹಿಸಬಹುದು. ಫೋಟೋ ಅಥವಾ ವಿಡಿಯೋದಲ್ಲಿ ಪರಿಸರ ಮಾಲಿನ್ಯ ಮಾಡುತ್ತಿರುವ ವ್ಯಕ್ತಿಯನ್ನು ಗುರುತಿಸಿ ಅವರಿಗೆ ಮಾಲಿನ್ಯದ ಮಹಾರಾಜ ಬಿರುದು ನೀಡಲಾಗುವುದು. ಫೋಟೋ, ವಿಡಿಯೋ ಮಾಡಿ ಮಾಹಿತಿ ಕೊಟ್ಟವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.ನಮ್ಮ ಗ್ರಾಮ ಕಸ ಮುಕ್ತವಾಗಿ ಸ್ವಚ್ಛ ಪಟ್ಟಣವಾಗಿ ಇರಬೇಕು ಎಂಬ ಉದ್ದೇಶದಿಂದ ಇಂತಹ ವಿನೂತನ ಜಾಗೃತಿ ಅಭಿಯಾನ ಆರಂಭಿಸಿದ್ದು, ಪ್ರತಿಯೊಬ್ಬ ಗ್ರಾಮಸ್ಥರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಿದೆ ಎಂದು ತಿಳಿಸಿದರು.ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಮುಂದಿನ ಏಳೆಂಟು ತಿಂಗಳಲ್ಲಿ ಸ್ವಚ್ಛ ಬಾಳೆಹೊನ್ನೂರಿನ ಗುರಿ ನಮ್ಮ ಮುಂದಿದ್ದು, ಈ ಗುರಿಗೆ ಪೂರಕವಾಗಿ ಮಲ್ನಾಡ್ ಗೆಳೆಯರ ಬಳಗ ಆಯೋಜಿಸಿರುವ ವಿಶೇಷ ಅಭಿಯಾನ ಗ್ರಾಪಂಗೆ ಸಹಕಾರಿಯಾಗಲಿದೆ. ಸ್ವಚ್ಛ ಗ್ರಾಮವನ್ನು ರೂಪಿಸಿರುವುದು ಪ್ರತಿಯೊಬ್ಬ ಜವಾಬ್ದಾರಿ ನಾಗರಿಕರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಗೆಳೆಯರ ಬಳಗ ಆಯೋಜಿಸಿರುವ ಅಭಿಯಾನಕ್ಕೆ ಗ್ರಾಪಂ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಬಿ.ಕಣಬೂರು ಗ್ರಾಪಂ ಸದಸ್ಯರಾದ ಬಿ.ಕೆ.ಮಧುಸೂದನ್, ಇಬ್ರಾಹಿಂ ಶಾಫಿ, ಎಂ.ಎಸ್.ಅರುಣೇಶ್, ಪಿಡಿಓ ಕಾಶಪ್ಪ, ಕಾರ್ಯದರ್ಶಿ ರಾಮಪ್ಪ ಮತ್ತಿತರರು ಹಾಜರಿದ್ದರು.೨೯ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಮಲ್ನಾಡ್ ಗೆಳೆಯರ ಬಳಗ ಆಯೋಜಿಸಿರುವ ಮಾಲಿನ್ಯದ ಮಹಾರಾಜ ಜಾಗೃತಿ ಅಭಿಯಾನದ ಬ್ಯಾನರ್ ಅನ್ನು ಗ್ರಾಪಂ ಅಧ್ಯಕ್ಷ ರವಿಚಂದ್ರ, ಗೆಳೆಯರ ಬಳಗದ ಮುಖ್ಯಸ್ಥ ಬಿ.ಸಿ.ಸಂತೋಷ್‌ಕುಮಾರ್ ಬಿಡುಗಡೆಗೊಳಿಸಿದರು. ಮಧುಸೂದನ್, ಅರುಣೇಶ್, ಇಬ್ರಾಹಿಂ ಶಾಫಿ, ಕಾಶಪ್ಪ ಇದ್ದರು.