ಪೊನ್ನಂಪೇಟೆ: ಜಿಲ್ಲಾ ಮಟ್ಟದ ಟೇಬಲ್‌ ಟೆನಿಸ್‌ ಪಂದ್ಯಾವಳಿ

| Published : May 22 2024, 12:54 AM IST / Updated: May 22 2024, 12:55 AM IST

ಪೊನ್ನಂಪೇಟೆ: ಜಿಲ್ಲಾ ಮಟ್ಟದ ಟೇಬಲ್‌ ಟೆನಿಸ್‌ ಪಂದ್ಯಾವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ ನಡೆಯಿತು. ಸುಮಾರು 120 ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದರು. ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ, ಡಾ.ಈಶ್ವರ ಕೆ.ಎ., ಹಾಕಿ ಕ್ರೀಡಾಪಟು ಕೆ.ಟಿ.ಮೋಹನ್ ಮತ್ತಿತರರು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಮಾರೋಪ ಸಮಾರಂಭದಲ್ಲಿ ಡಾ.ರಾಮಕೃಷ್ಣ ಹೆಗ್ಡೆ, ಮಹೇಶ್ ಹೊಳ್ಳ, ಸುಬ್ರಮಣಿ, ಡಾ.ಮಹೇಶ್ವರಪ್ಪ, ಕೊಡಗು ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಷಿಯೇಷನ್‌ ಗೌರವಾಧ್ಯಕ್ಷ ವಿ.ಎಸ್.ಮೊಹಮ್ಮದ್ ಆಸೀಫ್‌, ಪಿ.ಎಲ್.ಮಂಜುನಾಥ್, ಕೆ.ಎನ್.ಪ್ರವೀಣ್ ಶೇಟ್ ಮತ್ತಿತರರ ಉಪಸ್ಥಿತಿಯಲ್ಲಿ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಫಲಿತಾಂಶದ ವಿವರ ಇಂತಿದೆ: 10 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಚಿರಂಜೀವಿ(ಪ್ರಥಮ), ದರ್ಶನ್(ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ಲಿಪಿಕಾ ಕೆ.(ಪ್ರಥಮ), ಲಾವಣ್ಯ(ದ್ವಿತೀಯ).

15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಲಿತಶ್ ಕೆ.(ಪ್ರಥಮ), ಅವನೀಶ್(ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ಸಿಂಚನಾ (ಪ್ರಥಮ), ಲೋಚನಾ(ದ್ವಿತೀಯ). 18 ವರ್ಷದೊಳಗಿನವರಲ್ಲಿ ಸಹದ್ ಶಬೀರ್ (ಪ್ರಥಮ), ಲಿತೇಶ್ ಕೆ. (ದ್ವಿತೀಯ), 25 ವರ್ಷದೊಳಗಿನವರಲ್ಲಿ ಲಿತೇಶ್ ಕೆ. (ಪ್ರಥಮ), ಅದೀಬ್ ವಸೀಂ(ದ್ವಿತೀಯ), ರಕ್ಷಿತಾ(ಪ್ರಥಮ), ಸಿಂಚನಾ(ದ್ವಿತೀಯ).

ಮುಕ್ತ: ರಚನ್ ಪೊನ್ನಪ್ಪ (ಪ್ರಥಮ), ಈಶ್ವರ ಕೆ.ಎ. (ದ್ವಿತೀಯ). ಮುಕ್ತ ಡಬಲ್ಸ್ ಪುರುಷ : ರಚನೆ ಪೊನ್ನಪ್ಪ ಮತ್ತು ಡೆರಿಕ್(ಪ್ರಥಮ), ಮಂಜುನಾಥ್ ಮತ್ತು ವರುಣ್ ಸುಧಾಕರ(ದ್ವಿತೀಯ).

ಮಿಕ್ಸ್ಡ್ ಡಬಲ್ಸ್: ಈಶ್ವರ ಮತ್ತು ರಕ್ಷಿತಾ (ಪ್ರಥಮ), ರಚನ್ ಪೊನ್ನಪ್ಪ ಮತ್ತು ನಮಿತಾ (ದ್ವಿತೀಯ), ಮುಕ್ತ ಡಬಲ್ಸ್ ಮಹಿಳೆಯರು: ತಂಗಮ್ಮ ಮತ್ತು ರೀತ್ ಗಣಪತಿ(ಪ್ರಥಮ), ನಮಿತಾ ಮತ್ತು ಮನಾಸಾ (ದ್ವಿತೀಯ), 50 ವರ್ಷ ಮೇಲ್ಪಟ್ಟವರಲ್ಲಿ ಪ್ರವೀಣ್ ಶೆಟ್ (ಪ್ರಥಮ), ಮಹಮದ್ ಅನಿಪ್(ದ್ವಿತೀಯ) ಸ್ಥಾನ ಪಡೆದುಕೊಂಡಿದ್ದಾರೆ.