ಸಾರಾಂಶ
ರಾಮನಗರ: ತಾಲೂಕಿನ ಪೂಜಾರಿದೊಡ್ಡಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ದಾಂಧಲೆ ನಡೆಸಿರುವ ಘಟನೆ ನಡೆದಿದೆ.ಗ್ರಾಮದ ರೈತ ಗಂಗಾಧರ್ ಅವರಿಗೆ ಸೇರಿದ ಜಮೀನಿನಲ್ಲಿ ಮಾವಿನ ಮರ, ತೆಂಗಿನಮರಗಳನ್ನು ಅಪಾರ ಪ್ರಮಾಣದಲ್ಲಿ ನಾಶ ಪಡಿಸಿ ನಷ್ಟ ಉಂಟು ಮಾಡಿವೆ.
ರಾಮನಗರ: ತಾಲೂಕಿನ ಪೂಜಾರಿದೊಡ್ಡಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ದಾಂಧಲೆ ನಡೆಸಿರುವ ಘಟನೆ ನಡೆದಿದೆ.
ಗ್ರಾಮದ ರೈತ ಗಂಗಾಧರ್ ಅವರಿಗೆ ಸೇರಿದ ಜಮೀನಿನಲ್ಲಿ ಮಾವಿನ ಮರ, ತೆಂಗಿನಮರಗಳನ್ನು ಅಪಾರ ಪ್ರಮಾಣದಲ್ಲಿ ನಾಶ ಪಡಿಸಿ ನಷ್ಟ ಉಂಟು ಮಾಡಿವೆ.ಕಳೆದ ಕೆಲವು ತಿಂಗಳಿಂದ ತೆಂಗಿನಕಲ್ಲು ಅರಣ್ಯ ಸೇರಿರುವ ಆನೆಗಳ ಹಿಂಡು ಎರಡು, ಮೂರು, ಐದು ಹೀಗೆ ವಿಂಗಡನೆಯಾಗಿ ಅಕ್ಕಪಕ್ಕದ ಗ್ರಾಮಗಳ ಮೇಲೆ ರಾತ್ರಿ ವೇಳೆ ದಾಂಗುಡಿ ಇಟ್ಟು ದಾಳಿ ನಡೆಸುತ್ತಿವೆ.
ಆನೆಗಳ ಹಿಂಡು ಹಿಂಡು ತೆಂಗಿನಕಲ್ಲು ಅರಣ್ಯಕ್ಕೆ ಬರುತ್ತಿದ್ದು ಅರಣ್ಯ ಇಲಾಖೆ ತೆಂಗಿನಕಲ್ಲು ಅರಣ್ಯದಿಂದ ಸ್ವಸ್ಥಾನಕ್ಕೆ ಮರಳದೆ ಬೆಳೆ ನಾಶದಲ್ಲಿ ತೊಡಗಿವೆ. ಇದರಿಂದ ರೈತರು ಕಷ್ಟಪಟ್ಟು ಬೆಳೆಸಿದ ತೆಂಗಿನಮರ, ಮಾವಿನಮರ ನಾಶವಾಗುತ್ತಿವೆ. ಅರಣ್ಯ ಇಲಾಖೆ ಆನೆಗಳನ್ನು ಅವುಗಳ ಸ್ವಸ್ಥಾನಕ್ಕೆ ಅಟ್ಟಬೇಕೆಂದು ರೈತರು ಆಗ್ರಹಿಸಿದರು.ವಿಷಯ ತಿಳಿದು ಸ್ಥಳಕ್ಕೆ ಚನ್ನಪಟ್ಟಣ ವಲಯ ಅರಣ್ಯದ ಉಪ ವಲಯಾರಣ್ಯಾಧಿಕಾರಿ ವೆಂಕಟೇಶ್, ಅರಣ್ಯ ರಕ್ಷಕರಾದ ದಿಲೀಪ್ ಮತ್ತು ಇತರ ಅಧಿಕಾರಿಗಳು ಆಗಮಿಸಿ ರೈತರಿಂದ ಅಹವಾಲು ಆಲಿಸಿದರು.4ಕೆಆರ್ ಎಂಎನ್ 5.ಜೆಪಿಜಿ
ಕಾಡಾನೆ ದಾಳಿಗೆ ತೆಂಗಿನ ಮರ ಹಾನಿಯಾಗಿರುವುದು.