ಬಡ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಸಿಗಲಿ

| Published : Jan 07 2025, 12:15 AM IST

ಸಾರಾಂಶ

ಎಲ್ ಕೆ ಜಿ ,ಯುಕೆಜಿ ಹಂತದಿಂದಲೇ ಕನ್ನಡದ ಜೊತೆಯಲ್ಲಿ ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡುವಂತಹ ಕೆಲಸ ಆಗಬೇಕು ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯಪಟ್ಟರು

ಅರಸೀಕೆರೆ: ಎಲ್ ಕೆ ಜಿ ,ಯುಕೆಜಿ ಹಂತದಿಂದಲೇ ಕನ್ನಡದ ಜೊತೆಯಲ್ಲಿ ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡುವಂತಹ ಕೆಲಸ ಆಗಬೇಕು ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯಪಟ್ಟರು

ತಾಲೂಕಿನ ಬಾಣಾವರ ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಖಾಸಗಿ ಶಾಲೆಗಳ ಹಾವಳಿಯಲ್ಲಿಯೂ ಸಹ ಇಂದು ವಸತಿ ಶಾಲೆಗಳು ಖಾಸಗಿ ಶಾಲೆಗಳಿಗೆ ಯಾವ ಹಂತದಲ್ಲೂ ಕಡಿಮೆ ಇಲ್ಲದ ರೀತಿಯಲ್ಲಿ ವಿದ್ಯಾಭ್ಯಾಸದ ಜೊತೆ ಜೊತೆಗೆ ಆಟ ಮತ್ತು ಸಾಂಸ್ಮಿಕ ಸ್ಪರ್ಧೆಗಳಲ್ಲಿಯೂ ಸಹ ಉತ್ತಮ ರೀತಿಯಾದ ಪೈಪೋಟಿಯನ್ನು ನೀಡುತ್ತಿದ್ದು ಮುಂಚೂಣಿಯಲ್ಲಿವೆ. ಅಲ್ಲದೆ ದೇಶ ಅಭಿವೃದ್ಧಿಯಾಗಬೇಕಾದರೆ ಶಾಲೆಗಳು ಅಭಿವೃದ್ಧಿ ಆಗಬೇಕು ಎಂದರು.

ಮೊದಲು ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯನ್ನು ತೆರೆಯುವ ಮುಂಚೆ ಬಡ ಮಕ್ಕಳಿಗೂ ಸಹ ಉನ್ನತ ಮಟ್ಟದ ಶಿಕ್ಷಣ ಸಿಗಬೇಕು. ಎಲ್ಲರೂ ಸಹ ಶಿಕ್ಷಣದಿಂದ ಸೌಲಭ್ಯವನ್ನು ಪಡೆದುಕೊಂಡು ಸುಶಿಕ್ಷಿತರಾಗಬೇಕೆಂಬ ಮಹಾದಾಸೆಯನ್ನು ಇಟ್ಟುಕೊಂಡು ರಾಜ್ಯದಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸಲಾಯಿತು. ಈ ನಿಟ್ಟಿನಲ್ಲಿ ಕಿತ್ತೂರು ರಾಣಿ ವಸತಿ ಶಾಲೆಯನ್ನು ಇಲ್ಲಿ ಪ್ರಾರಂಭಿಸಿ ಈಗಾಗಲೇ ಸಾವಿರಾರು ಮಕ್ಕಳು ಇದರ ಉಪಯೋಗವನ್ನು ಪಡೆದುಕೊಂಡಿರುವುದು ಜೊತೆಗೆ ಉತ್ತಮವಾದ ಭವಿಷ್ಯವನ್ನು ಕಂಡುಕೊಂಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ವಸತಿ ಶಾಲೆಗಳಲ್ಲಿ ಕಾಲೇಜುಗಳನ್ನು ನೀಡುವಂತಹ ಪ್ರಕ್ರಿಯೆ ಪ್ರಾರಂಭವಾಗಲಿದೆ ಈಗಾಗಲೇ ಹಲವು ವಸತಿ ಶಾಲೆಗಳಲ್ಲಿ ಕಾಲೇಜುಗಳನ್ನು ಪ್ರಾರಂಭಿಸಲಾಗಿದ್ದು ಮುಂದಿನ ದಿನಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೂ ಸಹ ಕಾಲೇಜು ವಿದ್ಯಾಭ್ಯಾಸವನ್ನು ಪ್ರಾರಂಭಿಸಲು ಚಿಂತಿಸಲಾಗುವುದು ಹಾಗೂ ಹೋರಾಟವನ್ನು ಮಾಡಲಾಗುವುದು ಎಂದು ಹೇಳಿದರು

ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಯುವಜನತೆಯ ಸದೃಢರಾಗುವ ಉದ್ದೇಶದಿಂದ ವಸತಿ ಶಾಲೆಗಳಿಗೆ ಬೇಕಾದಂತಹ ಪೂರಕವಾದ ಸೌಲಭ್ಯವನ್ನು ಒದಗಿಸಲು ಸದಾ ಸಿದ್ದರಾಗಿದ್ದು ಸರ್ಕಾರವು ಸಹ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸುತ್ತಿದೆ ಇದರ ಉಪಯೋಗವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು

ಕಾರ್ಯಕ್ರಮದಲ್ಲಿ ಕಾಚಿಘಟ್ಟ ಗ್ರಾ, ಪಂ. ಅಧ್ಯಕ್ಷ ಭಾಗ್ಯಮ್ಮ ಉಪಾಧ್ಯಕ್ಷ ಸೋಮಣ್ಣ ಸದಸ್ಯರಾದ ಬಸವರಾಜ್ ಶಿವಶಂಕರ್ ಮಹೇಶ್ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಿಶಿವಮೂರ್ತಿ ವಸತಿ ಶಾಲೆಗಳ ಸಂಘದ ರಾಜ್ಯಾಧ್ಯಕ್ಷ ರವಿಚಂದ್ರ ವಸತಿ ಶಾಲೆಗಳ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿಎನ್ ಉಷಾ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಜೈಪ್ರಕಾಶ್ ಸೇರದಂತೆ ವಸತಿ ಶಾಲೆಯ ಶಿಕ್ಷಕ ವೃಂದ ಹಾಗೂ ಬೋಧಕೇತರ ವೃಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು