ಕಾಲೋನಿ ರಸ್ತೆಗಳ ದುಸ್ಥಿತಿ: ದಲಿತ ಮುಖಂಡರ ಆಕ್ಷೇಪ

| Published : Jan 30 2025, 01:47 AM IST

ಕಾಲೋನಿ ರಸ್ತೆಗಳ ದುಸ್ಥಿತಿ: ದಲಿತ ಮುಖಂಡರ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರು ನೆಲೆಸಿರುವ ಕಾಲೋನಿಗಳ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳುವ ಅಧಿಕಾರಿಗಳು, ಇದುವರೆಗೂ ಎಸ್‌ಸಿಪಿ, ಎಸ್‌ಟಿಪಿ ಯೋಜನೆಯಡಿ ಕ್ರೀಯಾ ಯೋಜನೆ ಕಾಮಗಾರಿಗಳಿಗೆ ಚಾಲನೆ ನೀಡದ ಕಾರಣ ರಸ್ತೆಗಳು ಹಳ್ಳ, ದಿನ್ನೆಗಳಿಂದ ಕೂಡಿವೆ ಎಂದು ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಜಯಪುರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರು ನೆಲೆಸಿರುವ ಕಾಲೋನಿಗಳ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳುವ ಅಧಿಕಾರಿಗಳು, ಇದುವರೆಗೂ ಎಸ್‌ಸಿಪಿ, ಎಸ್‌ಟಿಪಿ ಯೋಜನೆಯಡಿ ಕ್ರೀಯಾ ಯೋಜನೆ ಕಾಮಗಾರಿಗಳಿಗೆ ಚಾಲನೆ ನೀಡದ ಕಾರಣ ರಸ್ತೆಗಳು ಹಳ್ಳ, ದಿನ್ನೆಗಳಿಂದ ಕೂಡಿವೆ ಎಂದು ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟರ ಕಾಲೋನಿಗಳು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಲೆಕ್ಕಕ್ಕೆ ಇಲ್ಲದಂತಾಗಿದೆ. ನಮ್ಮ ಮನೆಗಳ ಮುಂದೆ ರಸ್ತೆಗಳು ಹದಗೆಟ್ಟಿವೆ. ಮಳೆ ಬಂದರೆ ಓಡಾಡುವುದಕ್ಕೆ ಸಾಧ್ಯವಿಲ್ಲ, ನಾವು ಸಾಕಷ್ಟು ಬಾರಿ, ಕಾಲೋನಿಗಳ ಅಭಿವೃದ್ಧಿಗೆ ಮನವಿಕೊಟ್ಟರೂ ಏನೂ ಪ್ರಯೋಜನವಾಗಿಲ್ಲ. ನಾವು ಇಲ್ಲಿ ಜೀವನ ಮಾಡೋದು ಹೇಗೆ? ಹೆಸರಿಗೆ ಮಾತ್ರ ಎಲ್ಲಾ ಅನುದಾನಗಳು ಬರುತ್ತವೆ ಎಂದು ಹೇಳುತ್ತಾರೆ. ವಾಸ್ತವದ ಸ್ಥಿತಿಯೇ ಬೇರೆ ಇದೆ. ಅಲ್ಪಸಂಖ್ಯಾತರು ವಾಸವಾಗಿರುವ ಕಡೆಗಳಲ್ಲಿ ಸಿ.ಸಿ.ರಸ್ತೆಗಳು, ಚರಂಡಿ ಕಾಮಗಾರಿಗಳು ನಡೆಯುತ್ತಿವೆ. ಅವರಿಗೆ ಅನುದಾನ ಲಭ್ಯವಿದೆ ನಮಗೆ ಇಲ್ಲವೇ? ನಾವಂದ್ರೆ ಅಷ್ಟೊಂದು ತಾತ್ಸಾರವೇ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪುರಸಭೆಯ ಅಧಿಕಾರಿಗಳನ್ನು ಕೇಳಿದರೆ, ಕ್ರಿಯಾಯೋಜನೆ ಅನುಮೋದನೆಗೆ ಕಳುಹಿಸಿಕೊಟ್ಟಿದ್ದೇವೆ ಎನ್ನುತ್ತಾರೆ. ಬೇರೆ ಎಲ್ಲಾ ವರ್ಗಗಳ ಕ್ರಿಯಾಯೋಜನೆಗಳಿಗೂ ಅನುಮೋದನೆ ಸಿಗುತ್ತದೆ. ನಮ್ಮ ಸಮುದಾಯಗಳಿಗೆ ಮಾತ್ರ ಸಿಗಲ್ಲವಾ, ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೂ ಗಮನಹರಿಸಿ, ಕಾಲೋನಿಗಳಲ್ಲಿ ತ್ವರಿತವಾಗಿ ಕಾಮಗಾರಿಗಳನ್ನು ಆರಂಭಿಸಬೇಕು. ಇಲ್ಲವಾದರೆ ನಾವೆಲ್ಲರೂ ಕುಟುಂಬಗಳ ಸಮೇತ ಪುರಸಭೆ ಮುಂದೆ ಧರಣಿ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೋಟ್‌............

೧೫ನೇ ಹಣಕಾಸು ಯೋಜನೆ, ಅಲ್ಪಸಂಖ್ಯಾತರ ಯೋಜನೆಗಳು ಕೆಲಸ ನಡೆಯುತ್ತಿವೆ. ನಾವು ಆರಿಸಿಕೊಂಡಿರುವ ಪರಿಶಿಷ್ಟರು ಹೆಚ್ಚಾಗಿರುವ ವಾರ್ಡುಗಳಲ್ಲಿ ಕೆಲಸ ನಡೆಯುತ್ತಿಲ್ಲ. ೩ ವರ್ಷಗಳಿಂದ ಇದೇ ಪರಿಸ್ಥಿತಿಯಾಗಿದೆ. ನಾವು ವಾರ್ಡುಗಳಿಗೆ ಹೋಗುವುದಕ್ಕೂ ಸಾಧ್ಯವಾಗುತ್ತಿಲ್ಲ. ಟೆಂಡರ್ ಕರೆದು ವರ್ಕ್ ಆರ್ಡರ್ ಕೊಟ್ಟಿಲ್ಲ. ನಾವು ಕೇಳಿದರೆ, ಇವ್ಯಾಲಿವೇಷನ್ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಬೇಕು.

-ವಿ.ನಂದಕುಮಾರ್‌, ಸದಸ್ಯ, ೧೨ನೇ ವಾರ್ಡ್‌, ಪುರಸಭೆಕೋಟ್.........

ಪರಿಶಿಷ್ಟರು ವಾಸವಾಗಿರುವ ಕಾಲೋನಿಗಳಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಕ್ರಿಯಾಯೋಜನೆ ತಯಾರಿಸಿ ಕಳುಹಿಸಲಾಗಿದೆ. ಇವ್ಯಾಲಿವೇಷನ್ ನಡೆಯುತ್ತಿದೆ. ನಗರೋತ್ಥಾನ ಯೋಜನೆಯಡಿಯೂ ಸೇರಿಸಲಾಗಿದೆ.

-ಸಂತೋಷ್, ಮುಖ್ಯಾಧಿಕಾರಿ, ಪುರಸಭೆ, ವಿಜಯಪುರ