ಸಾರಾಂಶ
ಬಡಾವಣೆಯಲ್ಲಿ ನಿರ್ಮಾಣ ಮಾಡಲಾಗಿದ ಒಳಚರಂಡಿ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ
ಮುಂಡಗೋಡ: ಪಟ್ಟಣದ ಗಾಂಧಿನಗರ ಬಡಾವಣೆಯಲ್ಲಿ ನಿರ್ಮಾಣ ಮಾಡಲಾಗಿದ ಒಳಚರಂಡಿ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಸಾರ್ವಜನಿಕರು ಆರೊಪಿಸಿದ್ದಾರೆ.
೧೫ನೇ ಹಣಕಾಸಿನಲ್ಲಿ ಗಾಂಧಿನಗರ ಬಡಾವಣೆಯ ಹೋಮ್ ಗಾರ್ಡ್ ಮೈದಾನ ಬಳಿ ಕೊರವರ ಓಣಿವರೆಗೆ ನಿರ್ಮಾಣ ಮಾಡಲಾಗಿರುವ ಲಕ್ಷಾಂತರ ವೆಚ್ಚದ ಗಟಾರ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದೆ. ನಿರ್ಮಾಣ ಮಾಡಿದ ಒಳಚರಂಡಿಗೆ ಸಮರ್ಪಕವಾಗಿ ಕ್ಯೂರಿಂಗ್ ಮಾಡಿಲ್ಲ. ಗಟಾರ್ ಒಳ ಭಾಗದಲ್ಲಿ ಕಬ್ಬಿಣದ ರಾಡ್ ಹೊರಗೆ ಬಂದಿವೆ. ಇದರಿಂದ ಕ್ರಮೇಣ ಕಬ್ಬಿಣದ ರಾಡ್‌ಗಳು ತುಕ್ಕು ಹಿಡಿದು ಗಟಾರ್ ಬೇಗ ಹಾಳಾಗಲಿದೆ ಎಂದು ಸ್ಥಳೀಯರು ದೂರಿದ್ದು, ಗಟಾರ ನಿರ್ಮಿಸಿ ೧೫ ದಿನ ಕಳೆದರೂ ಒಂದು ದಿನ ಕೂಡ ನೀರುಣಿಸಲಾಗಿಲ್ಲ. ಕಾಮಗಾರಿ ಮುಗಿಸಿ ಹೋದವರು ವಾಪಸ್ ಬಂದಿಲ್ಲ. ಹೀಗಾದರೆ ಗಟಾರ ಬಾಳಿಕೆ ಬರುವುದು ಹೇಗೆ? ಕೆಲವೇ ದಿನಗಳಲ್ಲಿ ಗಟಾರ ಹಾಳಾಗಲಿದ್ದು, ಲಕ್ಷಾಂತರ ರೂಪಾಯಿ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಗಲಿದೆ. ಹಾಗಾಗಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಕಾಮಗಾರಿ ಪರಿಶೀಲಿಸಿ ಗುಣಮಟ್ಟ ಕಾಮಗಾರಿ ಮಾಡಿಸಬೇಕೆಂದು ಸ್ಥಳೀಯ ಮಹಿಳೆಯರು ಆಗ್ರಹಿಸಿದ್ದಾರೆ.ಸ್ಥಳಕ್ಕೆ ತೆರಳಿ ಗಟಾರ ಕಾಮಗಾರಿ ಪರಿಶೀಲಿಸಿ ಗುತ್ತಿಗೆದಾರರಿಂದ ಗುಣಮಟ್ಟ ಕಾಮಗಾರಿ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಚಂದ್ರಶೇಖರ, ಪಪಂ ಮುಖ್ಯಾಧಿಕಾರಿ
ಮುಂಡಗೋಡ ಪಟ್ಟಣದ ಗಾಂಧಿನಗರ ಬಡಾವಣೆಯಲ್ಲಿ ನಿರ್ಮಾಣ ಮಾಡಲಾಗಿರುವ ಗಟಾರ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಸಾರ್ವಜನಿಕರು ಆರೊಪಿಸಿದ್ದಾರೆ.