ಸಾರಾಂಶ
ಚಿಂಚೋಳಿ ತಾಲೂಕಿನಲ್ಲಿ ೧೯೭೩-೭೪ನೇ ಸಾಲಿನ ಬರಗಾಲ ಪರಿಹಾರ ಯೋಜನೆ ಅಡಿಯಲ್ಲಿ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಅಭಿವೃದ್ಧಿ, ಮುಖ್ಯ ಕಾಲುವೆ ಆಧುನಿಕರಣಕ್ಕಾಗಿ ಹಾಗೂ ಪುರ್ನವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ ಸಾಕಷ್ಟು ಅನುದಾನ ಮಂಜೂರಿಗೊಳಿಸಿದೆ. ಆದರೆ ಯೋಜನೆ ಅಡಿಯಲ್ಲಿ ಕೈಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸಾಕಷ್ಟು ಕಳೆಪೆ ಮಟ್ಟದಿಂದ ನಡೆದಿದ್ದು, ಅಲ್ಲದೇ ಅವುಗಳು ಇನ್ನುವರೆಗೆ ಪೂರ್ಣಗೊಳಿಸಿಲ್ಲ.
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗೆ ಸರ್ಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ಸಾಕಷ್ಟು ಅನುದಾನ ಮಂಜೂರಿಗೊಳಿಸಲಾಗಿದೆ. ಯೋಜನೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆದ ಹಗರಣ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ರೈತರ ಒತ್ತಾಯವಾಗಿದೆ ಎಂದು ಕರ್ನಾಟಕ ಜನಕಲ್ಯಾಣಸೇವಾ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಆಗ್ರಹಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ೧೯೭೩-೭೪ನೇ ಸಾಲಿನ ಬರಗಾಲ ಪರಿಹಾರ ಯೋಜನೆ ಅಡಿಯಲ್ಲಿ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಅಭಿವೃದ್ಧಿ, ಮುಖ್ಯ ಕಾಲುವೆ ಆಧುನಿಕರಣಕ್ಕಾಗಿ ಹಾಗೂ ಪುರ್ನವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ ಸಾಕಷ್ಟು ಅನುದಾನ ಮಂಜೂರಿಗೊಳಿಸಿದೆ. ಆದರೆ ಯೋಜನೆ ಅಡಿಯಲ್ಲಿ ಕೈಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸಾಕಷ್ಟು ಕಳೆಪೆ ಮಟ್ಟದಿಂದ ನಡೆದಿದ್ದು, ಅಲ್ಲದೇ ಅವುಗಳು ಇನ್ನುವರೆಗೆ ಪೂರ್ಣಗೊಳಿಸಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಯೋಜನೆಯ ೮೦ಕೀ.ಮಿ ಬಲದಂಡೆ ಮುಖ್ಯಕಾಲುವೆ ಆಧುನಿಕರಣಕ್ಕಾಗಿ ಕರ್ನಾಟಕ ನೀರಾವರಿ ಅಭಿವೃದ್ಧಿ ನಿಗಮದಿಂದ ₹೧೨೫ ಕೋಟಿ ಅನುದಾನ ನೀಡಲಾಗಿದೆ. ಮುಖ್ಯಕಾಲುವೆ ಕಾಮಗಾರಿಯಲ್ಲಿ ನಡೆದ ಭ್ರಷ್ಟಾಚಾರದ ಕಳೆಪೆ ಕೆಲಸದಿಂದಾಗಿ ಕಾಲುವೆ ಇನ್ನುವರೆಗೆ ಪೂರ್ಣಗೊಂಡಿಲ್ಲ ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲವೆಂದರು.ಮುಖ್ಯಕಾಲುವೆ ಆಧುನೀಕರಣಕ್ಕಾಗಿ ಆಣೆಕಟ್ಟು ಹತ್ತಿರ ಡ್ರಿಫ್ ಯೋಜನೆ ಅಡಿಯಲಿ ಸಿಮೆಂಟ ಕಾಮಗಾರಿಗೆ ₹೪೦ಕೋಟಿ ಪುರ್ನವಸತಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಿಗಾಗಿ ಆಗಿನ ನೀರಾವರಿ ಸಚಿವ ಎಂ.ಬಿ. ಪಾಟೀಲ ₹೧೮ಕೋಟಿ ಮಂಜೂರುಗೊಳಿಸಿದ್ದರು. ಆದರೆ ನಿರಾಶ್ರಿತರ ಪುರ್ನವಸತಿ ಕೇಂದ್ರಗಳಲ್ಲಿ ಜನರು ಇನ್ನು ಸೌಲಭ್ಯಕ್ಕಾಗಿ ತೊಂದರೆ ಪಡಬೇಕಾಗಿದೆ ಎಂದರು.
ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಅಡಿಯಲ್ಲಿ ನಡೆದ ಅವ್ಯವಹಾರ, ಅಕ್ರಮ ಹಗರಣಗಳ ಬಗ್ಗೆ ತನಿಖೆ ನಡೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲರಿಗೆ ತಾಲೂಕಿನ ರೈತರು ಒತ್ತಾಯಿಸಿದ್ದಾರೆ.ಚಿಂಚೋಳಿ ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯಲ್ಲಿ ನಡೆದ ಕಳೆಪೆಮಟ್ಟದ ಕಾಮಗಾರಿಗಳಿಂದ ರೈತರ ಜಮೀನುಗೆ ನೀರು ಹರಿಯುತ್ತಿಲ್ಲ. ಯೋಜನೆ ಬಗ್ಗೆ ಸಮಗ್ರ ತನಿಖೆ ಸರ್ಕಾರ ನಡೆಸಬೇಕು. - ಭೀಮಶೆಟ್ಟಿ ಎಂಪಳ್ಳಿ ಅಧ್ಯಕ್ಷರು ಕೃಷಿ ಕೂಲಿ ಕಾರ್ಮಿಕರಸಂಘ