ನೀಟ್, ಸಿಇಟಿ ಪರೀಕ್ಷೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉತ್ತಮ ಅಂಕ: ಸಚ್ಚಿದಾನಂದ ಸಂತಸ

| Published : Sep 03 2025, 01:00 AM IST

ನೀಟ್, ಸಿಇಟಿ ಪರೀಕ್ಷೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉತ್ತಮ ಅಂಕ: ಸಚ್ಚಿದಾನಂದ ಸಂತಸ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಈ ಬಾರಿ ಬಡ ಮಕ್ಕಳೆ ನೀಟ್ ಪರೀಕ್ಷೆ ಬರೆದು ಸರ್ಕಾರದ ಕೋಟದಾಡಿಯಲ್ಲಿ ಎಂಬಿಬಿಎಸ್ ಪ್ರವೇಶದ ಸೀಟು ಪಡೆದಿದ್ದಾರೆ. ಇದರಿಂದ ಮಕ್ಕಳ ಪೋಷಕರಲ್ಲಿ ಸಂತೋಷ ಉಂಟುಮಾಡಿದೆ. ಜೊತೆಗೆ ಪ್ರತಿಫಲ ದೊರೆತಂತಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ನೀಟ್ ಹಾಗೂ ಸಿಇಟಿ ಪರೀಕ್ಷೆಯಲ್ಲಿ ಬಡ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಉನ್ನತ ವ್ಯಾಸಂಗಕ್ಕೆ ಸೇರ್ಪಡೆಗೊಳ್ಳುವ ಮೂಲಕ ಮೇಲುಗೈ ಸಾಧಿಸಿದ್ದಾರೆ ಎಂದು ಬಿಜೆಪಿ ಮುಖಂಡ ಸಚ್ಚಿದಾನಂದ ಸಂತಸ ವ್ಯಕ್ತಪಡಿಸಿದರು.

ತಾಲೂಕಿನ ಕೋಡಿಶೆಟ್ಟಿಪುರ ಗ್ರಾಮದಲ್ಲಿ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಸರ್ಕಾರಿ ಕೋಟದಡಿ ಎಂಬಿಬಿಎಸ್ ನ ಸರ್ಕಾರದ ಸೀಟು ಪಡೆದಿರುವ ಕರೀಗೌಡರ ಪುತ್ರ ನಿತ್ಯಾನಂದಗೆ ಉಚಿತವಾಗಿ ಲ್ಯಾಪ್‌ಟ್ಯಾಪ್ ವಿತರಿಸಿ ಮಾತನಾಡಿದರು.

ರಾಜ್ಯದಲ್ಲಿ ಈ ಬಾರಿ ಬಡ ಮಕ್ಕಳೆ ನೀಟ್ ಪರೀಕ್ಷೆ ಬರೆದು ಸರ್ಕಾರದ ಕೋಟದಾಡಿಯಲ್ಲಿ ಎಂಬಿಬಿಎಸ್ ಪ್ರವೇಶದ ಸೀಟು ಪಡೆದಿದ್ದಾರೆ. ಇದರಿಂದ ಮಕ್ಕಳ ಪೋಷಕರಲ್ಲಿ ಸಂತೋಷ ಉಂಟುಮಾಡಿದೆ. ಜೊತೆಗೆ ಪ್ರತಿಫಲ ದೊರೆತಂತಾಗಿದೆ ಎಂದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು, ಶ್ರೀನಿಮಿಷಾಂಬ ಸಮಿತಿ ಮಾಜಿ ಅಧ್ಯಕ್ಷ ಸಬ್ಬನಕುಪ್ಪೆ ಮಂಜುನಾಥ್, ಯುವ ಮುಖಂಡ ದರ್ಶನ್ ಲಿಂಗರಾಜು, ಮೋಹನ್, ಕುಮಾರ್, ರಾಮಚಂದ್ರು, ರಾಜೇಶ್, ಮಂಜು, ಮಹೇಶ್, ರಮೇಶ್ ಸೇರಿದಂತೆ ಇತರರು ಇದ್ದರು.

ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಪಾಂಡವಪುರ:

ತಾಲೂಕಿನ ತಿಮ್ಮನಕೊಪ್ಪಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.

ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ಗ್ರಾಮದ ಡೇರಿ ಉತ್ತಮವಾಗಿ ನಡೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ ಡೇರಿ 4 ಲಕ್ಷ 98 ಸಾವಿರ ನಿವ್ವಳ ಲಾಭ ಗಳಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡೇರಿ ಅಧ್ಯಕ್ಷೆ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅನಿತಾ, ನಿರ್ದೇಶಕರಾದ ರತ್ನಮ್ಮ, ಸುನೀತಾ, ಶಿಲ್ಪಾ, ಲಕ್ಷ್ಮಮ್ಮ, ಪ್ರತಿಮಾ, ಲಕ್ಷ್ಮಿ, ಕಾರ್ಯದರ್ಶಿ ನಂದಿನಿ, ಹಾಲು ಪರೀಕ್ಷಕಿ ಭಾರತಿ, ಸಹಾಯಕಿ ಅಂಜು, ತಾಳಶಾಸನ ಕಾರ್ಯದರ್ಶಿ ಮಹದೇವಸ್ವಾಮಿ ಇತರರಿದ್ದರು.

ಇದೇ ವೇಳೆ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಅವರು, ಎರಡು ವೈಫಲ್ಯಕ್ಕೊಳಗಾದ ಚಿಕ್ಕಮರಳಿ ಗ್ರಾಮದ ಕೃಪಕರನಿಗೆ ಕಿಡ್ನಿ ದಾನ ಮಾಡಿದ ಅವರ ತಂದೆ ಚಿಕ್ಕಮರಳಿ ನಿಂಗೇಗೌಡ ಅವರ ಆರೋಗ್ಯ ವಿಚಾರಿಸಿದರು.ಜನಶ್ರೇಯೋಭಿವೃದ್ಧಿ ಸಂಘದ ಸರ್ವ ಸದಸ್ಯರ ಸಭೆ

ಹಲಗೂರು: ಹೋಬಳಿ ಜನಶ್ರೇಯೋಭಿವೃದ್ಧಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸೆಪ್ಟಂಬರ್ 13ರಂದು ಬೆಳಗ್ಗೆ 10 ಗಂಟೆಗೆ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಭೆ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಚ್.ವಿ.ಅಶ್ವಿನ್ ಕುಮಾರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪುಟ್ಟ ಲಿಂಗೇಗೌಡರು ವಹಿಸಲಿದ್ದಾರೆ. ಸರ್ವ ಸದಸ್ಯರು ವಾರ್ಷಿಕ ಮಹಾಸಭೆಗೆ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ಸಂಘದ ಮುಖ್ಯ ಕಾರ್ಯನಿರ್ವಾಹಕಿ ನಾಗವೇಣಿ ತಿಳಿಸಿದ್ದಾರೆ.