ಸಾರಾಂಶ
- ಫುಟ್‌ಪಾತ್ ಅತಿಕ್ರಮಣಕ್ಕೆ ನೋಟೀಸ್ ನೀಡಿ ದಂಡ ವಿಧಿಸಿದ ಪೊಲೀಸರು
- - - ಕನ್ನಡಪ್ರಭ ವಾರ್ತೆ ದಾವಣಗೆರೆಸದಾ ಜನ, ವಾಹನ ದಟ್ಟಣೆಯ ನಗರದ ಹಳೇ ಭಾಗದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಬುಧವಾರ ಸಂಚಾರ ನಿರ್ವಹಣೆ ವ್ಯವಸ್ಥೆ, ವಾಹನ ನಿಲುಗಡೆ, ಪಾದಚಾರಿಗಳ ಮಾರ್ಗ ನಿರ್ವಹಣೆ, ಸಂಚಾರ ಫಲಕಗಳು ಹಾಗೂ ಒಮ್ಮುಖ ರಸ್ತೆಯ ವ್ಯವಸ್ಥೆ ಪರಿಶೀಲಿಸಿದರು.
ನಗರದ ಮಂಡಿಪೇಟೆ ರಸ್ತೆ, ಬಿನ್ನಿ ಕಂಪನಿ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡು ಕೆಲವು ಅಂಗಡಿ ಮಾಲೀಕರು ಸಾಮಾನು ಸರಂಜಾಮು, ಪೆಟ್ಟಿಗೆಗಳು, ವ್ಯಾಪಾರ ಮಾಡುವ ವಸ್ತುಗಳನ್ನು ಇಟ್ಟಿದ್ದು, ಪಾರ್ಕಿಂಗ್ ಇರುವ ಕಡೆ ಕಬ್ಬಿಣದ ಸರಳುಗಳ ಪಟ್ಟಿ ಅಡ್ಡ ಇಟ್ಟಿದ್ದ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲೇ ಅವುಗಳ ಮಾಲೀಕರಿಗೆ ಎಸ್ಪಿ ಸಮ್ಮುಖದಲ್ಲೇ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ, ದಂಡ ವಿಧಿಸಿದರು.ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಪ್ರದೇಶದ ರಸ್ತೆಗಳು, ವಾಹನ ದಟ್ಟಣೆ, ಜನದಟ್ಟಣೆಯ ರಸ್ತೆಗಳು, ವಾಣಿಜ್ಯ ಸಂಕೀರ್ಣಗಳಿರುವ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ಪ್ರಕರಣ ದಾಖಲಿಸುವಂತೆ ಎಸ್ಪಿ ಆದೇಶಿಸಿದರು. ಸರಿಯಾಗಿ ವಾಹನ ನಿಲುಗಡೆ ಮಾಡದೇ, ನಿರ್ಲಕ್ಷಿಸಿದ್ದ ವಾಹನ ಚಾಲಕರು, ಮಾಲೀಕರ ವಿರುದ್ದ ಐಎಂವಿ ಪ್ರಕರಣ ದಾಖಲಿಸಲು ಆದೇಶಿದರು.
ಸ್ಥಳೀಯ ಅಂಗಡಿ ಮಾಲೀಕರು, ವರ್ತಕರ ಮೌಖಿಕ ಮನವಿ, ಸಲಹೆಗಳನ್ನು ಆಲಿಸಿದ ಎಸ್‌ಪಿ ಉಮಾ ಪ್ರಶಾಂತ, ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ನಗರದಲ್ಲಿ ಸಂಚಾರ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಸಂಚಾರ ಪೊಲೀಸ್ ಠಾಣೆ ಅಧಿಕಾರಿಗಳಾದ ಮಂಜಪ್ಪ, ಜಯಶೀಲ, ಅಂಬರೀಶ ಹಾಗೂ ಸಿಬ್ಬಂದಿ ಇದ್ದರು.
- - - -8ಕೆಡಿವಿಜಿ9, 10, 11, 12.ಜೆಪಿಜಿ:ದಾವಣಗೆರೆ ಮಾರುಕಟ್ಟೆ ಪ್ರದೇಶದಲ್ಲಿ ಸಂಚಾರ ಸುವ್ಯವಸ್ಥೆಗಾಗಿ ಫುಟ್‌ಪಾತ್ ಅತಿಕ್ರಮಣ ತೆರವಿಗೆ ಎಸ್‌ಪಿ ಉಮಾ ಪ್ರಶಾಂತ ಸೂಚನೆ ನೀಡಿದರು.