ಜನಮನ ರಂಜಿಸಿದ ರಸಮಂಜರಿ ಕಾರ್ಯಕ್ರಮ

| Published : Sep 12 2024, 01:48 AM IST / Updated: Sep 12 2024, 01:49 AM IST

ಜನಮನ ರಂಜಿಸಿದ ರಸಮಂಜರಿ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಏರಿ ಮೇಲೆ ಏರಿ ಅಹ ಮೇಲೆ ಕೆಳಗೆ ಹಾರಿ ಅಹ ಹಕ್ಕಿ ಬಂದು ಕುಂತೈಯ್ತಲ್ಲೋ ಮಾವಾ ಸೇರಿ ವಿವಿಧ ಚಲನಚಿತ್ರಗಳ ಹಾಡು ಹಾಡಿ, ನೃತ್ಯ

ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ಶ್ರೀಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ಶ್ರೀಕಲ್ಮೇಶ್ವರ ದೇವಸ್ಥಾನ ಸಮಿತಿ ಹಾಗೂ ಶ್ರೀಬಸವೇಶ್ವರ ಭಜನಾ ಮಂಡಳಿ ಸಂಯುಕ್ತಾಶ್ರಯದಲ್ಲಿ ನಡೆದ ಅಭಿನವ ಮೆಲೋಡಿಸ್ (ರಸಮಂಜರಿ) ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಕನ್ನಡ, ಹಿಂದಿ ಚಲನಚಿತ್ರ ಗೀತೆಗಳನ್ನು ಯುವ ಕಲಾವಿದರು ಹಾಡಿ ಜನಮನ ರಂಜಿಸಿದರು.

ಗಜೇಂದ್ರಗಡದ ಕಲಾವಿದೆ ರತ್ನಾ ಕುಂಬಾರ ಹಾಗೂ ಗದುಗಿನ ಪ್ರಿಯಾಂಕಾ ಜತೆಗೂಡಿ ನಂಜುಡಿ ಕಲ್ಯಾಣ ಚಿತ್ರದ ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು. ಮತ್ತು ರಾಣಿ ಮಹಾರಾಣಿ ಚಿತ್ರದ ಕೂಗೊ ಕೋಳಿಗೆ ಖಾರ ಮಸಾಲೆ ಮೇಯೊ ಮೇಕೆಗೆ ಮಿರ್ಚಿ ಮಸಾಲೆ ಹಾಗೂ ಜಗಮೆಚ್ಚಿದ ಮಗ ಚಿತ್ರದ ಏರಿ ಮೇಲೆ ಏರಿ ಅಹ ಮೇಲೆ ಕೆಳಗೆ ಹಾರಿ ಅಹ ಹಕ್ಕಿ ಬಂದು ಕುಂತೈಯ್ತಲ್ಲೋ ಮಾವಾ ಸೇರಿ ವಿವಿಧ ಚಲನಚಿತ್ರಗಳ ಹಾಡು ಹಾಡಿ, ನೃತ್ಯ ಮಾಡಿ ಅಭಿನಯಸಿದರು.

ಕೃಷ್ಣ ರುಕ್ಮಿಣಿ ಚಿತ್ರದ ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕಥೆಯನ್ನು ಹಾಡುವೆ ಕೇಳಿ ಹಾಗೂ ಸಿ.ಅಶ್ವತ್‌ರವರ ಭಾವಗೀತೆ ಕಾಣದ ಕಡಲಿಗೆ ಹಂಬಲಿಸಿದೆ ಮನ..ಎಂಬ ಹಾಡುಗಳು ಬಸವರಾಜ ಪಲ್ಲೇದ ಅವರ ಪ್ರತಿಭೆಗೆ ಸಾಕ್ಷಿಯಾಯಿತು. ಸುಮಧುರ ಗಾಯನದಿಂದ ಅಪ್ಪು ಅವರ ಹಾಡನ್ನು ಪ್ರವೀಣ ವಾಲಿ ಸೊಗಸಾಗಿ ಹಾಡಿದರು. ವಂಶಿ ಚಿತ್ರದ ಭುವನಂ ಗಗನಂ ಸಕಲಂ ಶರಣಂ ಗೀತೆ ಪ್ರವೀಣ ಕೊಪ್ಪದ, ಶ್ರೀಮಂಜುನಾಥ ಚಿತ್ರದ ತನುವಿನ ಮನೆಗೆ ಬಾ ಅತಿಥಿ ಭಕ್ತಿ ಪ್ರಧಾನ ಗೀತೆಯನ್ನು ಶ್ರೀಧರ ಗಾಣಿಗೇರ, ಏನಾಗಲಿ ಮುಂದೆ ಸಾಗು ನೀ. ಬಯಸಿದ್ದೆಲ್ಲಾ ಸಿಗದು ಬಾಳಲೀ ಚಿತ್ರಗೀತೆಯನ್ನು ವೀರಭದ್ರಪ್ಪ ಮೆಣಸಗಿ ಹಾಡಿ ಜನಮನ ಸೆಳೆದರು. ಹಿಂದಿ ಚಿತ್ರಗೀತೆಗಳನ್ನು ಯಲಬುರ್ಗಾದ ಆಕಾಶ ಮೆಲೋಡಿಸ್‌ದ ಪ್ರತಿಭಾನ್ವಿತ ಕಲಾವಿದ ಖಾಜಾವಲಿ ಗುಳಗುಳಿ ಹಾಡಿದರು.

ಈ ವೇಳೆ ಕಲಾವಿದ ಮಲ್ಲಣ್ಣವರ ಮೇಟಿ, ಎಎಸ್‌ಐ ಎಸ್.ಎಲ್. ಹೊಸಳ್ಳಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶೇಖರಪ್ಪ ಮೇಟಿ, ಡಾ. ಎ.ವಿ. ನರೇಗಲ್ಲ, ಪುಂಡಪ್ಪ ಮಡಿವಾಳರ, ಪ್ರಭುರಾಜ ರೇಣುಕಮಠ, ಶೇಖರ ಯಾವಗಲ್ಲ, ಸಂಗಮೇಶ ಮೆಣಸಗಿ, ಉಮೇಶ ಮೇಟಿ, ಪ್ರಮೋದ ಯಾವಗಲ್ಲ, ಮುತ್ತು ಮೇಟಿ, ವಿನಯ ನರೇಗಲ್ಲ, ವಿನಾಯಕ ಅಥಣಿ, ವಿನಾಯಕ ಉಮತಾರ, ದಾನೇಶ ಮುಗಳಿ, ನಾಗರಾಜ ಸಂಗನಬಶೆಟ್ಟರ್‌,

ವೀರೇಶ ನರೇಗಲ್ಲ, ರವಿ ಆದಿ, ಮಲ್ಲಪ್ಪ ಅವರಾದಿ, ಸಾಗರ ಆದಿ ಇದ್ದರು. ಬಾಬು ಮೆಣಸಗಿ ಸ್ವಾಗತಿಸಿ ನಿರೂಪಿಸಿದರು.