ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಪೊರಾಡ್‌ ಮಂದ್‌ನಲ್ಲಿ ಪುತ್ತರಿ ಕೋಲ್‌ ಮಂದ್‌ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಪೊರಾಡ್ ಮಂದ್‌ನಲ್ಲಿ ಪುತ್ತರಿ ಕೋಲ್ ಮಂದ್ ವಿಜೃಂಭಣೆಯಿಂದ ನಡೆಯಿತು.ಆರಂಭದಲ್ಲಿ ಸಾಂಪ್ರದಾಯಿಕವಾಗಿ ಆಣ್ಣೀರ ಐನ್ ಮನೆಗೆ ಆಗಮಿಸಿದ ಊರಿನವರು ವಡ್ಡೋಲಗದೊಂದಿಗೆ ಊರಿನ ತಕ್ಕನನ್ನು ಮಂದ್ ಗೆ ಕರೆತಂದರು. ನಂತರ ಮಲ್ಲೇಂಗಡ ಐನ್ ಮನೆಯಿಂದ ಸಾಂಪ್ರದಾಯಿಕ ‘ಚಂಗ’ನನ್ನು ವಾಲಗದೊಂದಿಗೆ ಕರೆ ತಂದ ನಂತರ ‘ಮಂದ್ ಪುಡಿಪ’ ಪದ್ಧತಿ ನಡೆಯಿತು. ನಂತರ ಅಂಬಲದಲ್ಲಿ ಪ್ರಾರ್ಥಿಸಿ ಪುತ್ತರಿ ಕೋಲಾಟ್ ನಡೆಯಿತು. ನಂತರ ಪರೆಯ ಕಳಿ ಮತ್ತು ಸಾಮೂಹಿಕವಾಗಿ ವಾಲಗದಾಟ್ ನಲ್ಲಿ ಕುಣಿದು ಸಂಭ್ರಮಿಸಿದರು. ನಂತರ ಪದ್ಧತಿಯಂತೆ ವಾಲಗದೊಂದಿಗೆ ಮಲ್ಲೇಂಗಡ ಕುಟುಂಬದ ಐನ್ ಮನೆಗೆ ಚಂಗನನ್ನು ಬಿಟ್ಟುಕೊಟ್ಟ ಊರಿನವರಿಗೆ ಮಲ್ಲೇಂಗಡ ಕುಟುಂಬಸ್ಥರು ಉಪಚರಿಸಿದರು ಹಾಗೂ ಅಣ್ಣೀರ ಐನ್ ಮನೆಗೆ ಊರಿನ ತಕ್ಕನೊಂದಿಗೆ ಆಗಮಿಸಿದ ಊರಿನವರಿಗೆ ಆಥಿತ್ಯ ಅಣ್ಣೀರ ಕುಟುಂಬಸ್ಥರು ಸಾಂಪ್ರದಾಯಿಕ ಪದ್ಧತಿಯಂತೆ ಉಪಚರಿಸಿದರು.ಊರಿನ ಅಧ್ಯಕ್ಷ ಬಲ್ಯಮೀದೇರಿರ ಪ್ರಕಾಶ್, ಕಾರ್ಯದರ್ಶಿ ಮೀದೇರಿರ ಹರೀಶ್ ಕಾರ್ಯಕಾರಿ ಮಂಡಳಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.