ಸಾರಾಂಶ
ಬೈಕ್‌ಗಳಿಗೆ ದುಬಾರಿ ಬೆಲೆಬಾಳುವ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು, ಕರ್ಕಶ ಶಬ್ದದ ಮೂಲಕ ಜನರಿಗೆ ತೊಂದರೆ ನೀಡುತ್ತಿದ್ದ ಸವಾರರ ವಾಹನಗಳನ್ನು ಬುಧವಾರ ತಪಾಸಣೆ ನಡೆಸಲಾಯಿತು. ಈ ವೇಳೆ ಸೈಲೆನ್ಸರ್, ಹಾರ್ನ್, ಎಲ್‍ಇಡಿ ಲೈಟ್‍ಗಳನ್ನು ಪೊಲೀಸರು ವಶಕ್ಕೆ ಪಡೆದು, ರೋಡ್ ರೋಲರ್ ಮೂಲಕ ನಾಶಪಡಿಸಿದ್ದಾರೆ.
ಹರಿಹರ: ಬೈಕ್‌ಗಳಿಗೆ ದುಬಾರಿ ಬೆಲೆಬಾಳುವ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು, ಕರ್ಕಶ ಶಬ್ದದ ಮೂಲಕ ಜನರಿಗೆ ತೊಂದರೆ ನೀಡುತ್ತಿದ್ದ ಸವಾರರ ವಾಹನಗಳನ್ನು ಬುಧವಾರ ತಪಾಸಣೆ ನಡೆಸಲಾಯಿತು. ಈ ವೇಳೆ ಸೈಲೆನ್ಸರ್, ಹಾರ್ನ್, ಎಲ್‍ಇಡಿ ಲೈಟ್‍ಗಳನ್ನು ಪೊಲೀಸರು ವಶಕ್ಕೆ ಪಡೆದು, ರೋಡ್ ರೋಲರ್ ಮೂಲಕ ನಾಶ ಪಡಿಸಿದರು.
16ಕ್ಕೂ ಹೆಚ್ಚು ಸೈಲೆನ್ಸರ್, ಹತ್ತಾರು ಹಾರನ್ ಹಾಗೂ ಭೀಮ್ ಎಲ್‍ಇಡಿ ಬಲ್ಬ್ ಸೇರಿದಂತೆ ಲಕ್ಷಾಂತರ ಬೆಲೆ ಬಾಳುವ ವಸ್ತುಗಳನ್ನು ಕಳೆದ ಕೆಲ ತಿಂಗಳಿಂದ ಪೊಲೀಸರು ವಶಕ್ಕೆ ಪಡೆದಿದ್ದರು. ನಗರದ ದಾವಣಗೆರೆ ರಸ್ತೆಯ ರೈಲ್ವೆ ಗೇಟ್ ಬಳಿ ರೋಡ್ ರೋಲರ್ ಮೂಲಕ ಅವುಗಳನ್ನೆಲೆಲ ಪುಡಿ ಪುಡಿ ಮಾಡಿ, ಪುಂಡ ಯುವಕರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿ ಜಾಗೃತಿ ಮೂಡಿಸಿದರು.ನಗರ ಠಾಣೆಯ ಇನ್‌ಸ್ಪೆಕ್ಟರ್ ಎಸ್.ದೇವಾನಂದ್ ಮಾತನಾಡಿ, ರಸ್ತೆ ಸುರಕ್ಷತಾ ಸಪ್ತಹ ಕಾರ್ಯಕ್ರಮದ ಅಡಿಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿ ಅರಿವು ಜಾಗೃತಿ ಮೂಡಿಸಿದ್ದೇವೆ. ಆದರೂ, ದೂರುಗಳು ಬಂದ ಕಾರಣ ನಗರದ ವಿವಿಧ ಭಾಗಗಳಲ್ಲಿ ಪೊಲೀಸ್ ತಂಡ ರಚಿಸಿ, ಕಾರ್ಯಾಚರಣೆ ನಡೆಸಲಾಯಿತು. ಪ್ರತಿ ವಾಹನಕ್ಕೆ 1,000 ನಂತೆ ದಂಡ ವಿಧಿಸಿದ್ದೇವೆ. ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಕೇಸು ಸಹ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಎಸ್‍ಐ ಮನ್ಸೂರ್ ಅಹಮದ್. ಪೊಲೀಸ್ ಅಧಿಕಾರಿಗಳಾದ ರವಿ ಕೃಷ್ಣಪ್ಪ. ರಂಗರೆಡ್ಡಿ. ಹನುಮಂತಪ್ಪ ಗೋಪನಾಳ. ಚಾಲಕ ರಂಗಪ್ಪ. ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.- - - -05ಎಚ್‍ಆರ್‍ಆರ್02: