ಗ್ರಾಮೀಣರ ಮನೆ ಬಾಗಿಲಿನಲ್ಲಿ ಅಂಚೆ ಇಲಾಖೆ ಸೇವೆ : ಎನ್.ರಮೇಶ್

| Published : Feb 07 2024, 01:46 AM IST

ಗ್ರಾಮೀಣರ ಮನೆ ಬಾಗಿಲಿನಲ್ಲಿ ಅಂಚೆ ಇಲಾಖೆ ಸೇವೆ : ಎನ್.ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಅಂಚೆ ಇಲಾಖೆ ಬ್ಯಾಂಕ್‌ಗಳಂತೆ ಒಂದೇ ಸೂರಿನಡಿ ಹತ್ತು ಹಲವು ಸೇವೆಗಳನ್ನು ಗ್ರಾಮೀಣ ಭಾಗದ ಜನರಿಗೆ ಮನೆ ಬಾಗಿಲಿನಲ್ಲಿ ಸೇವೆ ನೀಡುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಅಂಚೆ ಅಧೀಕ್ಷಕ ಎನ್ ರಮೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ, ತರೀಕೆರೆ

ಅಂಚೆ ಇಲಾಖೆ ಬ್ಯಾಂಕ್‌ಗಳಂತೆ ಒಂದೇ ಸೂರಿನಡಿ ಹತ್ತು ಹಲವು ಸೇವೆಗಳನ್ನು ಗ್ರಾಮೀಣ ಭಾಗದ ಜನರಿಗೆ ಮನೆ ಬಾಗಿಲಿನಲ್ಲಿ ಸೇವೆ ನೀಡುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಅಂಚೆ ಅಧೀಕ್ಷಕ ಎನ್ ರಮೇಶ್ ಹೇಳಿದರು.

ಬಾರತೀಯ ಅಂಚೆ ಇಲಾಖೆ ಮಂಗಳವಾರ ಸಮೀಪದ ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. 150 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಇಲಾಖೆ ಇತ್ತೀಚಿನ ವರ್ಷಗಳಲ್ಲಿ ಡಿಜಿಟಲೀಕರಣಗೊಂಡಿದ್ದು, ಹೊಸ ಆಧಾರ್ ಚೀಟಿ, ಆಧಾರ್ ತಿದ್ದುಪಡಿ, ರಾಜ್ಯ, ದೇಶ, ವಿದೇಶಗಳಿಗೆ ಪಾರ್ಸಲ್ ಸೇವೆಗಳು, ವಿಮಾನ, ರೈಲ್ವೆ ಪ್ರಯಾಣಿಕರ ಟೀಕೆಟ್, ಮೊಬೈಲ್ ರಿಚಾರ್ಜ್ ಮೊದಲಾದ ಹತ್ತು ಹಲವು ಸೇವೆಗಳನ್ನು ಒಂದೇ ಸೂರಿನಡಿ ನೀಡುತ್ತಾ ದೇಶದ ಮೂಲೆ ಮೂಲೆಯ ಹಳ್ಳಿಗಳಿಗೂ ಸಂಪರ್ಕ ಜಾಲ ಕಲ್ಪಿಸಿದ್ದು, ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಮೂಲಕ ಮನೆಯಲ್ಲಿ ಕುಳಿತೇ ಆನ್ ಲೈನ್ ಮೂಲಕ ಬ್ಯಾಂಕಿನ ವ್ಯವಹಾರಗಳನ್ನು ಸುಲಭವಾಗಿ ಮಾಡುವ ಅವಕಾಶ ಕಲ್ಪಿಸಿದೆ ಎಂದು ವಿವರಿಸಿದರು. ಚಿಕ್ಕಮಗಳೂರು ಅಂಚೆ ನಿರೀಕ್ಷಕ ಗಂಗಾಧರಪ್ಪ ಮಾತನಾಡಿ ಅಂಚೆ ಇಲಾಖೆಯಲ್ಲಿ ಅನೇಕ ಲಾಭದಾಯಕ ಯೋಜೆನಗಳಿದ್ದು ಅಂಚೆ ವಿಮೆ, ವೃದ್ದಾಪ್ಯ , ವಿಧವಾ ಹಾಗೂ ಅಂಗವಿಕಲ ವೇತನದ ಜೊತೆಗೆ , ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ಸಹಾಯ ಧನ , ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳು ಸೇರಿ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಸುಕನ್ಯಾ ಸಮೃದ್ಧಿ , ಮಹಿಳಾ ಸಮ್ಮಾನ್ ಮೂಲಕ ಅತಿ ಹೆಚ್ಚಿನ ಲಾಭಾಂಶ ನೀಡುವ ಖಾತೆ ನೀಡುತ್ತಿದ್ದು ವರ್ಷಕ್ಕೊಮ್ಮೆ 7 ದಿನಗಳ ಕಾಲ ಗೋಲ್ಡ್ ಬಾಂಡ್‌ಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಇಂದಿನ ದಿನದ ಬಂಗಾರದ ದರ ನೀಡಿ ಬಾಂಡ್ ಖರೀದಿಸಿದರೆ ಮೂಂದಿನ ವರ್ಷಗಳ ವರೆಗೆ ಶೇ. 2.50 ರಷ್ಟು ಬಡ್ಡಿಯ ಜೊತೆಗೆ 8 ವರ್ಷಗಳ ನಂತರ ಇರುವ ಬಂಗಾರದ ದರ ನೀಡುವ ಯೋಜನೆ ಅಂಚೆ ಕಚೇರಿಗಳಲ್ಲಿ ಲಭ್ಯವಿದ್ದು, ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.

ಅಂಚೆ ಸಂಪರ್ಕ ಅಭಿಯಾನದಲ್ಲಿ ಲಿಂಗದಹಳ್ಳಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ಎಸ್. ನಾಗರಾಜ್, ಕಾರ್ಯದರ್ಶಿ ಎಲ್.ಆರ್. ಈಶ್ವರಯ್ಯ, ಗ್ರಾಪಂ ಸದಸ್ಯೆ ಹೇಮಾಬಾಯಿ, ಎಂ.ಕೆ ಚಂದ್ರಪ್ಪ, ಲಿಂಗದಹಳ್ಳಿ ಅಂಚೆ ಪಾಲಕರಾದ ನಾರಾಯಣನಾಯ್ಕ, ಸಂತವೇರಿ , ಮಲ್ಲೇನಹಳ್ಳಿ, ತೊಗರಿ ಅಂಕಲ್, ಕಲ್ಲತ್ತಿಪುರ, ಉಡೇವಾ , ನಂದಿಬಟ್ಟಲು, ತಣಿಗೆಬೈಲು, ಸಂಪಿಗೆ ಖಾನ್ ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿ ಅಂಚೆಸೇವೆಗಳ ಬಗ್ಗೆ ಮಾಹಿತಿ ಪಡೆದರು. 6ಕೆಟಿಆರ್.ಕೆ.4ಃ

ತರೀಕೆರೆ ಸಮೀಪದ ಲಿಂಗದಹಳ್ಳಿ ಗ್ರಾಪಂ ಸಭಾಂಗಣದಲ್ಲಿ ನಡೆದ ಅಂಚೆ ಸಂಪರ್ಕ ಅಭಿಯಾನದಲ್ಲಿ ಚಿಕ್ಕಮಗಳೂರು ಜಿಲ್ಲಾ ಅಂಚೆ ಅಧೀಕ್ಷಕ ಎನ್.ರಮೇಶ್ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ಕುರಿತು ಮಾತನಾಡಿ ದರು. ಲಿಂಗದಹಳ್ಳಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಚಿಕ್ಕಮಗಳೂರು ಅಂಚೆ ನಿರೀಕ್ಷಕ ಗಂಗಾಧರಪ್ಪ ಮತ್ತಿತರರು ಇದ್ದರು.