ಅಂಚೆ ನೌಕರ, ಗ್ರಾಪಂ ಕಾರ್ಯದರ್ಶಿಯಿಂದ ನಕಲಿ ಜಾತಿ ಪ್ರಮಾಣ

| Published : Jul 06 2025, 11:48 PM IST

ಅಂಚೆ ನೌಕರ, ಗ್ರಾಪಂ ಕಾರ್ಯದರ್ಶಿಯಿಂದ ನಕಲಿ ಜಾತಿ ಪ್ರಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಕೌದಳ್ಳಿ ನಿವಾಸಿಗಳಾದ ಮಹದೇವ ಹಾಗೂ ಕೃಷ್ಣಮೂರ್ತಿ ಜಾತಿ ಪ್ರಮಾಣ ಪತ್ರವನ್ನು ಪರಿಶೀಲಿಸಿ ತಕ್ಷಣ ವರದಿ ನೀಡುವಂತೆ ಹನೂರು ತಹಸೀಲ್ದಾರ್‌ಗೆ ಚಾಮರಾಜನಗರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಜೂನ್ 3ರಂದು ಪತ್ರ ಬರೆದಿರುವ ಅಂಶ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ

ಕೌದಳ್ಳಿ ನಿವಾಸಿಗಳಾದ ಮಹದೇವ ಹಾಗೂ ಕೃಷ್ಣಮೂರ್ತಿ ಜಾತಿ ಪ್ರಮಾಣ ಪತ್ರವನ್ನು ಪರಿಶೀಲಿಸಿ ತಕ್ಷಣ ವರದಿ ನೀಡುವಂತೆ ಹನೂರು ತಹಸೀಲ್ದಾರ್‌ಗೆ ಚಾಮರಾಜನಗರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಜೂನ್ 3ರಂದು ಪತ್ರ ಬರೆದಿರುವ ಅಂಶ ಬೆಳಕಿಗೆ ಬಂದಿದೆ.

ಕೌದಳ್ಳಿಯ ಎಲ್. ಕೆ .ಲಿಂಗಯ್ಯ ಅಲಿಯಾಸ್ ತಮ್ಮಯ್ಯಪ್ಪ ಅವರ ಪುತ್ರರಾದ ಮಹದೇವ ಹೂಗ್ಯಂ ಗ್ರಾಪಂನ ಕಾರ್ಯದರ್ಶಿಯಾಗಿದ್ದಾರೆ. ಕೃಷ್ಣಮೂರ್ತಿ ನರಸೀಪುರ ತಾಲೂಕಿನ ಅಂಚೆ ಇಲಾಖೆಯಲ್ಲಿ ಬ್ಯಾಂಚ್ ಪೋಸ್ಟ್ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಸದರಿ ನೌಕರಿಬ್ಬರು ಉದ್ಯೋಗ ಪಡೆಯುವ ಹಾಗೂ ಸರ್ಕಾರಿ ಸೌಲಭ್ಯಕ್ಕಾಗಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ.

ಇಬ್ಬರು ಮೂಲತಃ ಬೇಸ್ತ ಜನಾಂಗದವರು, ಆದರೆ ನಾಯಕ ಸಮಾಜ (ಜನಾಂಗ) ಎಂದು ನಕಲಿ ಜಾತಿ ಪ್ರಮಾಣ ಪತ್ರವನ್ನು ಸರ್ಕಾರವನ್ನು ಜಿಲ್ಲಾಡಳಿತವನ್ನು ವಂಚಿಸಿ ಪಡೆದಿದ್ದಾರೆ, ಇದರಿಂದ ನಾಯಕ ಸಮಾಜದ ಇನ್ನಿತರರಿಗೆ ಸಲ್ಲಬೇಕಾದ ಸವಲತ್ತು ವಂಚಿಸಿದಂತಾಗಿದೆ. ಈ ಸಂಬಂಧ ಅಪರ ಜಿಲ್ಲಾಧಿಕಾರಿಗಳು ತಕ್ಷಣ ವರದಿಗೆ ಸೂಚಿಸಿರುವ ಹಿನ್ನೆಲೆ ಜಾತಿ ಪ್ರಮಾಣ ಪತ್ರ ಪರಿಶೀಲಿಸಿ ವರದಿ ನೀಡಬೇಕು, ಸದರಿ ಇಬ್ಬರುಗಳಿಗೂ ( ಮಾದೇವ, ಕೃಷ್ಣಮೂರ್ತಿ) ಜಿಲ್ಲಾಡಳಿತ ಹಲವು ಬಾರಿ ಜಾತಿ ನಿರೂಪಿಸುವ ಮೂಲ ದಾಖಲಾತಿ ಸಲ್ಲಿಸಲು ಸೂಚಿಸಿದ್ದರು ಸಹ ಅವರು ಸಲ್ಲಿಸದ ಹಿನ್ನೆಲೆ ಹಾಗೂ ಶ್ರೀನಿವಾಸ್ ಅವರು ಮೂಲ ಜಾತಿ ಮರೆಮಾಚಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆಂಬ ದೂರಿನ ಹಿನ್ನೆಲೆ

ತಕ್ಷಣ ಕಚೇರಿಗೆ ವರದಿ ಸಲ್ಲಿಸುವಂತೆ ಪತ್ರದಲ್ಲಿ ಚಾಮರಾಜನಗರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಸೂಚಿಸಿದ್ದಾರೆ.