ಇಲಾಖೆ ಸೇವೆ ಜನರಿಗೆ ಹತ್ತಿರವಾಗಲು ಅಂಚೆ ಜನಸಂಪರ್ಕ ಅಭಿಯಾನ: ಎನ್.ರಮೇಶ್
KannadaprabhaNewsNetwork | Published : Oct 27 2023, 12:30 AM IST
ಇಲಾಖೆ ಸೇವೆ ಜನರಿಗೆ ಹತ್ತಿರವಾಗಲು ಅಂಚೆ ಜನಸಂಪರ್ಕ ಅಭಿಯಾನ: ಎನ್.ರಮೇಶ್
ಸಾರಾಂಶ
ಇಲಾಖೆ ಸೇವೆ ಜನರಿಗೆ ಹತ್ತಿರವಾಗಲು ಅಂಚೆ ಜನಸಂಪರ್ಕ ಅಭಿಯಾನ: ಎನ್.ರಮೇಶ್
ಕನ್ನಡಪ್ರಭ ವಾರ್ತೆ, ತರೀಕೆರೆ ಅಂಚೆ ಇಲಾಖೆ ಸೇವೆಗಳು ಜನರಿಗೆ ಹತ್ತಿರವಾಗಬೇಕು ಎಂಬ ಉದ್ದೇಶದಿಂದ ಅಂಚೆ ಜನಸಂಪರ್ಕ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಚಿಕ್ಕಮಗಳೂರು ವಿಭಾಗದ ಅಂಚೆ ಅಧೀಕ್ಷಕ ಎನ್.ರಮೇಶ್ ಪೇಳಿದ್ದಾರೆ. ಗುರುವಾರ, ಭಾರತ ಸರ್ಕಾರ ಅಂಚೆ ಇಲಾಖೆ, ಚಿತ್ಕಮಗಳೂರು ವಿಭಾಗ ಅಂಚೆ ಅಧೀಕ್ಷಕರಿಂದ ಪಟ್ಟಣದ ಅಂಚೆ ಕಚೇರಿಯಲ್ಲಿ ಏರ್ಪಡಿಸಿದ್ದ ಅಂಚೆ ಜನಸಂಪರ್ಕ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಚೆ ಇಲಾಖೆಯಲ್ಲಿ ಹೇಗೆ ಬದಲಾವಣೆ ತರಬೇಕು. ಸೇವೆಗಳು ಹೇಗೆ ಲಭ್ಯವಾಗಬೇಕು. ಅಂಚೆ ಇಲಾಖೆ ಎಂದರೆ ನಂಬಿಕೆ ಇಲಾಖೆಯಾಗಿದೆ, ಅಂಚೆ ಇಲಾಖೆಯಲ್ಲಿ ಅತಿ ಹೆಚ್ಚು ಬಡ್ಡಿ ನೀಡಲಾಗುವುದು, ಇಲಾಖೆ ಯೋಜನೆಗಳು ಮತ್ತು ಸೌಲಭ್ಯಗಳ ಮಾಹಿತಿ ಜನರಿಗೆ ತಲುಪಬೇಕು. ಅಂಚೆ ಪತ್ರಗಳ ಬಟವಾಡೆ, ಸ್ಪೀಡ್ ಪೋಸ್ಟ್, ವಿಮಾ ಸೌಲಭ್ಯ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ, ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ, ಹೊಸ ಪಾಸ್ ಪೋರ್ಟ್ ವಿತರಣೆ ಇತ್ಯಾದಿ ಸೇವೆ ಸಹ ಪ್ರಾರಂಭಿಸಲಾಗುವುದು. ಇದೀಗ ಜಿಲ್ಲಾ ಕೇಂದ್ರಗಳಲ್ಲಿರುವ ಡಾಕ್ ಘರ್ ನಿರ್ಯಾತ ಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ಎಲ್ಲ ಅಂಚೆ ಇಲಾಖೆ ಕಚೇರಿಯಲ್ಲಿ ಪ್ರಾರಂಭಿಸಲಾಗುವುದು ಎಂದು ವಿವರಿಸಿದರು. ಬೀರೂರು ಅಂಚೆ ಉುಪ ವಿಭಾಗದ ಅಂಚೆ ನಿರೀಕ್ಷಕ ಆರ್.ಗಿರೀಶ್ ಮಾತನಾಡಿ ಪ್ರತಿದಿನ ಅಂಚೆ ಇಲಾಖೆ ಸಾರ್ವಜನಿಕ ಸಂಪರ್ಕದಲ್ಲಿದೆ. ಇದೀಗ ಜನಸಂಪರ್ಕ ಅಭಿಯಾನ ವಿಶೇಷವಾದದ್ದು, ಆಧಾರ್ ಕಾರ್ಡ್, ಬಯೋಮೆಟ್ರಿಕ್, ವಿಮಾ ಸೌಲಭ್ಯ ಇತ್ಯಾದಿ ಹೊಸ ಹೊಸ ಸೌಲಭ್ಯಗಳನ್ನು ಅಳವಡಿಸಲಾಗುತ್ತಿದೆ ಎಂದರು. ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಮಂಜುನಾಥ್ ಮಾತನಾಡಿ ಅಂಚೆ ಕಚೇರಿ ನಿರಂತರವಾಗಿ ಜನಸಂಪರ್ಕ ಅಭಿಯಾನ ನಡೆಸುತ್ತಿದೆ. ಅಂಚೆ ಇಲಾಖೆ ಜನರ ಜೊತೆಯಲ್ಲಿದೆ, ಜನರ ಹತ್ತಿರದಲ್ಲಿದೆ. ದಣಿವರಿಯದೆ ಕಾರ್ಯ ನಿರ್ವಹಿಸುತ್ತಿದೆ. ಎಲ್ಲ ವರ್ಗಗಳಿಗೂ ಸಮಾನ ಸೇವೆಯನ್ನು ಮಾಡುತ್ತಿದೆ. ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ ಅಂಚೆ ಇಲಾಖೆ ನೇರವಾಗಿ ಭಾರತ ಸರ್ಕಾರದ ಒಡೆತನದಲ್ಲಿದೆ ಎಂದು ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾ. ಅಧ್ಯಕ್ಷ ಕೆ.ನಾಗರಾಜ್ ಮಾತನಾಡಿ ಅಂಚೆ ಇಲಾಖೆ ಸಿಬ್ಬಂದಿ ಅಂಚೆ ಪತ್ರಗಳು, ಪಿಂಚಣಿ ಇತ್ಯಾದಿಯನ್ನು ಪ್ರಾಮಾಣಿಕತೆಯಿಂದ ತಲುಪಿಸುತ್ತಾರೆ. ಅಂಚೆ ಇಲಾಖೆ ಹೊಸದಾಗಿ ಅನೇಕ ಸೌಲಭ್ಯ ಜಾರಿಗೆ ತಂದಿದೆ. ಯೋಜನೆಗಳ ಸದ್ಬಳಕೆ ಅಗತ್ಯ ಎಂದು ಹೇಳಿದರು. ವಕೀಲ ಜಿ.ಸುಬ್ರಹ್ಮಣ್ಯ ಮಾತನಾಡಿ ಅಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಅಂಚೆ ಇಲಾಖೆ ಕಾಡಿನಿಂದ ಹಿಡಿದು ಮರಳುಗಾಡಿನವರೆಗೆ ಅಂಚೆ ಸೇವೆ ಸಲ್ಲಿಸುತ್ತಿದೆ, ಸಿಬ್ಬಂದಿ ಉತ್ತಮ ಸ್ಪಂದನೆ ನೀಡುತ್ತಾರೆ ಎಂದರು. ತರೀಕೆರೆ ಅಂಚೆ ಕಚೇರಿ ಅಂಚೆ ಪಾಲಕರಾದ ಅನಿತಾ ಮಾತನಾಡಿ ಈ ಅಭಿಯಾನದ ಸೌಲಭ್ಯಗಳು ಎಲ್ಲರಿಗೂ ತಲುಪಬೇಕು ಎಂದು ಹೇಳಿದರು. ಹಿರಿಯ ಪತ್ರಕರ್ತ ಅನಂತ ನಾಡಿಗ್ ಮಾತನಾಡಿ, ಒಂದು ದಿನದಲ್ಲಿ ಒಂದು ಕೋಟಿ (ಏಕ್ ದಿನ್ ಮೆ ಏಕ್ ಕ್ರೋರ್) ಖಾತೆ ತೆರೆಯಬೇಕು ಎಂಬ ಅಂಚೆ ಇಲಾಖೆ ಸೂಚನೆಯಂತೆ ತರೀಕೆರೆ ಅಂಚೆ ಕಚೇರಿ ಇಡೀ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರಿಂದ ವಿಭಾಗದ ಅವಾರ್ಡನ್ನು ಅಂಚೆ ಪಾಲಕರಾದ ಅನಿತಾ ಅವರಿಗೆ ವಿತರಿಸಲಾಯಿತು ಎಂದರು. ಸುಕನ್ಯಾ ಸಮೃದ್ದಿ ಪಾಸ್ ಬುಕ್ ಗಳನ್ನು ವಿತರಿಸಲಾಯಿತು. ಮಾರ್ಕೆಟಿಂಗ್ ಎಕ್ಸಿಕಿಟಿವ್ ದೊಡ್ಡೇಶ್, ಗಂಗಾಧರನಾಯ್ಕ, ಶಿವಣ್ಣ, ಓಂಕಾರಪ್ಪ, ಹನುಮಂತಪ್ಪ, ಶಿವಶಂಕರ್, ಬಿ.ಎಸ್.ಶ್ರೀಶ, ಶಿವಣ್ಣ, ಪ್ರದೀಪ್, ಶಿವಶಂಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 26ಕೆಟಿಆರ್.ಕೆ.2ಃ ತರೀಕೆರೆಯಲ್ಲಿ ಭಾರತ ಸರ್ಕಾರ ಇಂಚೆ ಇಲಾಖೆ, ಚಿತ್ಕಮಗಳೂರು ವಿಭಾಗ ಅಂಚೆ ಅಧೀಕ್ಷಕರು ವತಿಯಿಂದ ಏರ್ಪಾಡಾಗಿದ್ದ ಅಂಚೆ ಜನಸಂಪರ್ಕ ಅಭಿಯಾನದ ಉದ್ಘಾಟನೆಯನ್ನು ಚಿಕ್ಕಮಗಳೂರು ವಿಬಾಗದ ಅಂಚೆ ಅಧೀಕ್ಷಕ ಎನ್.ರಮೇಶ್ ನೆರವೇರಿಸಿದರು. ಬೀರೂರು ಉಪ ವಿಭಾಗದ ಅಂಚೆ ನಿರೀಕ್ಷಕ ಆರ್.ಗಿರೀಶ್, ಪ್ರಾಚಾರ್ಯ ಡಾ.ಮಂಜುನಾಥ್ , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ.ನಾಗರಾಜ್, ತರೀಕೆರೆ ಅಂಚೆ ಪಾಲಕರಾದ ಅನಿತ ಮತ್ತಿತರರು ಇದ್ದಾರೆ.