ಸಾರಾಂಶ
ಕೋಟೆಕಾರಿನ ಮಾಡೂರಿನಲ್ಲಿ ಅಂಚೆ ಕಚೇರಿಯ ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಅಂಚೆ ಕಚೇರಿಗಳು ಆಧುನಿಕ ತಂತ್ರಜ್ಞಾನದೊಂದಿಗೆ ಜನ ಸಾಮಾನ್ಯರ ಜೀವನಕ್ಕೆ ಅವಶ್ಯವಾದಂತಹ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವ ಮೂಲಕ ಹಿಂದಿಗಿಂತಲೂ ಹೆಚ್ಚು ಕ್ರಿಯಾಶೀಲವಾಗಿವೆ. ಬದಲಾದ ಕಾಲ ಘಟ್ಟದಲ್ಲಿ ಅಂಚೆ ಇಲಾಖೆಯ ನವೀಕೃತ ಸೇವೆಗಳು ಅತ್ಯಂತ ಶ್ಲಾಘನೀಯ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.ಕೋಟೆಕಾರಿನ ಮಾಡೂರಿನಲ್ಲಿ ಅಂಚೆ ಕಚೇರಿಯ ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಹೊಸ ಶಾಖಾ ಕಚೇರಿ ಉದ್ಘಾಟಿಸಿದ ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಮಾತನಾಡಿ, ಅಂಚೆ ಇಲಾಖೆ ವೃದ್ಧರ,ಅಶಕ್ತರ, ಮಹಿಳೆಯರ, ಮಕ್ಕಳ ಪಾಲಿಗೆ ಆಶಾಕಿರಣವಾಗಿದೆ ಎಂದರು.ಉದ್ಯಮಿ ಉದಯ್ ಕುಮಾರ್ ಇದ್ದರು.
ಉಪ ಅಂಚೆ ಕಚೇರಿ ಅಧೀಕ್ಷಕ ಪಿ.ದಿನೇಶ್ ಸ್ವಾಗತಿಸಿದರು. ಅಂಚೆ ಕಚೇರಿ ಹಿರಿಯ ಅಧೀಕ್ಷಕ ಎಮ್.ಸುಧಾಕರ ಮಲ್ಯ ಪ್ರಾಸ್ತಾವಿಕ ಮಾತನಾಡಿದರು. ಅಂಚೆ ನಿರೀಕ್ಷಕ ಪ್ರದೀಪ್ ಭಂಡಾರಿ ವಂದಿಸಿದರು. ದಯಾನಂದ ಕತ್ತಲ್ ಸಾರ್ ನಿರೂಪಿಸಿದರು.