ಸಾರಾಂಶ
ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯಾ ಸಮಿತಿ ವತಿಯಿಂದ ೭ನೇ ವೇತನದ ಆಯೋಗದ ವರದಿ ಜಾರಿಗೆ ಒತ್ತಾಯ
ಕನ್ನಡಪ್ರಭ ವಾರ್ತೆ ವಿಜಯಪುರ
ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯಾ ಸಮಿತಿ ವತಿಯಿಂದ ೭ನೇ ವೇತನದ ಆಯೋಗದ ವರದಿಯನ್ನು ಸಂಪೂರ್ಣ ಜಾರಿಗೆ ತರುವಂತೆ ಒತ್ತಾಯಿಸಿ ನಗರದ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತ ಮಾರ್ಗವಾಗಿ ಪ್ರತಿಭಟನೆ ನಡೆಸಲಾಯಿತು.ನಂತರ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಬಿ.ಎನ್. ಬಿರಾದಾರ ಮಾತನಾಡಿ, ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಕೇಂದ್ರ ಸಂಘಟನೆ ನವದೆಹಲಿ ಕರೆಯ ಮೇರೆಗೆ ದೇಶಾದ್ಯಂತ ಅನಿರ್ದಿಷ್ಠಾವಧಿ ಮುಷ್ಕರ ನಡೆದಿದ್ದು, ಗ್ರಾಮೀಣ ಅಂಚೆ ನೌಕರರ ಸಂಘಟನೆ ಕೂಡ ಪ್ರಧಾನ ಅಂಚೆ ಕಛೇರಿ ವಿಜಯಪುರ ಎದುರುಗಡೆ ಡಿ.12ರಿಂದ ನಮ್ಮ ನ್ಯಾಯುತ ಬೇಡಿಕೆಗಳ ಸಲುವಾಗಿ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಂಡಿದ್ದೇವೆ. ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ೮ ಗಂಟೆಗಳ ಕೆಲಸ ನೀಡಿ ನಿವೃತ್ತಿ ವೇತನ ಸೇರಿ ಎಲ್ಲ ಸವಲತ್ತುಗಳನ್ನು ನೀಡುವುದು. ಕಮಲೇಶ್ ಚಂದ್ರ ಸಮಿತಿ ವರದಿಯಂತೆ ಈಡೇರಿಸದೇ ಇರುವ ಶಿಫಾರಸ್ಸುಗಳಾದ ಟಿಆರ್‌ಸಿಎ ಪರಿಷ್ಕರಿಸಿ ನೀಡುವುದು. ಹೆಚ್ಚುವರಿ ವೇತನ ನೀಡುವುದು. ₹೧.೫ ಲಕ್ಷ ಬದಲಿಗೆ ಕೊನೆಯ ತಿಂಗಳ ವೇತನದ ಶೇ ೧೬.೫ ರಷ್ಟು ನೀಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಿ ಎಂದರು.ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷರಾದ ಮಲ್ಲನಗೌಡ ಬಿರಾದಾರ, ಕಾರ್ಯದರ್ಶಿ ಬಿ.ಎಲ್.ಹೂಗಾರ, ಖಜಾಂಚಿ ವಿಠ್ಠಲಸಿಂಗ್ ರಜಪೂತ, ಎಸ್.ವೈ.ಥೋರತ್ ಕಾರ್ಯಾಧ್ಯಕ್ಷರು, ಎಸ್.ವೈ.ನರಳೆ, ಎಸ್.ಟಿ.ಮಲ್ಲಿಕಾರ್ಜುನ, ಮತ್ತಿತರರು ಭಾಗವಹಿಸಿದ್ದರು.