ಕರವೇ ರೈಲು ಮುತ್ತಿಗೆ ಮುಂದೂಡಿಕೆ : ಭೀಮುನಾಯಕ

| Published : Jul 22 2024, 01:17 AM IST

ಸಾರಾಂಶ

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಜು.22ರಂದು ನಡೆಯುವ ರೈಲ್ವೆ ನಿಲ್ದಾಣ ಮುತ್ತಿಗೆ ಹಾಕುವ ಹಿನ್ನೆಲೆಯಲ್ಲಿ ಕರವೇ ಪದಾಧಿಕಾರಿಗಳೊಂದಿಗೆ ದಕ್ಷಿಣ ವಿಭಾಗೀಯ ರೈಲ್ವೆ ಅಧಿಕಾರಿಗಳು ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ದಕ್ಷಿಣ ವಿಭಾಗೀಯ ರೈಲ್ವೆ ಅಧಿಕಾರಿಗಳ ಕಾಲವಕಾಶ ಕೋರಿಕೆಗೆ ಸ್ಪಂದಿಸಿ, ರೈಲ್ವೆ ಇಲಾಖೆಗೆ ಒಂದು ವಾರದ ಘಡವು ನೀಡುವ ಮೂಲಕ ತಾತ್ಕಾಲಿಕವಾಗಿ ಜು. 22ರಂದು ನಡೆಯುವ ರೈಲ್ವೆ ನಿಲ್ದಾಣ ಮುತ್ತಿಗೆಯನ್ನು ಮುಂದೂಡಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ತಿಳಿಸಿದ್ದಾರೆ.

ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಕಲಬುರಗಿ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (22231/22232) ನಿಲುಗಡೆಯ ವಿಚಾರವಾಗಿ ಜಿಲ್ಲೆಯ ಜನರ ವಿಶ್ವಾಸ ಜೊತೆಗೆ ಚೆಲ್ಲಾಟವಾಡುತ್ತಿರುವ ರೈಲ್ವೆ ಇಲಾಖೆಯ ನಡೆಯನ್ನು ತೀವ್ರವಾಗಿ ಖಂಡಿಸಿ ಕರವೇ ಯಾದಗಿರಿ ರೈಲ್ವೆ ನಿಲ್ದಾಣವನ್ನು ಮುತ್ತಿಗೆಹಾಕಿ ರೈಲು ತಡಿಯಲು ಜು. 22ರಂದು ಹಮ್ಮಿಕೊಂಡಿರುವ ಹೋರಾಟದಿಂದ ಎಚ್ಚೆತ್ತುಕೊಂಡ ಯಾದಗಿರಿ ರೈಲ್ವೆ ಅಧಿಕಾರಿಗಳು ಧಿಡೀರ್ ಸಭೆ ಕರೆದು ಕರವೇ ಮುಖಂಡರಲ್ಲಿ ಐದು ದಿನಗಳ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಕರವೇ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿಸಿದರು.

ದಕ್ಷಿಣ ವಿಭಾಗೀಯ ರೈಲ್ವೆ ಅಧಿಕಾರಿಗಳೊಂದಿಗೆ ದೂರವಾಣಿ ಸಂಪರ್ಕ ಮೂಲಕ ಮಾತನಾಡಿದಾಗ ಅವರು ವಂದೇ ಭಾರತ ರೈಲು ನಿಲುಗಡೆ ರದ್ದಾಗಿಲ್ಲ. ಕೇವಲ ಕೆಲ ತಾಂತ್ರೀಕ ದೋಷದಿಂದಾಗಿ ಸದ್ಯಕ್ಕೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ದಯವಿಟ್ಟು ಹೋರಾಟವನ್ನು ಹಿಂಪಡೆದು, ನಮಗೆ ಐದು ದಿನಗಳ ಸಮಯ ನೀಡಿ ಅಷ್ಟರಲ್ಲಿ ರೈಲು ನಿಲುಗಡೆಗೆ ಕ್ರಮ ವಹಿಸುತ್ತೆವೆ ಎಂದು ತಿಳಿಸಿದ್ದಾರೆ.

ಆದ ಕಾರಣ, ರೈಲ್ವೆ ಅಧಿಕಾರಿಗಳಿಗೆ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ. ನೀವು ಸರ್ಕಾರದ ಆದೇಶದಂತೆ ನಡೆಯುವವರು. ಸರ್ಕಾರಕ್ಕೆ ನೀವು ವಂದೇ ಭಾರತ್ ರೈಲು ನಿಲುಗಡೆಗೆ ಮತ್ತು ಇನ್ನು ಯಾದಗಿರಿ ನಿಲ್ದಾಣದಿಂದ ಹಾದುಹೋಗುವ ಪ್ರಮುಖ ರೈಲುಗಳ ನಿಲುಗಡೆಗೆ ಆದೇಶಿಸಲು ಒತ್ತಡ ಹೇರುವಂತಹ ಕೆಲಸ ಮಾಡಬೇಕೆಂದು ಆಗ್ರಹಿಸಿದರು.ಈ ಒಂದು ಹೋರಾಟ ಅಧಿಕಾರಿಗಳು ಐದು ದಿನದ ಕಾಲಾವಕಾಶ ಕೋರಿದಾಗ ಕರವೇ ವತಿಯಿಂದ ಮುಂದಿನ ಸೋಮವಾರ ಅಂದರೆ ಒಂದು ವಾರದ ಸಮಯ ನೀಡುವುದು. ಅದರ ಒಳಗಾಗಿ ರೈಲು ನಿಲುಗಡೆಗೆ ಕ್ರಮ ವಹಿಸದಿದ್ದಲ್ಲಿ ಯಾದಗಿರಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ರೈಲ್ವೆ ನಿಲ್ದಾಣಗಳಲ್ಲಿ ಕಾರ್ಯಕರ್ತರಿಂದ ಮುತ್ತಿಗೆ ಹಾಕಿ ಉಗ್ರವಾದ ಹೋರಟಕ್ಕೆ ಮುಂದಾಗಬೇಕಗುತ್ತದೆ. ಆ ಸಮಯದಲ್ಲಿ ಯಾವುದೇ ಅನಾಹುತ ಸಂಭವಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ರೈಲ್ವೆ ವ್ಯವಸ್ಥಾಪಕರಾದ ರಾಜನ್ ದಾಸ್, ಕರವೇ ತಾಲೂಕಾಧ್ಯಕ್ಷ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಶ ಹತ್ತಿಮನಿ, ವಿಶ್ವರಾಧ್ಯ ದಿಮ್ಮೆ, ಭೀಮರಾಯ್ ರಾಮಸಮುದ್ರ, ಸುರೇಶ ಬೆಳಗುಂದಿ ಇತರರಿದ್ದರು.