ಗುಂಡಿ ಬಿದ್ದ ರಸ್ತೆಗಳು: ವಿನೂತನ ಪ್ರತಿಭಟನೆ

| Published : Nov 14 2024, 12:47 AM IST

ಸಾರಾಂಶ

ಚಿಕ್ಕಮಗಳೂರು: ಹೊಂಡ ಗುಂಡಿಗಳಿಂದ ಹತಾಶೆ ಮತ್ತು ಆಕ್ರೋಶಗೊಂಡ ಸಾರ್ವಜನಿಕರು ಪ್ರತಿಭಟನೆಗೆ ವಿನೂತನ ಹಾದಿ ಕಂಡುಕೊಂಡಿದ್ದಾರೆ.

ಚಿಕ್ಕಮಗಳೂರು: ಹೊಂಡ ಗುಂಡಿಗಳಿಂದ ಹತಾಶೆ ಮತ್ತು ಆಕ್ರೋಶಗೊಂಡ ಸಾರ್ವಜನಿಕರು ಪ್ರತಿಭಟನೆಗೆ ವಿನೂತನ ಹಾದಿ ಕಂಡುಕೊಂಡಿದ್ದಾರೆ.

ಈಗಾಗಲೇ ವಿಜಯಪುರದ ಮುಖ್ಯ ರಸ್ತೆ ಗುಂಡಿಗಳಿಗೆ ಪೂಜೆ ಸಲ್ಲಿಸಿ ಎಡೆ ಅರ್ಪಿಸಿದ ಕೆಲ ಯುವಕರು ಬುಧವಾರ ವಿನೂತನ ರೀತಿ ಫಲಕ ಹಾಕಿ ನಗರ ಸಭೆಗೆ ಛೀಮಾರಿ ಹಾಕಿದ್ದಾರೆ.

“ಗುಂಡಿ ಮುಚ್ಚದಿರಲು ನಿಧಿ ಇದೆ ಎಂಬ ಆಸೆಯಿಂದ ಕಾಯುತ್ತಿರುವ ನಗರಸಭೆ” ಎಂಬ ಶೀರ್ಷಿಕೆ ಅಡಿ ಫಲಕ ಹಾಕಿದ್ದು, ಎಚ್ಚರವಾಗಿ ಚಲಿಸಿ ಗುಂಡಿಗೆ ಬಿದ್ದರೆ ನಿಧಿ ಸಿಗುವುದಿಲ್ಲ ಎಂದು ಹಾಕಲಾಗಿದ್ದು ನಗರಸಭೆ ಆಡಳಿತವನ್ನು ಅಣಕಿಸುವಂತಿವೆ.

ಎಲ್ಲಾ ಜನ ಪ್ರತಿನಿಧಿಗಳಿಗೆ ವಿಜಯಪುರ ಮುಖ್ಯ ರಸ್ತೆ ನಾಗರಿಕರಿಂದ ಗೌರವ ವಂದನೆ ಎಂದು ವ್ಯಂಗ್ಯವಾಡಿದ್ದಾರೆ.

ಇತ್ತೀಚೆಗೆ ಶೀಘ್ರದಲ್ಲೇ ” ಹಾಲುತುಪ್ಪ” ಬಿಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.

13 ಕೆಸಿಕೆಎಂ 5ಹೊಂಡ ಗುಂಡಿಗಳಿಂದ ಹತಾಶೆ ಮತ್ತು ಆಕ್ರೋಶ ಗೊಂಡ ಜನ ಚಿಕ್ಕಮಗಳೂರಿನ ವಿಜಯಪುರ ಬಡಾವಣೆಯಲ್ಲಿ ಪ್ರತಿಭಟನೆಯ ವಿನೂತನ ಹಾದಿ ಕಂಡುಕೊಂಡಿರುವುದು.