ಸಾರಾಂಶ
ಹೊಸಕೋಟೆ: ದೇಶಕ್ಕೆ ಸ್ವಾತಂತ್ರ ಬಂದು ದಶಕಗಳು ಕಳೆದರೂ ಸಹ ದೇಶದಲ್ಲಿ ಬಡತನ ಇನ್ನು ನಿರ್ಮೂಲನೆ ಆಗಿಲ್ಲ. ಬುಡಕಟ್ಟು ಜನರಿಗೆ, ಹಿಂದುಳಿದ ವರ್ಗಕ್ಕೆ ಸ್ವಾತಂತ್ರ್ಯ ದಕ್ಕಿಲ್ಲ ಎಂದು ಭವಾನಿಪುರ್ ಬದ್ರುದ್ದಿನ್ ಶಾ-ವೆಲ್ ಫೇರ್ ಸೊಸೈಟಿ ಸದಸ್ಯ ಶಶಿಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಎಷ್ಟೇ ರಾಜಕೀಯ ಪಕ್ಷಗಳು ಆಡಳಿತ ನಡೆಸಿದರೂ ಕಾಡಂಚಿನ, ಹಾಗೂ ಬುಡಕಟ್ಟು ಸಮುದಾಯ, ಹಿಂದುಳಿದ ಸಮುದಾಯಗಳು ಬಡತನದಿಂದ ನೋವನ್ನನುಭವಿಸುತ್ತಾ, ಸಮಾಜದಿಂದ ದೂರ ಉಳಿದಿದ್ದಾರೆ. ಅಂತಹವರ ಕಡೆ ಆಳುವ ವರ್ಗ ಗಮನಹರಿಸಿಲ್ಲ. ಈ ನಿಟ್ಟಿನಲ್ಲಿ ಭವಾನಿಪುರ್ ಬದ್ರುದ್ದಿನ್ ಶಾ ವೆಲ್ ಫೇರ್ ಸೊಸೈಟಿ ವತಿಯಿಂದ ದೇಶ ವ್ಯಾಪ್ತಿಯ ಬುಡಕಟ್ಟು ಆದಿವಾಸಿ ಜನಾಂಗ ಹಾಗೂ ಕಡುಬಡವರ ಏಳಿಗೆಗೆ ಮುಂದಾಗಿದೆ ಎಂದರು.ಭವಾನಿಪುರ್ ಬದ್ರುದ್ದಿನ್ ಶಾ-ವೆಲ್ ಫೇರ್ ಸೊಸೈಟಿ ಸದಸ್ಯ ರಾಜ್ ಕುಮಾರ್ ಮಾತನಾಡಿ, ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಮೂಲ ಸೌಲಭ್ಯ ಕಲ್ಪಿಸುವುದು ಹಾಗೂ ಸಮಾಜದ ಉನ್ನತಿಗೆ ಬರಲು ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ೩೫೦ ಸದಸ್ಯರನ್ನು ಒಳಗೊಂಡ ಎನ್‌ಜಿಒ ಇದಾಗಿದೆ. ನಾವು ಯಾರಿಂದಲೂ ಹಣ ಪಡೆಯದೇ ಬಡವರ ಸಹಾಯಕ್ಕಾಗಿ ಮುಂದಾಗಿದ್ದೇವೆ. ಈಗಾಗಲೆ ಪಶ್ಚಿಮ ಬಂಗಾಳ, ಆಂಧ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿ ಬುಡಕಟ್ಟು ಆದಿವಾಸಿ ಜನಾಂಗ ಹಾಗೂ ಇತರೆ ಸೌಲಭ್ಯ ವಂಚಿತ ಕುಟುಂಬಗಳನ್ನು ಗುರುತಿಸಿ ಅಂತಹ ಕುಟುಂಬಗಳಿಗೆ ಮನೆ ನಿರ್ಮಾಣ, ಶಿಕ್ಷಣಕ್ಕೆ ಆರ್ಥಿಕ ಸಹಾಯ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಿಕೊಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಬಾಕ್ಸ್ ...........ದೊಡ್ಡಹರಳಗೆರೆ, ನೆಲವಾಗಿಲು ಆಯ್ಕೆ
ಹೊಸಕೋಟೆ ತಾಲೂಕಿನಲ್ಲಿ ಸಹ ನಮ್ಮ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಸೂಕ್ತ ಗ್ರಾಮಗಳು ಹಾಗೂ ಬಡ ಕುಟುಂಬಗಳನ್ನು ಆಯ್ಕೆ ಮಾಡಲು ಸಮೀಕ್ಷೆ ನಡೆಸುತ್ತಿದ್ದು ದೊಡ್ಡಹರಳಗೆರೆ ಹಾಗೂ ನೆಲವಾಗಿಲು ಗ್ರಾಮದಲ್ಲಿ ಸರ್ವೆ ಕಾರ್ಯ ನಡೆಸುತ್ತಿದ್ದೇವೆ. ಸಂಸ್ಥೆಯಲ್ಲಿ ನಿವೃತ್ತ ಆರ್ಮಿ, ಪೊಲೀಸ್, ಶಿಕ್ಷಣ ಇಲಾಖೆ ಸೇರಿದಂತೆ ರಾಜಕೀಯ ವ್ಯಕ್ತಿಗಳು ಇದ್ದಾರೆ. ನಮ್ಮ ಸಂಸ್ಥೆಯ ಮೂಲಕ ಆರ್ಥಿಕವಾಗಿ ಇಂತಹ ಕುಟುಂಬಗಳಿಗೆ ಸಹಾಯ ಮಾಡುವವರು ಮುಂದೆ ಬರಬಹುದು ಎಂದು ಭವಾನಿಪುರ್ ಬದ್ರುದ್ದೀನ್ ಶಾ-ವೆಲ್ ಫೇರ್ ಸೊಸೈಟಿ ಸದಸ್ಯ ಶಶಿಕುಮಾರ್ ತಿಳಿಸಿದರು.ಫೋಟೋ: 2 ಹೆಚ್‌ಎಸ್‌ಕೆ 2ಹೊಸಕೋಟೆಯಲ್ಲಿ ಭವಾನಿಪುರ್ ಬದ್ರುದ್ದಿನ್ ಶಾ-ವೆಲ್ ಫೇರ್ ಸೊಸೈಟಿ ಸದಸ್ಯರ ಶಶಿಕುಮಾರ್ ನೇತೃತ್ವದಲ್ಲಿ ದೊಡ್ಡಹರಳಗೆರೆ ಹಾಗೂ ನೆಲವಾಗಿಲು ಗ್ರಾಮದ ಸರ್ವೆ ಕುರಿತು ಮಾಹಿತಿ ನೀಡಿದರು.