ಆಹಾರ ಗೌರವಿಸುವವರಿಗೆ ಬಡತನ ಬರಲ್ಲ: ಗುರು ಮಹಾಂತ ಸ್ವಾಮೀಜಿ

| Published : Aug 15 2025, 01:02 AM IST

ಆಹಾರ ಗೌರವಿಸುವವರಿಗೆ ಬಡತನ ಬರಲ್ಲ: ಗುರು ಮಹಾಂತ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಲು, ಮಣ್ಣಿಗೆ ಹಾಲು ಹಾಕಿ ವ್ಯರ್ಥ ಮಾಡಬಾರದು. ಆಹಾರ ದೇವರ ಸ್ವರೂಪ. ಆಹಾರದಿಂದ ಮನುಷ್ಯನಿಗೆ ಚೈತನ್ಯ ದೊರಕುವುದು. ಇಂಥ ಅಮೂಲ್ಯವಾದ ಜೀವಸತ್ವ ಆಹಾರವನ್ನು ಮೌಢ್ಯ ಆಚರಣೆಗಳ ಮೂಲಕ ಹಾಳು ಮಾಡಬಾರದು. ಆಹಾರ ಹಾಳು ಮಾಡುವುದರಿಂದ ಪಾಪ ಅಂಟಿಕೊಳ್ಳುವುದು. ಆಹಾರವನ್ನು ಗೌರವಿಸುವವರಿಗೆ ಬಡತನ ಬರುವುದಿಲ್ಲ ಎಂದು ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ನಗರದ ಎಸ್.ಆರ್. ಕಂಠಿ ವೇದಿಕೆ, ಕುಲಕರ್ಣಿ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.೧ರಲ್ಲಿ ಆಯೋಜಿಸಿದ್ದ ಹಾಲು ಕುಡಿಯುವ ಹಬ್ಬದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸತ್ಕಾರ ಸ್ವೀಕರಿಸಿದ ಪಂಚ ಯೋಜನೆಗಳ ಅನುಷ್ಠಾನ ಸಮಿತಿಯ ಇಳಕಲ್ಲ ತಾಲೂಕು ಅಧ್ಯಕ್ಷ ಮಹಾಂತೇಶ ಹನುಮನಾಳ, ಇಳಕಲ್ಲ ತಾಲೂಕ ವಕೀಲರ ಸಂಘದ ಅಧ್ಯಕ್ಷ ಮಹಾಂತೇಶ ಹೊಸೂರ, ಇಳಕಲ್ಲ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಂ. ಮಾಸರೆಡ್ಡಿ ಮಾತನಾಡಿದರು.

ಹಾಲು ಕುಡಿಯುವ ಹಬ್ಬದ ನಿಮಿತ್ತ ಏರ್ಪಡಿಸಿದ್ದ ವಚನ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಗುರುಮಾತೆ ಎ.ಎಸ್. ಕುರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಂಠಿ ವೇದಿಕೆಯ ಅಧ್ಯಕ್ಷೆ ಮಹಾದೇವಿ ತೊಂತನಾಳ, ಕರ್ನಾಟಕ ರಕ್ಷಣಾ ವೇದಿಕೆಯ ನಗರ ಚಾಲಕರ ಘಟಕದ ಅಧ್ಯಕ್ಷ ಮಲ್ಲಪ್ಪ ಅಂಗಡಿ, ಕಂಠಿ ವೇದಿಕೆಯ ಹಿರಿಯ ಸದಸ್ಯೆ ಶೈಲಾ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

ಶಾಲೆಯ ಶಿಕ್ಷಕಿಯರಾದ ಸುಜಾತಾ ವನಕಿ, ಸುವರ್ಣ ಓತಗೇರಿ, ಲಲಿತಾ ಬಿಜ್ಜಳ, ಎಂ.ಆರುಂಧತಿ, ಕಂಠಿ ವೇದಿಕೆಯ ಅಮರೇಶ ಐಹೊಳ್ಳಿ, ಶಿವಬಸಪ್ಪ ತೊಂತನಾಳ, ಬಸವರಾಜ ಚಳಗೇರಿ, ಬಸವರಾಜ ಅಂಗಡಿ(ಐಟಿಐ), ಅಡಿವೆಪ್ಪ ಅಂಗಡಿ, ಭೀಮಣ್ಣ ಕೊಳ್ಳಿ, ವೀರಣ್ಣ ನಂದಾಪೂರ, ಮಹಾಂತೇಶ ಕಕ್ಕಸಗೇರಿ, ವೀರಣ್ಣ ಅಂಗಡಿ, ಕಳಕಪ್ಪ ಅಂಗಡಿ, ಅಮರೇಶ ಕಕ್ಕಸಗೇರಿ, ಸಿದ್ದು ಅಂಗಡಿ, ಮಹಾಂತೇಶ ಬಂಡಿ, ಸಂಗಮೇಶ ಬೆಲ್ಲದ, ಶೋಭಾ ಲವಳಸರ, ಕಮಲಾಕ್ಷಿ ಅಂಗಡಿ, ಜಯಶ್ರೀ ನೀರಲಕೇರಿ, ಶಿಲ್ಪಾ ಅಂಗಡಿ, ಜ್ಯೋತಿ ಮೈದರಗಿ, ನೇತ್ರಾವತಿ ಮರೋಳ ಮತ್ತಿತರರು ಭಾಗವಹಿಸಿದ್ದರು.

ವಿದ್ಯಾರ್ಥಿನಿಯರಾದ ದೀಕ್ಷಾ ಗೋಟೂರ, ತ್ರಿವೇಣಿ ಗಟ್ಟಿಗುಂಡ, ಶ್ರೇಯಾ ಕಾಂಬಳೆ, ಸಮೀರನ್ ಆನೆಹೊಸೂರ ಸಂಗಡಿಗರು ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಲೆಕ್ಕಿಹಾಳ ಸ್ವಾಗತಿಸಿದರು. ಸಾವಿತ್ರಿ ಬೆಲ್ಲದ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್. ತಳವಾರ ನಿರೂಪಿಸಿದರು. ನೀಲಾಂಬಿಕಾ ಬಾದಿಮನಾಳ ವಂದಿಸಿದರು.