ಸಾರಾಂಶ
ವಿದ್ಯಾರ್ಥಿಗಳು ಯಾವುದೇ ಕಲಿಕೆಯಲ್ಲಾಗಲಿ, ಉದ್ಯೋಗದಲ್ಲಾಗಲಿ ತೊಡಗಿದರೆ ಶ್ರದ್ಧೆ, ಶ್ರಮ ಪ್ರಾಮಾಣಿಕ ಪ್ರಯತ್ನದಿಂದ ಗುರಿ ತಲುಪಬೇಕು
ಮುಂಡರಗಿ: ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ ವಹಿಸುವ ಮೂಲಕ ಐಎಎಸ್, ಕೆಎಎಸ್ ನಂತಹ ಉನ್ನತ ಹುದ್ದೆ ಪಡೆಯಬಹುದು. ವಿದ್ಯಾರ್ಥಿಗಳ ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಶನಿವಾರ ಪಟ್ಟಣದ ಜಗದ್ಗುರು ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2023-24ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್, ರೇಂಜರ್ಸ್ ಹಾಗೂ ರೋವರ್ಸ್ ಮತ್ತು ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಹಾಗೂ ಬಿಎ, ಬಿ.ಕಾಂ, ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೋಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿದ್ಯಾರ್ಥಿಗಳು ಯಾವುದೇ ಕಲಿಕೆಯಲ್ಲಾಗಲಿ, ಉದ್ಯೋಗದಲ್ಲಾಗಲಿ ತೊಡಗಿದರೆ ಶ್ರದ್ಧೆ, ಶ್ರಮ ಪ್ರಾಮಾಣಿಕ ಪ್ರಯತ್ನದಿಂದ ಗುರಿ ತಲುಪಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಸದ್ಯಸ ಎಸ್.ಎಸ್. ಗಡ್ಡದ ಅಂತಿಮ ವರ್ಷದ ವಿದ್ಯಾರ್ಥಿಗಳ ಕುರಿತು ಮಾತನಾಡಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಮುಂದಿನ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳುವ ಮೂಲಕ ಹುಟ್ಟಿದ ಊರಿಗೆ ಹಾಗೂ ಕಲಿತ ಶಾಲೆ-ಕಾಲೇಜುಗಳ ಕೀರ್ತಿ ಹೆಚ್ಚಿಸಬೇಕು ಎಂದು ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ಡಾ. ಎಸ್.ಜಿ.ಕಡ್ಡಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೇಮಗಿರೀಶ ಹಾವಿನಾಳ, ಲಿಂಗರಾಜಗೌಡ ಪಾಟೀಲ, ಆರ್.ಎಸ್. ಪಾಟೀಲ, ಆನಂದ ನಾಡಗೌಡ್ರ, ಹೇಮಂತಗೌಡ ಪಾಟೀಲ, ಎಂ.ವಿ. ಅರಳಿ, ಎನ್.ಎ. ಗೌಡರ, ರುದ್ರಗೌಡ ಪಾಟೀಲ, ಎಚ್. ವಿರುಪಾಕ್ಷಗೌಡ, ರಾಮಚಂದ್ರ ಕಲಾಲ, ಶ್ರೀನಿವಾಸ ಕಟ್ಟಿಮನಿ, ದೇವಪ್ಪ ರಾಮೇನಹಳ್ಳಿ, ಅರುಣಾ ಪಾಟೀಲ, ಪ್ರಾ.ಶಂಭುಲಿಂಗ ಚಿಗರಿ, ಡಾ.ನಾಗರಾಜ ಹಾವಿನಾಳ, ಡಾ. ಜಗದೀಶ ಹುಲ್ಲೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಭಾರತಿ ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವೇರಿ ಬೋಲಾ ವರದಿ ವಾಚನ ಮಾಡಿದರು. ಎ.ವಿ. ಹಿರೇಮಠ ಸ್ವಾಗತಿಸಿದರು. ಡಾ.ಮಿಟ್ಯಾ ನಾಯಕ, ಬಸವರಾಜ ಸಸಿಮಠ ನಿರೂಪಿಸಿ, ಮೀನಾಕ್ಷಿ ಪಿ. ವಂದಿಸಿದರು.