ವಿದ್ಯುತ್ ಅವಘಡ: ಭಾಗಮ್ಮ ಕುಟಂಬಕ್ಕೆ ಪರಿಹಾರ

| Published : Jul 03 2024, 12:15 AM IST

ಸಾರಾಂಶ

ಹುಣಸಗಿ ತಾಲೂಕಿನ ಮಂಜಲಾಪೂರ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ಅವಘಡದಿಂದ ಮೃತಪಟ್ಟ ಕುಟುಂಬಕ್ಕೆ ₹5.30 ಲಕ್ಷ ಪರಿಹಾರದ ಚೆಕ್‌ಅನ್ನು ಶಾಸಕ ರಾಜಾ ವೇಣಗೋಪಾಲ ನಾಯಕ ನೀಡಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ಹಲವು ತಿಂಗಳುಗಳ ಹಿಂದೆ ವಿದ್ಯುತ್ ಅವಘಡದಿಂದ ಮೃತಪಟ್ಟ ತಾಲೂಕಿನ ಮಂಜಲಾಪೂರ ಹಳ್ಳಿ ಗ್ರಾಮದ ಭಾಗಮ್ಮ ಮಲ್ಲಪ್ಪ ಕಾಂಬಳಿ ಕುಟುಂಬಕ್ಕೆ ವಿದ್ಯುತ್ ಇಲಾಖೆಯಿಂದ ಮಂಜೂರು ಆಗಿರುವ ₹5.30 ಲಕ್ಷ ಪರಿಹಾರದ ಚೆಕ್‌ಅನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂಗಾರು ಮಳೆಗಾಲದಲ್ಲಿ ಗಾಳಿ, ಮಳೆಗೆ, ಮರಗಳು ಮುರಿದು ಬಿದ್ದು, ವಿದ್ಯುತ್ ಮಾರ್ಗದ ಕಂಬಗಳು ಮುರಿಯುವುದು, ವಿದ್ಯುತ್ ತಂತಿಗಳು ತುಂಡಾಗುವುದು ಸಾಮಾನ್ಯವಾಗಿದೆ. ಮುಂಗಾರು ಮಳೆ ಪ್ರಾರಂಭದಲ್ಲಿ ಅವಘಡಗಳು ಸಂಭವಿಸಿ, ಮಾರಣಾಂತಿಕ ವಿದ್ಯುತ್ ಅಪಘಾತಗಳು ಸಂಭವಿಸದಂತೆ ಜೆಸ್ಕಾಂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರು ವಿದ್ಯುತ್ ಮಾರ್ಗದ ಕಂಬಗಳು, ತಂತಿಗಳು ತುಂಡರಿಸಿ ಬಿದ್ದಾಗ ಯಾರೂ ಸಹ ಅವುಗಳ ಹತ್ತಿರ ಹೋಗದಂತೆ ತಡೆದು ಆದಷ್ಟು ಬೇಗ ಇಲಾಖೆಗೆ ಮಾಹಿತಿ ನೀಡಬೇಕು. ಮಳೆ, ಗಾಳಿ ಸಂದರ್ಭದಲ್ಲಿ ವಿದ್ಯುತ್ ಕಂಬದ ಪಕ್ಕ ಟ್ರಾನ್ಸ್-ಫಾರ್ಮರ್ ಹತ್ತಿರ ವಿದ್ಯುತ್ ಮಾರ್ಗದ ಕೆಳಗೆ ನಿಲ್ಲಬಾರದು. ಆದಷ್ಟು ವಿದ್ಯುತ್ ನಿಂದಾಗುವ ಅವಘಡಗಳು ತಪ್ಪಿಸಲು ಎಲ್ಲರೂ ಜಾಗೃತರಾಗಿರಲು ತಿಳಿಸಿದರು.

ಎಇಇ ಕಳಕಪ್ಪ ರಾಠೋಡ, ಯೂನಿಯನ್ ಅಧ್ಯಕ್ಷ ಸದಾಶಿವರೆಡ್ಡಿ ಕಾಂಬಳೆ, ರಾಘವೇಂದ್ರ ಕಾಂಬಳಿ, ಮಂಜುನಾಥ ಕಾಂಬಳೆ, ಮಲ್ಲಪ್ಪ ಕಾಂಬಳೆ, ಮಾನಯ್ಯಗೌಡ ಬಿರಾದರ್, ಪರಮಣ್ಣ ಮೇಟಿ, ದೇವಪ್ಪ ಕಕ್ಕೇರಾ, ಬಸಣ್ಣ ಗುರಿಕಾರ ಸೇರಿದಂತೆ ಇತರರಿದ್ದರು.