ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಬೆಂಬಲವೇ ಅಧಿಕಾರವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ. ಎಸ್.ಪೊನ್ನಣ್ಣ ಹೇಳಿದರು.ನಾಪೋಕ್ಲು ಟೌನ್ ಮಹಿಯುದ್ದೀನ್ ಸುನ್ನಿ ಜುಮಾ ಮಸೀದಿ ವತಿಯಿಂದ ಇಲ್ಲಿಯ ಚೆರಿಯಪರಬುವಿನಲ್ಲಿ ಗುರುವಾರ ಆಯೋಜಿಸಲಾದ ನೂತನ ಶಾದಿ ಮಹಲ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಬೆಂಬಲವೇ ಅಧಿಕಾರವಾಗಿದೆ . ಜನರ ಪ್ರೀತಿ ವಿಶ್ವಾಸ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದಾಗಿದೆ. ಚೆರಿಯ ಪರಂಬು ಭಾಗದ ಜನರ ಬಹುಕಾಲದ ನಿರೀಕ್ಷೆಯನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದರು.ಅಭಿವೃದ್ಧಿ ಕುಂಠಿತವಾಗಿಲ್ಲ:
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ.ಪ್ರಗತಿಪಥ ಯೋಜನೆ ಅಡಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 23 ಕೋಟಿ ರು. ಮೀಸಲಿಟ್ಟಿದೆ. ಮಳೆಹಾನಿ ಪರಿಹಾರ ಯೋಜನೆಯು ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ವಿರಾಜಪೇಟೆ ಕ್ಷೇತ್ರದಲ್ಲಿ ಎಲ್ಲಿಯೂ ಅಭಿವೃದ್ಧಿ ಕುಂಠಿತವಾಗಿಲ್ಲ. ಹಲವು ವರ್ಷಗಳ ಬಳಿಕ 150 ಕೋಟಿ ರು. ಅನುದಾನವನ್ನು ಕ್ಷೇತ್ರಕ್ಕೆ ತರಲಾಗಿದೆ. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಿದ್ದಾರೆ ವಿರಾಜಪೇಟೆ ಕ್ಷೇತ್ರಕ್ಕೆ 2000 ಕೋಟಿ ರು. ಅನುದಾನ, ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ದುರಸ್ತಿಗಳಾದ ರಸ್ತೆಗಳ ಕಾಮಗಾರಿ ಹಂತ ಹಂತವಾಗಿ ಪ್ರಾರಂಭವಾಗುತ್ತಿದ್ದು ಜನರ ಸಂಚಾರಕ್ಕೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟೌನ್ ಮಹಿಯುದ್ದೀನ್ ಸುನ್ನಿ ಜುಮ್ಮ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಹಮಾನ್ ಎಂ ಎಚ್ ವಹಿಸಿ ಮಾತನಾಡಿ, ಇದುವರೆಗೆ ಆಗದ ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಶಾಸಕರಾದ ಪೊನ್ನಣ್ಣನವರು ಮಾಡಿದ್ದಾರೆ. ಅದೇ ರೀತಿ ಇಲ್ಲಿ ನಿರ್ಮಾಣವಾಗಲಿರುವ ನೂತನ ಶಾದಿ ಮಹಲ್ ಕಟ್ಟಡಕ್ಕೆ ಸಂಪೂರ್ಣ ಸಹಕಾರ ನೀಡಿದ್ದು ಇನ್ನು ಮುಂದೆಯೂ ಹೆಚ್ಚಿನ ಅನುದಾನವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕೃತಜ್ಞತೆಯನ್ನು ಸಲ್ಲಿಸಿದರು.
ಶಾಸಕರಿಗೆ ಸನ್ಮಾನ:ಕಾರ್ಯಕ್ರಮದಲ್ಲಿ ನಾಪೋಕ್ಲೂ ಟೌನ್ ಮಹಿಯುದ್ದೀನ್ ಸುನ್ನಿ ಜುಮ್ಮ ಮಸೀದಿ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ನಹೀಬು ಖಾಝಿ ಕೊಡಗು ಶೈಖುನ ಅಬ್ದುಲ್ ಫೈಜಿ ಎಡಪಾಲ ವಿಶೇಷ ಪ್ರಾರ್ಥನೆ ಸಲ್ಲಿಸಿದರು, ಕಾರ್ಯಕ್ರಮದ ವೇದಿಕೆಯಲ್ಲಿ ನಿಜಾರ್ ಅಕ್ಸನಿ ಕಕ್ಕಡೀಪುರ ಮುದರಿಸ್ ಕುಂಜಿಲ, ಸಾದುಲಿ
ಸಖಾಫಿ ಕೊಳಕೇರಿ, ಖತೀಬರಾದ ಅಫಿಳ್ ಶೌಕತ್ ಸಖಾಫಿ, ಮುದರಿಸ್ ಇಬ್ರಾಹಿಂ ಖಾಲೀಲ್ ಸಖಾಫಿ ಗ್ರಾಮ ಪಂಚಾಯತಿ ಸದಸ್ಯರಾದ ಇಸ್ಮಾಯಿಲ್ಕೆ.ಎ, ಮಾಚೇಟಿರ ಕುಸು ಕುಶಾಲಪ್ಪ, ಕುಲ್ಲೇಟಿರ ಅರುಣ್ ಬೇಬ, ತಿಮ್ಮಯ್ಯ, ಮಹಮ್ಮದ್ ಎಂ ಇ, ನಾಯಕಂಡ ಮುತ್ತಪ್ಪ , ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ಸಲೀಂ ಹ್ಯಾರಿಸ್, ಸೀದಿಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಹಾಗೂ ಪಕ್ಷದ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು. ಟೌನ್ ಮಹಿಯುದ್ದೀನ್ ಸುನ್ನಿ ಜುಮ್ಮ ಮಸೀದಿ ಕಾರ್ಯದರ್ಶಿ ಯೂನಸ್ ಸ್ವಾಗತಿಸಿ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))