ಜಾಲಿವುಡ್ ಎಂಟರ್ ಟೈನ್ಮೆಂಟ್ ಪಾರ್ಕ್ ಗೆ ವಿದ್ಯುತ್ ಸಂಪರ್ಕ ಕಡಿತ: ಎಚ್ಚರಿಕೆ

| Published : Aug 13 2025, 12:30 AM IST

ಜಾಲಿವುಡ್ ಎಂಟರ್ ಟೈನ್ಮೆಂಟ್ ಪಾರ್ಕ್ ಗೆ ವಿದ್ಯುತ್ ಸಂಪರ್ಕ ಕಡಿತ: ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಸ್ಥಳೀಯ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆಯದೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಜಾಲಿವುಡ್ ಎಂಟರ್ ಟೈನ್ ಮೆಂಟ್ ಪಾರ್ಕ್ ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಬೆಸ್ಕಾಂ ಎಚ್ಚರಿಕೆ ನೀಡಿದೆ.

ರಾಮನಗರ: ಸ್ಥಳೀಯ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆಯದೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಜಾಲಿವುಡ್ ಎಂಟರ್ ಟೈನ್ ಮೆಂಟ್ ಪಾರ್ಕ್ ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಬೆಸ್ಕಾಂ ಎಚ್ಚರಿಕೆ ನೀಡಿದೆ.

ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವಿಶೇಷ ಕಾರ್ಯಪಡೆ ಪೊಲೀಸ್ ನಿರೀಕ್ಷಕರು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಜಾಲಿವುಡ್ ಎಂಟರ್ ಟೈನ್ ಮೆಂಟ್ ಪಾರ್ಕ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆಯದಿರುವುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಪಡೆ ಪೊಲೀಸ್ ನಿರೀಕ್ಷಕರು ಜಾಲಿವುಡ್ ಎಂಟರ್ ಟೈನ್ ಮೆಂಟ್ ಪಾರ್ಕ್ ಗೆ ನೀಡಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಪತ್ರ ಬರೆದಿದ್ದಾರೆ.

ಆನಂತರ ಜಾಲಿವುಡ್ ಎಂಟರ್ ಟೈನ್ ಮೆಂಟ್ ಪಾರ್ಕ್ (ಇನ್ನೊವೇಟಿವ್ ಸ್ಟುಡಿಯೋಸ್ ಪ್ರೈ.ಲಿ.ಗೆ ನೋಟಿಸ್ ಜಾರಿ ಮಾಡಿರುವ ಬೆಸ್ಕಾಂ ಸಹಾಕ ಕಾರ್ಯಪಾಲಕ ಅಭಿಯಂತರರು, ಸ್ಥಳೀಯ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವ ನಕ್ಷೆಯನ್ನು ಹಾಜರು ಪಡಿಸುವಂತೆ ಸೂಚಿಸಿದ್ದಾರೆ.

ಸ್ಥಳೀಯ ಪ್ರಾಧಿಕಾರದಿಂದ ಯಾವುದೇ ನಕ್ಷೆ ಅನುಮೋದನೆ ಪಡೆಯದೆ ಅನಧಿಕೃತವಾಗಿ ಪಾರ್ಕ್ ನಡೆಸುತ್ತಿರುವ ಬಗ್ಗೆ ಬಂದಿರುವ ದೂರು ಬಿಎಂಆರ್ ಡಿಎಯ ವಿಶೇಷ ಕಾರ್ಯಪಡೆಯ ವಿಚಾರಣೆಯಲ್ಲಿದ್ದು, ವಿದ್ಯುತ್ ನಿಲುಗಡೆಗೊಳಿಸುವಂತೆ ಕೋರಿದ್ದಾರೆ. ವಿದ್ಯುತ್ ಸ್ಥಾವರಕ್ಕೆ ಸ್ಥಳೀಯ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವ ನಕ್ಷೆಯನ್ನು ನೋಟಿಸ್ ತಲುಪಿದ 7 ದಿನದೊಳಗೆ ಕಚೇರಿಗೆ ಸಲ್ಲಿಸಬೇಕು. ಇಲ್ಲದಿದ್ದರೆ ನಿಯಮಾನುಸಾರ ವಿದ್ಯುತ್ ನಿಲುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯಪಾಲಕ ಅಭಿಯಂತರರು ಎಚ್ಚರಿಕೆ ನೀಡಿದ್ದಾರೆ.(ಈ ಕೋಟ್ಗೆ ಮಗ್‌ಶಾಟ್‌ ಫೋಟೋ ಕಡ್ಡಾಯ)

ಕೋಟ್ .................

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆಯದೆ ರೆಸಾರ್ಟ್, ಹೋಮ್‌ ಸ್ಟೇ, ಮಾಲ್ , ಬಾರ್‌ಗಳು ತೆರೆಯುತ್ತಿವೆ. ಸ್ಥಳೀಯ ಗ್ರಾಪಂಗಳು ಡಬಲ್ ಟ್ಯಾಕ್ಸ್ ಆಸೆಗೆ ಬಿದ್ದು ಅನುಮೋದನೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆಯದ ಅನಧಿಕೃತ ಬಡಾವಣೆ ಅಭಿವೃದ್ಧಿಗಳನ್ನು ಟಾಸ್ಕ್ ಫೋರ್ಸ್ ಗುರುತಿಸಿ ಕಾನೂನು ಕ್ರಮ ಜರುಗಿಸಲಾಗುವುದು.

-ಗಾಣಕಲ್ ನಟರಾಜ್, ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ12ಕೆಆರ್ ಎಂಎನ್ 4,5.ಜೆಪಿಜಿ

4.ಜಾಲಿವುಡ್

5.ಗಾಣಕಲ್ ನಟರಾಜ್ , ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ.