ಸಾರಾಂಶ
ತಳ್ಳುಗಾಡಿಯಲ್ಲಿ ಬಲ್ಪಗಾಗಿ ಬಳಸುವ ಬ್ಯಾಟರಿಗೆ ಚಾರ್ಜ್ ಮಾಡಲು ಹೋದಾಗ ಆಕಸ್ಮಿಕವಾಗಿ ವೈರ್‌ನಿಂದ ವಿದ್ಯುತ್ ಸ್ವರ್ಶವಾಗಿ ವ್ಯಕ್ತಿಯೊರ್ವ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಗುರುವಾರ ಮಧ್ಯಾಹ್ನ12 ಗಂಟೆಯಲ್ಲಿ ಪಟ್ಟಣದ ವೇಣುಗೋಪಾಲ ದೇವಸ್ಥಾನದ ಬಳಿ ನಡೆದಿದೆ.
ಪಾವಗಡ: ತಳ್ಳುಗಾಡಿಯಲ್ಲಿ ಬಲ್ಪಗಾಗಿ ಬಳಸುವ ಬ್ಯಾಟರಿಗೆ ಚಾರ್ಜ್ ಮಾಡಲು ಹೋದಾಗ ಆಕಸ್ಮಿಕವಾಗಿ ವೈರ್‌ನಿಂದ ವಿದ್ಯುತ್ ಸ್ವರ್ಶವಾಗಿ ವ್ಯಕ್ತಿಯೊರ್ವ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಗುರುವಾರ ಮಧ್ಯಾಹ್ನ12 ಗಂಟೆಯಲ್ಲಿ ಪಟ್ಟಣದ ವೇಣುಗೋಪಾಲ ದೇವಸ್ಥಾನದ ಬಳಿ ನಡೆದಿದೆ.
ಪಾರ್ಸಿಲಾಲ್ ಮೃತ ದುರ್ದೈವಿ. ಇವರು ರಾಜಸ್ಥಾನದ ಮೂಲದವರಾಗಿದ್ದು, ಕಳೆದ 13 ವರ್ಷಗಳಿಂದ ಪಾವಗಡದಲ್ಲಿ ತಳ್ಳುಗಾಡಿಯಲ್ಲಿ ಸ್ವೀಟ್ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಸ್ವೀಟ್ ಮಾರಲು ತೆರಳುವ ವೇಳೆ ತಳ್ಳುಗಾಡಿಯಲ್ಲಿ ಬಲ್ಪಗಾಗಿ ಬಳಸುವ ಬ್ಯಾಟರಿಗೆ ಚಾರ್ಜ್ ಮಾಡಲು ಹೋದಾಗ ಆಕಸ್ಮಿಕವಾಗಿ ವೈರ್‌ನಿಂದ ವಿದ್ಯುತ್ ಸ್ವರ್ಶವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರಿಗೆ ಪತ್ನಿ, ಮೂರು ಮಕ್ಕಳಿದ್ದಾರೆ. ಅಂತ್ಯಕ್ರಿಯೆ ಪಟ್ಟಣದಲ್ಲಿ ನಡೆಯಲಿದೆ. ಪಾವಗಡ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.