ಜೆಡಿಎಸ್‌ಗೆ ಅಧಿಕಾರ: ದೇವೇಗೌಡರ ಆಸೆ ಈಡೇರಲಿದೆ

| Published : May 19 2025, 12:02 AM IST

ಜೆಡಿಎಸ್‌ಗೆ ಅಧಿಕಾರ: ದೇವೇಗೌಡರ ಆಸೆ ಈಡೇರಲಿದೆ
Share this Article
  • FB
  • TW
  • Linkdin
  • Email

ಸಾರಾಂಶ

ದೇವೇಗೌಡರಿಗೆ ಮುಂದೆ ರಾಜ್ಯದಲ್ಲಿ ಜೆಡಿಎಸ್ ೫ ವರ್ಷಗಳ ಕಾಲ ರಾಜ್ಯದ ಆಡಳಿತ ನಡೆಸಬೇಕೆಂಬ ಆಸೆಯನ್ನು ಹೊಂದಿದ್ದಾರೆ, ಅವರ ಆಸೆ ಖಂಡಿತವಾಗಿ ಮುಂದಿನ ದಿನಗಳಲ್ಲಿ ಈಡೇರಲಿದೆ. ದೇಶಕ್ಕೆ ಪ್ರಧಾನಿಯಾಗಿ ರಾಜ್ಯಕ್ಕೆ ಮುಖ್ಯ ಮಂತ್ರಿಯಾಗಿ ಅನೇಕ ಕೊಡುಗೆಗಳನ್ನು ನೀಡಿರುವುದು ಅವಿಸ್ಮರಣೀಯ. ಗೌಡಕ ಕನಸು ನನಸಾಗಲಿ.

ಕನ್ನಡಪ್ರಭ ವಾರ್ತೆ ಕೋಲಾರಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ೯೩ ಜನ್ಮ ದಿನವನ್ನು ಸಂಸದ ಎಂ.ಮಲ್ಲೇಶ್ ಬಾಬು ನೇತೃತ್ವದಲ್ಲಿ ನಗರದ ಶ್ರೀ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ವಿಶೇಷ ಪೂಜೆ ಹಾಗೂ ಕೇಕ್ ಕತ್ತರಿಸಿ ಹಂಚುವ ಮೂಲಕ ಆಚರಿಸಲಾಯಿತು. ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಭಗವಂತ ಮಾಜಿ ಪ್ರಧಾನಿ ದೇವೇಗೌಡರಿಗೆ ಆಯುಸ್ಸು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದರು. ಭಾನುವಾರ ತಿರುಪತಿಯಲ್ಲಿ ದೇವರ ಆಶೀರ್ವಾದ ಪಡೆಯಲು ತೆರಳಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್ ಆಡಳಿತಕ್ಕೆ ಬರಬೇಕು

, ದೇವೇಗೌಡರಿಗೆ ಮುಂದೆ ರಾಜ್ಯದಲ್ಲಿ ಜೆಡಿಎಸ್ ೫ ವರ್ಷಗಳ ಕಾಲ ರಾಜ್ಯದ ಆಡಳಿತ ನಡೆಸಬೇಕೆಂಬ ಆಸೆಯನ್ನು ಹೊಂದಿದ್ದಾರೆ, ಅವರ ಆಸೆ ಖಂಡಿತವಾಗಿ ಮುಂದಿನ ದಿನಗಳಲ್ಲಿ ಈಡೇರುವುದು ಖಚಿತವೆಂಬ ವಿಶ್ವಾಸವಿದೆ ಎಂದು ಹೇಳಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಬಾಬು ಮೌನಿ ಮಾತನಾಡಿ, ದೇವೇಗೌಡರು ರಾಜ್ಯದ ಧೀಮಂತ ನಾಯಕರು. ಜೆಡಿಎಸ್ ಕಟ್ಟಿ ಬೆಳೆಸಿದರು. ಈ ದೇಶಕ್ಕೆ ಪ್ರಧಾನಿಯಾಗಿ ರಾಜ್ಯಕ್ಕೆ ಮುಖ್ಯ ಮಂತ್ರಿಯಾಗಿ ಅನೇಕ ಕೊಡುಗೆಗಳನ್ನು ನೀಡಿರುವುದು ಅವಿಸ್ಮರಣೀಯ. ದೇವೇಗೌಡರ ಕನಸುಗಳು ಈಡೇರುವಂತಾಗಲಿ ಎಂದರು.

ದೇವೇಗೌಡರ ಆದರ್ಶ ಪಾಲಿಸಿ

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಣಕನಹಳ್ಳಿ ನಟರಾಜ್ ಮಾತನಾಡಿ, ನಮ್ಮ ದೇಶದ ಮಾಜಿ ಪ್ರಧಾನಿ ದೇವೇಗೌಡರ ಮಾರ್ಗದರ್ಶನ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಅವಶ್ಯವಿದೆ. ಎಲ್ಲರೂ ದೇವೇಗೌಡರು ಆದರ್ಶಗಳನ್ನು ಪಾಲಿಸೋಣಾ ಎಂದು ಕರೆ ನೀಡಿದರು. ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಡಿ.ವಿ.ಹರೀಶ್, ಟಿ.ಎ.ಪಿ.ಎಂ.ಸಿ.ಎಸ್. ಅಧ್ಯಕ್ಷ ವಡಗೂರು ರಾಮು, ತಾಪಂ ಮಾಜಿ ಸದಸ್ಯ ಮಂಜುನಾಥ್, ನಗರಸಭೆ ಸದಸ್ಯ ಸಿ.ರಾಕೇಶ್ ಗೌಡ, ನಗರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್, ಕುಡುವನಹಳ್ಳಿ ಶಿವಣ್ಣ, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಂಕರೇಗೌಡ ಇದ್ದರು.