ಸಾರಾಂಶ
ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ೧೧೦ನೇ ಜಯಂತಿ ಮಹೋತ್ಸವ ಆಚರಣಾ ನಿಮಿತ್ತವಾಗಿ ಮೈಸೂರಿನ ಶ್ರೀ ಶಿವರಾತ್ರಿ ರಾಜೇಂದ್ರ ಕಲಾ ಬಳಗದ ವತಿಯಿಂದ ಆ. ೨೯ರಂದು ರಾತ್ರಿ ೯ ಗಂಟೆಗೆ ಸುತ್ತೂರು ಶಾಖಾ ಮಠದ ಆವರಣದಲ್ಲಿ ಪ್ರಭುಲಿಂಗಲೀಲೆ ನಾಟಕ ಪ್ರದರ್ಶನ ಮಾಡಲಾಗುತ್ತಿದೆ ಎಂದು ವೀರಶೈವ ಲಿಂಗಾಯಿತ ಮಹಾಸಭಾದ ನಿರ್ದೇಶಕ, ಅಲ್ಲಮ ಪ್ರಭು ಪಾತ್ರಧಾರಿ ಕಲ್ಮಹಳ್ಳಿ ನಟರಾಜ್ ಹೇಳಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ೧೧೦ನೇ ಜಯಂತಿ ಮಹೋತ್ಸವ ಆಚರಣಾ ನಿಮಿತ್ತವಾಗಿ ಮೈಸೂರಿನ ಶ್ರೀ ಶಿವರಾತ್ರಿ ರಾಜೇಂದ್ರ ಕಲಾ ಬಳಗದ ವತಿಯಿಂದ ಆ. ೨೯ರಂದು ರಾತ್ರಿ ೯ ಗಂಟೆಗೆ ಸುತ್ತೂರು ಶಾಖಾ ಮಠದ ಆವರಣದಲ್ಲಿ ಪ್ರಭುಲಿಂಗಲೀಲೆ ನಾಟಕ ಪ್ರದರ್ಶನ ಮಾಡಲಾಗುತ್ತಿದೆ ಎಂದು ವೀರಶೈವ ಲಿಂಗಾಯಿತ ಮಹಾಸಭಾದ ನಿರ್ದೇಶಕ, ಅಲ್ಲಮ ಪ್ರಭು ಪಾತ್ರಧಾರಿ ಕಲ್ಮಹಳ್ಳಿ ನಟರಾಜ್ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಭಕ್ತಿ ಪ್ರಧಾನ ನಾಟಕ ಪ್ರದರ್ಶನವ ಏರ್ಪಡಿಸಲಾಗಿದೆ ಎಂದರು.
೧೨ನೇ ಶತಮಾನದಲ್ಲಿ ಜಾತ್ಯಾತೀತಾ ಹಾಗೂ ಮಾನವತೆಯ ಸಂದೇಶ ಸಾರಿ ಮಾನವ ಒಂದೇ ಎಂದು ಸಾರಿದ ಶರಣರನ್ನು ನಾವು ನೋಡಲು ಸಾಧ್ಯವಿಲ್ಲ. ಆದರೆ ಇಂತಹ ನಾಟಕಗಳ ಮೂಲಕ ಆವರ ಸಂದೇಶಗಳನ್ನು ಹೇಳುವ ಮೂಲಕ ಜನರನ್ನು ಜಾಗೃತಗೊಳಿಸುವುದೇ ಈ ನಾಟಕ ಪ್ರದರ್ಶನದ ಉದ್ದೇಶ ಎಂದರು.ಸಿದ್ದಗಂಗಾ ಶ್ರೀಗಳು ಸೇರಿದಂತೆ ಹಲವಾರು ಹರಗುರು ಚರಮೂರ್ತಿಗಳು ಈ ನಾಟಕವನ್ನು ವೀಕ್ಷಣೆ ಮಾಡಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ.
ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ನಿರ್ದೇಕರಾದ ಕಲಾವಿದ ಎನ್. ಪುರುಷೋತ್ತಮ್, ಬಿಸಲವಾಡಿ ಉಮೇಶ್, ಕಲಾವಿದರಾದ ನಂಜೇದೇವನಪುರ ಶೇಖರಪ್ಪ, ಶಿವಕುಮಾರ್, ಮುಖಂಡರಾದ ಟಿ. ಗುರು, ತೊರವಳ್ಳಿ ಶಿವಕುಮಾರ್ ಇದ್ದರು.