ಪ್ರಾಚ್ಯ ವಿದ್ಯಾ ಸಮ್ಮೇಳನ: ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಸನ್ಮಾನ

| Published : Oct 26 2024, 01:06 AM IST / Updated: Oct 26 2024, 01:07 AM IST

ಪ್ರಾಚ್ಯ ವಿದ್ಯಾ ಸಮ್ಮೇಳನ: ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನದಲ್ಲಿ ಭಾಗವಹಿಸಿದ ದೇಶದ ವಿವಿಧ ಭಾಗಗಳ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಪರ್ಯಾಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಐತಿಹಾಸಿಕ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನದಲ್ಲಿ ಭಾಗವಹಿಸಿದ ದೇಶದ ವಿವಿಧ ಭಾಗಗಳ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಪರ್ಯಾಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಸನ್ಮಾನಿಸಿದರು. ಈ ಸಂದರ್ಭ ತಿರುಪತಿಯ ಶ್ರೀವೇಂಕಟೇಶ್ವರ ವೇದ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ರಾಣಿ ಸದಾಶಿವ ಮೂರ್ತಿ, ಗುಜರಾತಿನ ಸೋಮನಾಥ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಸುಖಾಂತ ಕುಮಾರ್ ಸೇನಾಪತಿ, ಭಾರತ ಸರ್ಕಾರದ ಅಧೀನದ ಭಾರತೀಯ ದರ್ಶನ ಅನುಸಂಧಾನ ಪರಿಷತ್ ನ ಕಾರ್ಯದರ್ಶಿಗಳಾದ ಡಾ. ಸಚ್ಚಿದಾನಂದ ಮಿಶ್ರ, ಮಹರ್ಷಿ ಪಾಣಿನಿ ಮತ್ತು ವೈದಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆಚಾರ್ಯ ವಿಜಯಕುಮಾರ್ ಮೆನನ್, ಅಸ್ಸಾಂನ ಕುಮಾರ ಭಾಸ್ಕರ ವರ್ಮಾ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಪ್ರಹ್ಲಾದ ಜೋಶಿ, ಕಾಶಿ ಹಿಂದೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಆಚಾರ್ಯ ಗೋಪಬಂಧು ಮಿಶ್ರ, ತಿರುಪತಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಸತ್ಯನಾರಾಯಣ ಆಚಾರ್ಯ, ಚಾಣಕ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅವಧಾನಿ ಡಾ. ರಾಮಕೃಷ್ಣ ಪೆಜತ್ತಾಯ, ಬೆಂಗಳೂರಿನ ಜೈನ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಅಯ್ಯಂಗಾರ್, ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ವೇದಾಂತ ಉಪನ್ಯಾಸಕ ವಿದ್ವಾನ್ ಸುಧೀಂದ್ರ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿಗಳಾದ ವಿದ್ವಾನ್ ಎಂ. ಪ್ರಸನ್ನ ಆಚಾರ್ಯ, ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ ನ ಪ್ರಮುಖರಾದ ಆಚಾರ್ಯ ವೀರನಾರಾಯಣ ಪಾಂಡುರಂಗಿ, ಉಡುಪಿಯ ಡಾ. ಬಿ. ಗೋಪಾಲಾಚಾರ್ಯ ಮುಂತಾದವರು ಹಾಜರಿದ್ದರು.