ಸದ್ವಿದ್ಯಾ ಶಾಲೆಯಿಂದ ಪ್ರಾಯೋಗಿಕ ಅಧ್ಯಯನ ಕಾರ್ಯಕ್ರಮ

| Published : Sep 06 2024, 01:03 AM IST

ಸಾರಾಂಶ

ತರೀಕೆರೆ, ಪಟ್ಟಣದ ಸದ್ವಿದ್ಯಾ ಪಬ್ಲಿಕ್ ಶಾಲೆ ಮಕ್ಕಳಿಗೆ ಕುಶಲಕರ್ಮಿಗಳ ಬಗ್ಗೆ ಪ್ರಾಯೋಗಿಕ ಅಧ್ಯಯನಕ್ಕೆ ಪಟ್ಟಣದಲ್ಲಿ ಮಡಿಕೆ ಮತ್ತು ಮಣ್ಣಿನ ಗಣೇಶ ತಯಾರಿಕೆ ಸ್ಥಳಕ್ಕೆ ಕರೆದೊಯ್ದು ಪರಿಚಯಿಸಲಾಯಿತು.

ಶಾಲೆ ಪ್ರಾಂಶುಪಾಲರಿಂದ ಮಾಹಿತಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದ ಸದ್ವಿದ್ಯಾ ಪಬ್ಲಿಕ್ ಶಾಲೆ ಮಕ್ಕಳಿಗೆ ಕುಶಲಕರ್ಮಿಗಳ ಬಗ್ಗೆ ಪ್ರಾಯೋಗಿಕ ಅಧ್ಯಯನಕ್ಕೆ ಪಟ್ಟಣದಲ್ಲಿ ಮಡಿಕೆ ಮತ್ತು ಮಣ್ಣಿನ ಗಣೇಶ ತಯಾರಿಕೆ ಸ್ಥಳಕ್ಕೆ ಕರೆದೊಯ್ದು ಪರಿಚಯಿಸಲಾಯಿತು. ವಯೋವೃದ್ದೆ ಮಡಕೆಗಳನ್ನು ಮಾಡುತ್ತಿರುವುದನ್ನು ಕಂಡು ಮಕ್ಕಳು ಬೆರಗಾದರು. ವೃದ್ಧೆ ಜಯಮ್ಮ ಮಕ್ಕಳಿಗೆ ಮಡಿಕೆ ಮತ್ತು ಗಣೇಶನನ್ನು ಹೇಗೆ ತಯಾರಿಸುವುದು, ಇದಕ್ಕೆ ಮಣ್ಣನ್ನು ಹೇಗೆ ಹದ ಮಾಡುವ ರೀತಿ ಅದಕ್ಕೆ ಎಷ್ಟು ಸಮಯ ಬೇಕಾಗುವ ಮಾಹಿತಿಯನ್ನು ವಿವರವಾಗಿ ತಿಳಿಸಿದರು.

ವೃದ್ಧೆ ಜಯಮ್ಮ ಮಾತನಾಡಿ ಮಕ್ಕಳಿಗೆ ಇದು ನಮ್ಮ ಕುಲಕಸುಬು ನಾವು ಎರಡು ತಲೆಮಾರುಗಳಿಂದ ಈ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದೇವೆ. ನಾವು ಆರ್ಥಿಕವಾಗಿ ಸಬಲರಾಗಿದ್ದರೂ ಈ ಕಸುಬು ಬಿಡಲು ಮನಸ್ಸಿಲ್ಲ. ನಾವು ಮಾನಸಿಕ, ದೈಹಿಕವಾಗಿ ಆರೊಗ್ಯ ವಾಗಿರಲು ಈ ಕಸುಬು ಮುಂದುವರಿಸಿಕೊಂಡು ಹೋಗುವುದು ಅವಶ್ಯಕ ಎಂದು ಹೇಳಿದರು.

ಶಾಲೆ ಪ್ರಾಂಶುಪಾಲರಾದ ಹರ್ಷಿಣಿ ಡಿ,ಆರ್. ಮಾತನಾಡಿ ಮಡಕೆ ಮಾಡುವವರು ಬಹಳಷ್ಟು ಶ್ರಮ ವಹಿಸುತ್ತಾರೆ. ಅಷ್ಟು ಸುಂದರವಾದ ಮಡಿಕೆಗಳನ್ನು ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಮಕ್ಕಳಿಗೆ ವಿವರಿಸಿದರು. ಗಣೇಶನನ್ನು ತಯಾರು ಮಾಡುವುದನ್ನು ಆಶ್ಚರ್ಯದಿಂದ ವೀಕ್ಷಿಸಿದ ಮಕ್ಕಳು ಈ ವರ್ಷದ ಗೌರಿ ಗಣೇಶ ಹಬ್ಬಕ್ಕೆ ಗಣೇಶನನ್ನು ನಾವೇ ಮಣ್ಣಿನಿಂದ ತಯಾರು ಮಾಡುತ್ತೇವೆ ಎಂದು ಖುಷಿಯಿಂದ ಹೇಳಿದರು.

5ಕೆಟಿಆರ್.ಕೆ.8ಃ

ತರೀಕೆರೆಯಲ್ಲಿ ಸದ್ವಿದ್ಯಾ ಪಬ್ಲಿಕ್ ಶಾಲೆಯಿಂದ ಶಾಲಾ ಮಕ್ಕಳಿಗೆ ಮಡಿಕೆ , ಗಣೇಶ ತಯಾರಿ ಕುರಿತು ಪ್ರಾಯೋಗಿಕ ಅಧ್ಯಯನ ನಡೆಸಲಾಯಿತು. ಶಾಲೆ ಪ್ರಾಂಶುಪಾಲರಾದ ಹರ್ಷಿಣಿ ಡಿ.ಆರ್. ಇದ್ದರು.