ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟಮನುಷ್ಯನಿಗೆ ರೋಗವನ್ನು ನಿಯಂತ್ರಿಸುವ ಶಕ್ತಿ ಹಾಗೂ ಮಾತ್ರೆ-ಇಂಜೆಕ್ಷನ್ ಇಲ್ಲದೇ ರೋಗ ತಡೆಗಟ್ಟುವ, ಸುಲಭ ಮಾರ್ಗವೇ ಯೋಗಾಭ್ಯಾಸ ಎಂದು ಮುಖ್ಯಶಿಕ್ಷಕ ಎಚ್.ಎಂ. ಭಾಸ್ಕರ್ ಹೇಳಿದರು.ತಾಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಯೋಗ, ಕೇವಲ ವ್ಯಾಯಾಮ ಅಲ್ಲ. ಅದು ಸಂಪೂರ್ಣ ಜೀವನ ವಿಜ್ಞಾನ, ದೈಹಿಕ ಆರೋಗ್ಯದ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಪ್ರಾಣಾಯಾಮದಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುಸುವ ಮೂಲಕ ಶೀತ, ಕೆಮ್ಮು ಕಡಿಮೆಯಾಗುತ್ತದೆ ಎಂದರು.

ಯೋಗ ಶಿಕ್ಷಕಿ ದೇವಮ್ಮ ಮಾತನಾಡಿ, ಅನುಲೋಮ-ವಿಲೋಮ, ಭ್ರಾಮರಿ ಪ್ರಾಣಾಯಾಮದಿಂದ ಮನಸ್ಸು ಶಾಂತವಾಗುತ್ತದೆ. ಕಾರ್ಟಿಸೋಲ್ ಹಾರ್ಮೋನ್ ಕಡಿಮೆಯಾಗುತ್ತದೆ. ಏಕಾಗ್ರತೆ ಹೆಚ್ಚಳವಾಗುತ್ತದೆ. ವೃಕ್ಷಾಸನ, ತ್ರಾಟಕದಿಂದ ಮಕ್ಕಳಲ್ಲಿ ಓದಿನ ಕಡೆ ಗಮನ ಹೆಚ್ಚುತ್ತದೆ ಎಂದರು.

ಶಾಲೆಯ ಶಿಕ್ಷಕರಾದ ನಾರಾಯಣರೆಡ್ಡಿ, ನಾರಾಯಣಸ್ವಾಮಿ.ವಿ, ನಾಗರಾಜು ಮುಂತಾದವರು ಹಾಜರಿದ್ದರು.ಸುದ್ದಿ ಚಿತ್ರ ೧ ಶಿಡ್ಲಘಟ್ಟ ತಾಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಿದರು.