ಕರ್ನಾಟಕ ಸಂಗೀತ ಅಕಾಡೆಮಿಯಿಂದ ನೀಡಲಾಗುವ 2025-26 ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ಗಮಕಿ ಮಧೂರು ಮೋಹನ ಕಲ್ಲೂರಾಯ ಹಾಗೂ ಅದೇ ವಿಭಾಗದ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವ ಹೆಸರಾಂತ ನಾದಸ್ವರ ವಾದಕ ನಾಗೇಶ್ ಎ.ಬಪ್ಪನಾಡು ಅವರಿಂದಾಗಿ ತುಳುನಾಡಿನ ಶ್ರೇಷ್ಠ ಕಲೆಗಳಿಗೆ ಗೌರವ ಸಂದಾಯವಾದಂತಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ನುಡಿದರು.

ಮಂಗಳೂರು: ಕರ್ನಾಟಕ ಸಂಗೀತ ಅಕಾಡೆಮಿಯಿಂದ ನೀಡಲಾಗುವ 2025-26 ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ಗಮಕಿ ಮಧೂರು ಮೋಹನ ಕಲ್ಲೂರಾಯ ಹಾಗೂ ಅದೇ ವಿಭಾಗದ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವ ಹೆಸರಾಂತ ನಾದಸ್ವರ ವಾದಕ ನಾಗೇಶ್ ಎ.ಬಪ್ಪನಾಡು ಅವರಿಂದಾಗಿ ತುಳುನಾಡಿನ ಶ್ರೇಷ್ಠ ಕಲೆಗಳಿಗೆ ಗೌರವ ಸಂದಾಯವಾದಂತಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ನುಡಿದರು.ಕಲ್ಕೂರ ಪ್ರತಿಷ್ಠಾನದಿಂದ ಕರ್ನಾಟಕ ಕಲಾಶ್ರೀ ಮಧೂರು ಮೋಹನ ಕಲ್ಲೂರಾಯ ಹಾಗೂ ನಾದಸ್ವರ ವಾದಕ ನಾಗೇಶ್ ಎ.ಬಪ್ಪನಾಡು ಈ ಇಬ್ಬರು ಸಾಧಕರನ್ನು ಸೋಮವಾರ ಪ್ರತಿಷ್ಠಾನದ ಕಚೇರಿಯಲ್ಲಿ ಅಭಿನಂದಿಸಿ ಗೌರವಿಸಲಾಯಿತು.ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಈ ಇಬ್ಬರೂ ಕಲಾವಿದರು ತಮ್ಮ ತಮ್ಮ ಕಲಾ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಇತರ ಕಲಾವಿದರಿಗೂ ಪ್ರೇರಣೆ ನೀಡುವಂತಾಗಲೆಂದು ಹಾರೈಸಿದರು.ಈ ಸಂದರ್ಭದಲ್ಲಿ ಪೊಳಲಿ ನಿತ್ಯಾನಂದ ಕಾರಂತ, ಪ್ರೊ.ಜಿ.ಕೆ ಭಟ್ ಸೇರಾಜೆ, ನಿತ್ಯಾನಂದ ರಾವ್ ಸುರತ್ಕಲ್, ತಮ್ಮ ಲಕ್ಷ್ಮಣ್, ಎ.ಆರ್ ಸುಬ್ಬಯ್ಯಕಟ್ಟೆ, ಜನಾರ್ದನ ಹಂದೆ, ಬಾಲಕೃಷ್ಣ ಐತಾಳ್, ಪೂರ್ಣಿಮಾ ರಾವ್ ಪೇಜಾವರ, ಗೀತಾ ಸರಳಾಯ, ಶಶಿಪ್ರಭಾ ಐತಾಳ್, ಸುಮಾ ಪ್ರಸಾದ್ ಮತ್ತಿತರರು ಇದ್ದರು.

ಡಾ.ಮಂಜುಳಾ ಶೆಟ್ಟಿ ನಿರೂಪಿಸಿದರು, ರವಿ ಅಲೆವೂರಾಯ ವಂದಿಸಿದರು.