ಸುದ್ದಿ ಶುದ್ಧಗೊಳಿಸುವ ಸುದ್ದಿಮನೆಯವರ ಕಾರ್ಯ ಶ್ಲಾಘನಿಯ: ಧಲಭಂಜನ್‌

| Published : Aug 20 2025, 02:00 AM IST

ಸುದ್ದಿ ಶುದ್ಧಗೊಳಿಸುವ ಸುದ್ದಿಮನೆಯವರ ಕಾರ್ಯ ಶ್ಲಾಘನಿಯ: ಧಲಭಂಜನ್‌
Share this Article
  • FB
  • TW
  • Linkdin
  • Email

ಸಾರಾಂಶ

ವರದಿಗಾರರು ಕಳುಹಿಸಿದ ಸುದ್ದಿಗಳನ್ನು ತಿದ್ದಿ, ತೀಡಿ ರೂಪುಗೊಳಿಸುವ ಸುದ್ದಿ ಮನೆಯವರ ಕಾರ್ಯ ಮಾಧ್ಯಮದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸುದ್ದಿ ಯಾವ ರೀತಿ ಜನರ ಮನ ತಟ್ಟುತ್ತದೆಯೋ ಆ ರೀತಿ ಸುದ್ದಿಯನ್ನು ಓದುಗರಿಗೆ ನೀಡುವ ಇವರ ಕಾರ್ಯ ಶ್ಲಾಘನೀಯ. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ವರದಿಗಾರರಿಗೆ ನಾಲ್ಕು ಪ್ರಶಸ್ತಿ ಕೊಡಲಾಗುತ್ತದೆ. ಸುದ್ದಿಮನೆಯವರಿಗೂ ಐದನೇ ಪ್ರಶಸ್ತಿ ಕೊಡಬೇಕು ಎಂಬ ಆಶಯವಿದೆ ಎಂದು ಕಾನಿಪ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ಧಲಭಂಜನ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಪಟ್ಟಣದ ಕೆಎಲ್ಇ ಪಾಲಿಟೆಕ್ನಿಕ್ ನಲ್ಲಿ ನಡೆದ ಕಾನಿಪ ಸಂಘ ಸ್ಥಳೀಯ ಘಟಕ ಹಾಗೂ ಮಧುರಾ ಪ್ರಕಾಶನ ವತಿಯಿಂದ ದಿ. ಶಾಂತವೀರಯ್ಯ ಮನ್ನಯ್ಯನವರಮಠ ಅವರ ಸ್ಮರಣಾರ್ಥ ಸುದ್ದಿಮನೆಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಕೊಡಮಾಡುವ ಸುದ್ದಿಮನೆ ಚೇತನ ಪ್ರಶಸ್ತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸುದ್ದಿಮನೆ ಚೇತನ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಪತ್ರಕರ್ತ ಈಶ್ವರ ಹನಗಂಡಿ ಮಾತನಾಡಿ, ನಿರಂತರ ದಿನಪತ್ರಿಕೆ ಓದಿ, ಹೆಚ್ಚಿನ ಜ್ಞಾನ ಪಡೆಯಿರಿ. ಎಲೆಮರೆಯ ಕಾಯಿಯಂತಿರುವ ಸುದ್ದಿಮನೆ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸ್ಥಳೀಯ ಕಾನಿಪ ಸಂಘದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಪ್ರಾಸ್ತಾವಿಕ ಮಾತನಾಡಿದರು. ದಿ. ಶಾಂತವೀರಯ್ಯ ಮನ್ನಯ್ಯನವರಮಠ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಲಾಯಿತು. ಈಶ್ವರ ಹನಗಂಡಿಯವರಿಗೆ ಸುದ್ದಿಮನೆ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಪತ್ರಕರ್ತ ಮೀರಾ.ಎಚ್.ನದಾಫ್ ಅವರಿಗೆ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಪಾಲಿಟೆಕ್ನಿಕ್ ನ ಪ್ರಾಚಾರ್ಯ ಎಸ್ ಐ ಕುಂದಗೋಳ, ಗೌರವ ಉಪಸ್ಥಿತಿ ಅನಸೂಯಾ ಮನ್ನಯ್ಯನವರಮಠ, ಜಿಲ್ಲಾ ಕಾನಿಪ ಸಂಘದ ಸದಸ್ಯ ಎಸ್.ಎಸ್. ಈಶ್ವರಪ್ಪಗೋಳ, ಕೆಎಲ್ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಸಂತೋಷ ಹುದ್ದಾರ, ಶ್ರೀಶೈಲ ವಜ್ಜರಮಟ್ಟಿ, ಜಿ.ಎಸ್ ಗೊಂಬಿ, ಎಂ ಎನ್ ನದಾಫ್, ಮಹಾಂತೇಶ ಮನ್ನಯ್ಯನವರಮಠ, ಕುಮಾರ ಮನ್ನಯ್ಯನವರಮಠ, ವಿಶಾಲಾಕ್ಷಿ ಮನ್ನಯ್ಯನವರಮಠ, ಸವಿತಾ ಮನ್ನಯ್ಯನವರಮಠ, ಜಯಶ್ರೀ ಮನ್ನಯ್ಯನವರಮಠ, ರಾಜೇಶ್ವರಿ ಹಿರೇಮಠ ಸೇರಿದಂತೆ ಪತ್ರಕರ್ತರು ಮತ್ತು ವಿದ್ಯಾರ್ಥಿಗಳಿದ್ದರು. ಇಲಾಯಿ ಜಮಖಂಡಿ ಸ್ವಾಗತಿಸಿ,ಚಂದ್ರಶೇಖರ ಮೋರೆ ನಿರೂಪಿಸಿ,ಶಿವಲಿಂಗ ಸಿದ್ನಾಳ ವಂದಿಸಿದರು.