ಪ್ರಜ್ವಲ್‌ ಪರಾರಿ ಆಗೋವರ್ಗೂ ರಾಜ್ಯ ಸರ್ಕಾರ ಮಲಗಿತ್ತಾ?: ಯತ್ನಾಳ್‌

| Published : May 02 2024, 01:32 AM IST / Updated: May 02 2024, 10:58 AM IST

BasavanaGowda Patel Yatnal
ಪ್ರಜ್ವಲ್‌ ಪರಾರಿ ಆಗೋವರ್ಗೂ ರಾಜ್ಯ ಸರ್ಕಾರ ಮಲಗಿತ್ತಾ?: ಯತ್ನಾಳ್‌
Share this Article
  • FB
  • TW
  • Linkdin
  • Email

ಸಾರಾಂಶ

  ಪ್ರಜ್ವಲ್ ಪರಾರಿ ಆಗುವವರೆಗೂ ರಾಜ್ಯ ಸರ್ಕಾರವೇನು ಮಲಗಿತ್ತಾ ಎಂದು ವಿಜಯಪುರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದರು.

 ದಾವಣಗೆರೆ : ಪ್ರಜ್ವಲ್ ರೇವಣ್ಣ ಸಂಸದನಾಗಿದ್ದು, 2019ರಲ್ಲಿ ಕಾಂಗ್ರೆಸ್‌, ಜೆಡಿಎಸ್ ಮೈತ್ರಿ ವೇಳೆ. ಇದಕ್ಕೂ ಬಿಜೆಪಿಗೂ ಏನು ಸಂಬಂಧ? ಈಗ ತನಿಖೆ ಮಾಡುತ್ತಿರುವುದು ಯಾರು? ರಾಜ್ಯದಲ್ಲಿ ಯಾರ ಸರ್ಕಾರ ಇದೆ? ಪ್ರಜ್ವಲ್ ಪರಾರಿ ಆಗುವವರೆಗೂ ರಾಜ್ಯ ಸರ್ಕಾರವೇನು ಮಲಗಿತ್ತಾ ಎಂದು ವಿಜಯಪುರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವ್ಯವಸ್ಥಿತವಾಗಿ ಪ್ರಕರಣ‍ ಮುಚ್ಚಿ ಹಾಕಲೆಂದೇ ಕೆಲವೊಂದು ಅಡ್ಜೆಸ್ಟ್‌ಮೆಂಟ್ ರಾಜಕಾರಣಿಗಳ ಉದ್ದೇಶವಿದೆ. ರಾಜ್ಯದಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಹಗರಣ ಏನಾಯಿತು? ಏನಾದರೂ ಹೊರಗೆ ಬಿದ್ದಿತಾ? ಗಾಂಜಾ, ಅಫೀಮು ಕೇಸ್ ಏನಾದವು? ಪೋಕ್ಸೋದ ಎರಡು ಪ್ರಕರಣ ದಾಖಲಾದರೂ ಏನೂ ಆಗಲಿಲ್ಲ. ಸಿನಿಮಾ ನಟಿಯರ ಬಂಧನವಾಗಿ, ಬಂಧಿತರ ಮೊಬೈಲ್ ಸಿಕ್ಕಿತ್ತು. ಮೊಬೈಲ್‌ನಲ್ಲಿ ಯಾವ ರಾಜಕಾರಣಿಯ ಮಗ ಇದ್ದನೆಂಬುದು ಬಹಿರಂಗವಾಯಿತಾ? ಎಲ್ಲವನ್ನೂ ಮುಚ್ಚಿ ಹಾಕಿದರು ಎಂದು ಟೀಕಿಸಿದರು.

ಪೋಕ್ಸೋದಡಿ 2 ಪ್ರಕರಣ ದಾಖಲಾಗಿದ್ದು, ಸುಪ್ರೀಂ ಕೋರ್ಟ್‌ ಆರೋಪಿ ಸ್ವಾಮಿಯನ್ನು ಒಳಗೆ ಹಾಕಲು ಆದೇಶಿತು ಎಂದು ಅವರು ಸರ್ಕಾರದ ವಿರುದ್ಧ ಹರಿಹಾಯ್ದರು. ನೀವು ಹೊಂದಾಣಿಕೆ ಮಾಡಿಕೊಂಡಿದ್ದೀರಿ. ನಿಮ್ಮಿಂದ ದಿಟ್ಟ ಕ್ರಮ ಕೈಗೊಳ್ಳಲು ಆಗುವುದಿಲ್ಲವೆಂದರೆ ಪ್ರಕರಣಗಳನ್ನೆಲ್ಲಾ ಸಿಬಿಐಗೆ ಕೊಡಿ. ನಾವು ಸಿಬಿಐಗೆ ಒಪ್ಪಿಸುವಂತೆ ಬೇಡಿಕೆ ಇಡುತ್ತಿದ್ದೇವೆ. ನೀವು ಕೊಡುತ್ತಿಲ್ಲ. ಚುನಾವಣೆ ಹಿನ್ನೆಲೆ ಇಷ್ಟೆಲ್ಲಾ ಕೆಲಸ ಆಗಿದೆ. ರಾಜ್ಯದಲ್ಲಿ ಎರಡು ಫ್ಯಾಕ್ಚರಿ ಇವೆ. ಈಗಾಗಲೇ ಅದರಲ್ಲೊಂದು ಫ್ಯಾಕ್ಟರಿ ಯಾವುದೆಂದು ಕುಮಾರಸ್ವಾಮಿ ಹೇಳಿದ್ದಾರೆ. ಇನ್ನೊಂದು ಸಿಡಿ, ಪೆನ್ ಡ್ರೈವ್ ಫ್ಯಾಕ್ಚರಿ ಇದೆ. ಅದನ್ನು 8ನೇ ತಾರೀಖು ಬಹಿರಂಗವಾಗಿ ಹೇಳುತ್ತೇನೆ ಎಂದು ತಿಳಿಸಿದರು.

ಇ‍ವೆರೆಡೂ ಫ್ಯಾಕ್ಟರಿಗಳ ಕೆಲಸವೇ ಪೆನ್‌ ಡ್ರೈವ್‌ದ್ದಾಗಿದೆ. ಇಬ್ಬರೂ ಬೇರೆ ಬೇರೆ ಪಕ್ಷದಲ್ಲಿದ್ದಾರೆ. ಇಬ್ಬರದೂ ಸಿಡಿ ಬಿಸಿನೆಸ್ ಒಂದೇ ಇದೆ. ಇಬ್ಬರೂ ಹಲ್ಕಾ ರಾಜಕಾರಣ ಮಾಡುತ್ತಿದ್ದಾರೆ. ಎರಡೂ ಕುಟುಂಬಗಳು ರಾಜ್ಯದ ರಾಜಕಾರಣ‍ವನ್ನೇ ಹಾಳುಗೆಡವುತ್ತಿದ್ದಾರೆ. ತನಿಖೆಯಿಂದ ಪೆನ್ ಡ್ರೈವ್ ಯಾರು ಬಿಡುಗಡೆ ಮಾಡಿದ್ದು ಎಂಬುದು ಗೊತ್ತಾಗಲಿದೆ. ಇಡೀ ಪ್ರಕರಣವನ್ನು ಸಂತ್ರಸ್ತ ಮಹಿಳೆಯರ ಗೌರವದ ದೃಷ್ಟಿಯಿಂದ ಗೌಪ್ಯವಾಗಿಡಬೇಕಿತ್ತು. ಆದರೆ, ಉದ್ದೇಶಪೂರ್ವಕವಾಗಿ ಚುನಾವಣೆ ವೇಳೆ ಬ್ಲಾಕ್ ಮೇಲ್ ಮಾಡಲು ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕೋಟ್‌ ಪೆನ್ ಡ್ರೈವ್ ಬಿಡುಗಡೆ ಮೂಲಕ ಭಯ ಬೀಳಿಸಿ, ಆ ಕುಟುಂಬದ ಮರ್ಯಾದೆ ಕಳೆಯುವ ಕೆಲಸ ಮಾಡಿದ್ದಾರೆ. ಚುನಾವಣೆ ಮುಂಚೆಯೇ ಬಿಡುಗಡೆ ಮಾಡಬೇಕಿತ್ತು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಇದ್ದಾಗಲೇ ಬಿಡುಗಡೆ ಮಾಡಬೇಕಿತ್ತು. ಈಗ ಲೋಕಸಭೆ ಚುನಾವಣೆ ಉದ್ದೇಶದಿಂದಲೇ ಬಿಡುಗಡೆ ಮಾಡಿದ್ದಾರೆ

- ಬಸವನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಮುಖಂಡ

ವಚನಾನಂದ ಸ್ವಾಮಿ ಜೋಷಿ-ಸಿದ್ದೇಶ್ವರಗೆ ಆಶೀರ್ವಾದ ಮಾಡ್ತೀನಿ ಬಾ ಅಂದ್ರಂತೆ! ಕನ್ನಡಪ್ರಭ ವಾರ್ತೆ, ದಾವಣಗೆರೆ

ಹರಿಹರದ ವಚನಾನಂದ ಸ್ವಾಮಿಗೆ ಕೆಲಸ ಏನಿದೆ? ಇಷ್ಟು ದಿನ ಕಾಂಗ್ರೆಸ್‌ಗೆ ಓಟು ಹಾಕಲು ಹೇಳಿದ್ದ. ಈಗ ಪ್ರಹ್ಲಾದ್ ಜೋಷಿಗೆ ಫೋನ್ ಮಾಡಿ, ಆಶೀರ್ವಾದ ಮಾಡ್ತೀನಿ ಬಾ ಅಂದ್ರಂತೆ. ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರಗೂ ನಾಳೆ ಭೇಟಿ ಮಾಡಲು ಹೇಳಿದ್ದಾರಂತೆ ಎಂದು ವಿಜಯಪುರ ಶಾಸಕ, ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿವರೆಗೆ ಐದು ಸಲ ಸಂಸದ ಸಿದ್ದೇಶ್ವರ ಭೇಟಿಗೆ ಅವಕಾಶ ಕೇಳಿದ್ದರೂ ಅಪಾಯಿಂಟ್‌ಮೆಂಟ್ ಕೊಡದ ವಚನಾನಂದ ಸ್ವಾಮೀಜಿ ಈಗ ದಿಢೀರನೇ ಪ್ರಹ್ಲಾದ ಜೋಷಿಗೆ, ಸಿದ್ದೇಶ್ವರಗೆ ಆಶೀರ್ವಾದ ಮಾಡ್ತೀವಿ ಬಾ ಅಂದಿದ್ದಾರಂತೆ. ಬಿಜೆಪಿ ಗಾಳಿ ಚೆನ್ನಾಗಿ ಬೀಸುತ್ತಿದೆ. ರಾಜ್ಯದಲ್ಲಿ 24 ಕ್ಷೇತ್ರಗಳನ್ನೂ ಬಿಜೆಪಿ ಗೆದ್ದರೆ ತನ್ನ ಮಾನ ಹರಾಜಾಗುತ್ತದೆ ಎಂಬುದು ವಚನಾನಂದ ಸ್ವಾಮಿಗೆ ಅರಿವಾಗಿದೆ ಎಂದು ಕುಟುಕಿದರು.

ಇವರೆಲ್ಲಾ ಹಗರಣದ ಸ್ವಾಮಿಗಳು. ಹರಿಹರದ ತುಂಗಭದ್ರಾ ನದಿ ತಟದಲ್ಲಿ ₹30 ಕೋಟಿ ವೆಚ್ಚದಲ್ಲಿ ತುಂಗಾರತಿ, ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಕೊಟ್ಟಿದ್ದ ₹10 ಕೋಟಿ, ಕೆ.ಎಸ್.ಈಶ್ವರಪ್ಪ ನೀಡಿದ್ದ ₹4.5 ಕೋಟಿ ಕೊಟ್ಟಿದ್ದು, ಹೀಗೆ ಹಗರಣಗಳಿವೆ. ಪಿಡಿಒ ನಕಲಿ ಸಹಿ ಮಾಡಿಸಿ, ರೊಕ್ಕ ಮಾಡಿದ್ದಾರೆ. ಕಾಲ ಬಂದಾಗ ಎಲ್ಲವೂ ಹೊರಬರುತ್ತವೆ ಎಂದು ಯತ್ನಾಳ್ ಹೇಳಿದರು.

ಬಾಗಲಕೋಟೆಯಲ್ಲಿ ತನ್ನ ಹೆಂಡತಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಿಸದ ವಿಜಯಾನಂದ ಕಾಶೆಪ್ಪನವರ್ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಎಲ್ಲಿ ಕೊಡಿಸ್ತಾನಾ? ಒಂದು ವರ್ಷದಿಂದ ವಿಜಯಾನಂದ ಕಾಶೆಪ್ಪನವರ ಬಾಯಿಯನ್ನೇ ತೆಗೆದಿಲ್ಲ

- ಬಸವನಗೌಡ ಪಾಟೀಲ ಯತ್ನಾಳ, ಶಾಸಕ, ವಿಜಯಪುರ ಕ್ಷೇತ್ರ