ಅಂಬಲಪಾಡಿ ಬಾಲಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಪ್ರಕಾಶ್ ಆಚಾರ್ಯ ಆಯ್ಕೆ

| Published : Jun 25 2024, 12:32 AM IST

ಅಂಬಲಪಾಡಿ ಬಾಲಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಪ್ರಕಾಶ್ ಆಚಾರ್ಯ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಬಾಲಗಣೇಶೋತ್ಸವ ಸಮಿತಿಯ ಮಹಾಸಭೆಯಲ್ಲಿ 2024-25ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರಕಾಶ್ ಆಚಾರ್ಯ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಅಂಬಲಪಾಡಿಯಲ್ಲಿ 48ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿರುವ ಶ್ರೀ ಬಾಲಗಣೇಶೋತ್ಸವ ಸಮಿತಿಯ ಮಹಾಸಭೆಯಲ್ಲಿ 2024-25ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರಕಾಶ್ ಆಚಾರ್ಯ ಆಯ್ಕೆಯಾಗಿದ್ದಾರೆ.

ಉಳಿದಂತೆ ಗೌರವಾಧ್ಯಕ್ಷರಾಗಿ ಹರೀಶ್ ಶೆಟ್ಟಿ ಅಂಬಲಪಾಡಿ, ಉಪಾಧ್ಯಕ್ಷರಾಗಿ ಶಶಾಂಕ್‌ ಪ್ರಕಾಶ್, ಕಾರ್ಯದರ್ಶಿಯಾಗಿ ಸುಮಂತ್ ಶೆಟ್ಟಿಗಾ‌ರ್, ಜೊತೆ ಕಾರ್ಯದರ್ಶಿಯಾಗಿ ಚೇತನ್ ಆಚಾರ್ಯ, ಕೋಶಾಧಿಕಾರಿಯಾಗಿ ಅಜಿತ್ ಕಪ್ಪೆಟ್ಟು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸತೀಶ್ ಎಸ್. ಪೂಜಾರಿ ಅವರನ್ನು ಆರಿಸಲಾಗಿದೆ.

ಅಲ್ಲದೇ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮೋಹನ್ ಬಲ್ಲಾಳ್ ಅಂಬಲಪಾಡಿ, ಕೃಷ್ಣಾನಂದ ಉಪಾಧ್ಯ, ಎಂ. ರಾಧಾಕೃಷ್ಣ ಪೈ ಅಂಬಾಗಿಲು, ಪ್ರವೀಣ ಉಪಾಧ್ಯ, ಯೋಗೀಶ್ ಶೆಟ್ಟಿ, ಕೀರ್ತಿ ಶೆಟ್ಟಿ, ರಮೇಶ್ ಅಮೀನ್ ಕೆ.ಎಂ.ಸಿ., ಶ್ರೀಕಾಂತ್ ಶೆಟ್ಟಿ, ಸಂದೇಶ್ ಉಚ್ಚಿಲ್, ಸತೀಶ್ ರಾವ್, ಹರೀಶ್ ಶೆಟ್ಟಿ ಕುಂಜಗುಡ್ಡೆ, ಹರೀಶ್ ಚಂದ್ರ, ಜಗದೀಶ ಶೆಟ್ಟಿಗಾರ್, ರಾಘವೇಂದ್ರ ಆಚಾರ್ಯ ಎಂ., ರಾಘವೇಂದ್ರ ಆಚಾರ್ಯ ಕೆ.ಬಿ., ರಮೇಶ್ ಉಪಾಧ್ಯ, ರಂಜಿತ್ ಶೆಟ್ಟಿ, ಹರೀಶ್ ಶೆಟ್ಟಿ ಕಪ್ಪೆಟ್ಟು, ಪ್ರಶಾಂತ್ ಕೆ.ಎಸ್., ಅಂಬಲಪಾಡಿ, ಪವನ್ ಕುಮಾರ್ ಶೆಟ್ಟಿ, ಸುಧಾಕರ ಆಚಾರ್ಯ, ಪ್ರತಾಪ್ ಕಪ್ಪೆಟ್ಟು, ಭಾಸ್ಕರ್ ಸಾಲ್ಯಾನ್, ದೇವರಾಜ್ ಆಚಾರ್ಯ, ಪ್ರಜ್ವಲ್ ಶೆಟ್ಟಿ, ಉಮೇಶ್ ಶೆಟ್ಟಿಗಾರ್, ಹರೀಶ್ ಪಾಲನ್ ಕಪ್ಪೆಟ್ಟು, ಸುನೀಲ್ ಕುಮಾರ್, ಶ್ರೀಪತಿ ಆಚಾರ್ಯ, ಧನರಾಜ್ ಯು. ಅವರನ್ನು ಸರ್ವಾನುಮತದಿಂದ ಆರಿಸಲಾಗಿದೆ.

ಈ ಸಭೆಯಲ್ಲಿ ನಾಲ್ಕು ದಿನಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಜೃಂಬಣೆಯಿಂದ ನೆರವೇರಿಸುವುದೆಂದು ತೀರ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯದರ್ಶಿ ಸುಮಂತ್ ಶೆಟ್ಟಿಗಾರ್ ವಂದಿಸಿದರು.