ಸಾರಾಂಶ
ಕನ್ನಡ ಪ್ರಭವಾರ್ತೆ ಕೆ.ಎಂ.ದೊಡ್ಡಿ
ಕ್ಯಾತಘಟ್ಟ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ತೊರೆಚಾಕನಹಳ್ಳಿ ಪ್ರಕಾಶ್, ಉಪಾಧ್ಯಕ್ಷೆಯಾಗಿ ಶೈಲಜಾ ಅವಿರೋಧ ಆಯ್ಕೆಯಾಗಿದ್ದಾರೆ.ಹಿಂದಿನ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷೆ ಕೆ.ಎಂ.ಜೀವಿತಾ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಪ್ರಕಾಶ್ ಮತ್ತು ಶೈಲಜಾ ಹೊರತು ಪಡಿಸಿ ಬೇರೆ ಯಾರು ಸಹ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ. ಗೋವಿಂದ ಘೋಷಿಸಿದರು.
ಗ್ರಾಪಂನಲ್ಲಿ ಒಟ್ಟು 15 ಸದಸ್ಯರನ್ನು ಹೊಂದಿದ್ದು ಇಬ್ಬರು ಸದಸ್ಯರಾದ ಕೃಷ್ಣ ಮತ್ತು ಗೈರು ಹಾಜರಾಗಿದ್ದರು. ಉಳಿದ 13 ಮಂದಿ ಚುನಾವಣಾ ಪ್ರಕ್ರಿಯಲ್ಲಿ ಭಾಗವಹಿಸಿದ್ದರು.ನೂತನ ಅಧ್ಯಕ್ಷ ತೊರೆಚಾಕನಹಳ್ಳಿ ಪ್ರಕಾಶ್ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರಾಗಿ ಮಾಡಿರುವ ನಾಯಕರಾದ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರ ಮಾರ್ಗದರ್ಶನದಲ್ಲಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು ಶಕ್ತಿ ಮೀರಿ ಶ್ರಮಿಸಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪಂಚಾಯಿತಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಗ್ರಾಪಂ ಆಡಳಿತ ಮಂಡಳಿ ಅಭಿನಂಧಿಸಿತು. ಪಿಡಿಒ ನಾಗೇಶ್, ಮಾಜಿ ಅಧ್ಯಕ್ಷರಾದ ರಾಜೇಶ್, ಸಿದ್ದರಾಜು, ಸಿದ್ದಲಕ್ಷ್ಮಮ್ಮ, ಮಹಾಲಕ್ಷ್ಮಿ, ಸದಸ್ಯರಾದ ಕೆ.ಎಂ. ಜೀವಿತಾ, ನಿರುಷಾ, ವೆಂಕಟೇಶ್, ಚನ್ನಾಜಮ್ಮ, ಜ್ಯೋತಿ, ಲಕ್ಷ್ಮಿ, ಮುಖಂಡರಾದ ತಿಮ್ಮರಾಜು, ಕ್ಯಾತಘಟ್ಟ ಗಿರೀಶ್, ಕೆ.ರವಿಕುಮಾರ್, ಚನ್ನೇಗೌಡ, ಪಿಣ್ಣಯ್ಯ ಸೇರಿದಂತೆ ಮತ್ತಿತರಿದ್ದರು.ಆನೆಗೊಳ ಗ್ರಾಪಂ ವ್ಯಾಪ್ತಿ ರೈತ ಸಂಘಟನೆ ವಿಲೀನ: ಸಿ.ಎನ್.ಮಂಜಪ್ಪ
ಮಂಡ್ಯ:ಕೆ.ಆರ್.ಪೇಟೆ ತಾಲೂಕಿನ ಆನೆಗೊಳ ಗ್ರಾಪಂ ವ್ಯಾಪ್ತಿಯ ರೈತ ಸಂಘಟನೆಯನ್ನು ಅಸ್ಥಿತ್ವಕ್ಕೆ ತಂದಿದ್ದು, ಸದರಿ ಸಂಘವು ರಾಜ್ಯ ರೈತ ಸಂಘಕ್ಕೆ ವಿಲೀನಗೊಳಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಎನ್.ಮಂಜಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆಗೊಳ ಗ್ರಾಪಂ ವ್ಯಾಪ್ತಿಯ ರೈತ ಸಂಘಟನೆಯಲ್ಲಿ 15 ಗ್ರಾಮಗಳ 142 ಮಂದಿ ರೈತ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಡಿಸೆಂಬರ್ 15ರಂದು ಸಂಘಕ್ಕೆ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಗಿದೆ ಎಂದರು.ಸಂಘದ ಕಾರ್ಯಾಧ್ಯಕ್ಷರಾಗಿ ಎ.ಜೆ.ಮಂಜೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್, ಖಜಾಂಚಿಯಾಗಿ ಸುರೇಶ್ ಸಿ.ವೈ, ಉಪಾಧ್ಯಕ್ಷರಾಗಿ ಶಿವಲಿಂಗೇಗೌಡ ಸಿ.ಇ, ಸಮರ್ಥ, ಚಮರಾಜೇಗೌಡ ಎ.ಎನ್, ಸಂಘಟನಾ ಕಾರ್ಯದರ್ಶಿಯಾಗಿ ರಾಮೇಗೌಡ ಸಿ.ಟಿ, ಲೆಕ್ಕ ಪರಿಶೋಧಕರಾಗಿ ಬಿ.ಎಸ್.ನಿಂಗರಾಜು, ಮಹಿಳಾ ಸಂಘಟನ ಕಾರ್ಯದರ್ಶಿಗಳಾಗಿ ಗೀತಾ.ಎಂ.ಕೆ, ಸುಮಾ, ಸಹ ಕಾರ್ಯದರ್ಶಿಗಳಾಗಿ ನಾಗೇಶ್ ಗೌಡ, ವಿಜಿಕುಮಾರ್ ಸಿ.ಟಿ, ರತ್ನಕುಮಾರ್, ಅವಿಜಿತ್, ಧರ್ಮರಾಜ, ಹರೀಶ್ ಅವರುಗಳನ್ನು ಪುಟ್ಟೇಗೌಡರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಆನೆಗೊಳ ಗ್ರಾಪಂ ಜಿಲ್ಲೆಯ ಕಡೆ ಭಾಗವಾಗಿದೆ. ಇಲ್ಲಿಗೆ ರೈತರ ಸವಲತ್ತು ಒದಗಿಸುವ ದೃಷ್ಟಿಯಿಂದ ಸಂಘಟನೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ರೈತರಿಗೆ ನ್ಯಾಯ ಒದಸಲಾಗುವುದು ಎಂದರು.ಮಹಿಳೆಯರಿಗೆ ಉಚಿತ ಬಸ್ ಪ್ರವೇಶ ನೀಡಿದ್ದರಿಂದಾಗಿ ಬಸ್‌ಗಳು ಸಂಪೂರ್ಣ ಭರ್ತಿಯಾಗುತ್ತಿದೆ. ಕೆ.ಆರ್.ಪೇಟೆ ತಾಲೂಕಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದಂತಹ ಪರಿಸ್ಥಿತಿ ಎದುರಾಗಿದೆ. ಇದರ ವಿರುದ್ಧವೂ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ಕಾರ್ಯಾಧ್ಯಕ್ಷ ಮಂಜೇಗೌಡ.ಎ.ಜೆ, ಉಪಾಧ್ಯಕ್ಷ ಸಮರ್ಥ, ಸಂಘಟನಾ ಕಾರ್ಯದರ್ಶಿ ರಾಮೇಗೌಡ ಸಿ.ಟಿ,ಲೆಕ್ಕ ಪರಿಶೋಧಕ ಬಿ.ಎಸ್.ನಿಂಗರಾಜು ಇದ್ದರು.