ಕನ್ನಡಪ್ರಭ ವಾರ್ತೆ ವಿಜಯಪುರಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅವರು ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಹಾಗೂ ಕಾರಜೊಳ ಗ್ರಾಪಂ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮತ್ತು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅವರು ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಹಾಗೂ ಕಾರಜೊಳ ಗ್ರಾಪಂ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮತ್ತು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಹೊನಗನಹಳ್ಳಿ ಗ್ರಾಮದ ತುಂಗಾಬಾಯಿ ಬಿದರಿ ಇವರ ಹೊಲದಿಂದ ಪಾರ್ವತಿಬಾಯಿ ಪಾಟೀಲ ಇವರ ಹೊಲದ ವರೆಗೆ ಡೋಣಿ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ನರೇಗಾ ಕಾರ್ಮಿಕರೊಂದಿಗೆ ಸಮಾಲೋಚಿಸಿದ ಅವರು, ಎಲ್ಲ ಕೂಲಿಕಾರರು ಪ್ರತಿ ದಿನ ಬೆಳಗ್ಗೆ ಬೇಗನೆ ಆಗಮಿಸಿ ಬೇಗ ಕೆಲಸ ಮುಗಿಸಿ ಬೇಗ ಮನೆಗೆ ತೆರಳಬಹುದು ಎಂದರು. ಬೇಸಿಗೆ ಇರುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಎಲ್ಲರೂ ಆರೋಗ್ಯ ಕಾಳಜಿ ವಹಿಸಬೇಕು. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ನರೇಗಾ ಕೆಲಸದಲ್ಲಿ ಭಾಗವಹಿಸುವ ಮೂಲಕ ನರೇಗಾ ಸೌಲಭ್ಯ ಪಡೆದುಕೊಳ್ಳಬೇಕು ಎಂದರು. ಗ್ರಾಮ ಮಟ್ಟದಲ್ಲಿರುವ ಎಲ್ಲ ಸಾರ್ವಜನಿಕರಿಗೆ, ಸ್ವ ಸಹಾಯ ಸಂಘಗಳ ಮಹಿಳೆಯರಿಗೆ ನರೇಗಾ ಯೋಜನೆಯ ಕುರಿತು ಜಾಗೃತಿ ಮೂಡಿಸಿ, ಕೂಲಿ ಕೆಲಸಕ್ಕೆ ಹೆಚ್ಚಿನ ಜನರು ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಐಇಸಿ ಸಂಯೋಜಕರಿಗೆ ಸೂಚಿಸಿದರು.

ಬಳಿಕ ಗ್ರಾಪಂ ಕಾರ್ಯಾಲಯಕ್ಕೆ ಭೇಟಿ ನೀಡಿದ ಉಪ ಕಾರ್ಯದರ್ಶಿಗಳು, ಗ್ರಾಪಂ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಾತಿ ಪರಿಶೀಲಿಸಿ, ಅವರ ಕಾರ್ಯವೈಖರಿಗಳ ಬಗ್ಗೆ ಪರಿಶೀಲಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳಾದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪ್ರಗತಿ, ಕೂಲಿಕಾರರ ಇಕೆವೈಸಿ, ತೆರಿಗೆ ವಸೂಲಾತಿ, ಸಕಾಲ ಅರ್ಜಿ, ಸಿಬ್ಬಂದಿ ಇ-ಹಾಜರಾತಿ ಹೀಗೆ ವಿವಿಧ ವಿಷಯಗಳ ಪ್ರಗತಿ ಕುರಿತು ಪರಿಶೀಲನೆ ನಡೆಸಿದರು. ಬಳಿಕ ಕಾರಜೊಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಗ್ರಾಮ ಪಂಚಾಯತಿ ಕಟ್ಟಡ ಕಾಮಗಾರಿ ಪರಿಶೀಲಿಸಿದರು.

ಗ್ರಾಪಂನಲ್ಲಿ ಮನರೇಗಾ ಯೋಜನೆಯಡಿ ಹೆಚ್ಚಿನ ಕೂಲಿಕಾರರಿಗೆ ಉದ್ಯೋಗ ಒದಗಿಸುವುದು ಮತ್ತು ನಿಗದಿತ ಗುರಿಗೆ ತಕ್ಕಂತೆ ಮಾನವ ದಿನಗಳ ಸೃಜನೆ ಮಾಡಬೇಕು ಎಂದು ಸೂಚನೆ ನೀಡಿದರು. ನಿಗದಿತ ಸಮಯದಲ್ಲಿ ಕೂಲಿ ಪಾವತಿ, ನರೇಗಾ ಕೂಲಿಕಾರರ ಇ-ಕೆವೈಸಿ, ಕಾಮಗಾರಿಗಳ ಮುಕ್ತಾಯ, ನರೇಗಾ ಕೂಲಿಕಾರರ ಎನ್ ಎಂಎಎಸ್ ಫೇಸ್ ಅಥೆಂಟಿಕೇಷನ್, ಯುಕ್ತದಾರದಲ್ಲಿ ಕಾಮಗಾರಿ ಎಂಟ್ರಿ ಮಾಡುವುದು, ಕಾಮಗಾರಿ ಮುಕ್ತಾಯ ಸಾಮಾಜಿಕ ಪರಿಶೋಧನೆ, ಪ್ರಗತಿ ವರದಿ, ಅಡಹಾಕ್ ಸಭೆ, ನರೇಗಾ ಕಾಮಗಾರಿಗಳ ಮುಕ್ತಾಯ, ಪಂಚಾಯತ ರಾಜ್ ವಿಷಯಗಳಾದ ತೆರಿಗೆ ವಸೂಲಾತಿ, ಇ-ಹಾಜರಾತಿ, ಮಹಿಳಾ ಗ್ರಾಮ ಸಭೆ, ಕುಡಿಯುವ ನೀರಿನ ಸಮಸ್ಯೆ ಹೀಗೆ ವಿವಿಧ ವಿಷಯಗಳ ಕುರಿತು ಪರಿಶೀಲಿಸಿದರು.

ಬಬಲೇಶ್ವರ ತಾಲೂಕಿನ ಸಹಾಯಕ ನಿರ್ದೇಶಕ ವಿ.ಎಸ್ ಹಿರೇಮಠ, ತಾಂತ್ರಿಕ ಸಂಯೋಜಕ ಮಹೇಶ ಇಂಗಳೇಶ್ವರ, ಬಿಎಫ್ ಟಿ ಸೂರ್ಯಕಾಂತ ಜತ್ತಿ, ಶಾಂತಪ್ಪ ಇಂಡಿ, ಭುವನೇಶ್ವರಿ ಉಪ್ಪಾರ ಇದ್ದರು.