3.30 ಕೋಟಿ ರು. ಮೌಲ್ಯದ ಕಾರು ಖರೀದಿಸಿದ ಪ್ರಮೋದ್‌ ಮಧ್ವರಾಜ್‌

| Published : Dec 25 2023, 01:32 AM IST

3.30 ಕೋಟಿ ರು. ಮೌಲ್ಯದ ಕಾರು ಖರೀದಿಸಿದ ಪ್ರಮೋದ್‌ ಮಧ್ವರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ನೂತನ ಬಿಎಂಡಬ್ಲ್ಯು ಕಾರು ಖರೀದಿಸಿದ್ದಾರೆ.ಟ್ವಿನ್ ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್ ಹೊಂದಿದ್ದು ಬರೋಬ್ಬರಿ 62 ಕಿ.ಮೀ.ಮೈಲೇಜು ನೀಡುತ್ತದೆ. ಇದರ ಬೆಲೆ 3.30 ಕೋಟಿ ರು. ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಮಾಜಿ ಸಚಿವ, ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ನೂತನ ಬಿಎಂಡಬ್ಲ್ಯು ಕಾರು ಖರೀದಿಸಿದ್ದಾರೆ. ಇದು ಹೈಬ್ರಿಡ್ ಎಂಜಿನ್ ಹೊಂದಿದ್ದು. ಟ್ವಿನ್ ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್ ಹೊಂದಿದ್ದು ಬರೋಬ್ಬರಿ 62 ಕಿ.ಮೀ.ಮೈಲೇಜು ನೀಡುತ್ತದೆ. ಇದರ ಬೆಲೆ 3.30 ಕೋಟಿ ರು. ಎನ್ನಲಾಗಿದೆ.

ಹೊಸ ಕಾರಿನ ಕುರಿತು ಸ್ವತಃ ಪ್ರಮೋದ್ ಮಧ್ವರಾಜ್ ಸಂತಸ ಹಂಚಿಕೊಂಡಿದ್ದಾರೆ. ಬಿಎಂಡಬ್ಲ್ಯು ಕಾರು ತಮ್ಮ ಕುಟುಂಬದ ಭಾಗವಾಗಿರುವುದು ಹೆಮ್ಮೆ ತಂದಿದೆ ಎಂದವರು ಹೇಳಿದ್ದಾರೆ. ಹೊಸ ಕಾರನ್ನು ಪ್ರಮೋದ್ ಮಧ್ವರಾಜ್ ಅವರ ಅಮ್ಮುಂಜೆ ಮನೆಗೆ ಕಂಪನಿಯ ಪ್ರತಿನಿಧಿಗಳೇ ತಂದು ಮುಟ್ಟಿಸಿದ್ದು, ಹೊಸ ಕಾರಿನ ಮುಂದೆ ಪ್ರಮೋದ್ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಅವರ ಬಳಿ 2015ರಲ್ಲಿ ಕಾಂಗ್ರೆಸ್ ಶಾಸಕರಾಗಿದ್ದಾಗ ಖರೀದಿಸಿದ 5.80 ಕೋಟಿ ರು. ಬೆಲೆಯ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಕೂಡ ಇದೆ.