ಸಾರಾಂಶ
ಮೈಸೂರಿನಲ್ಲಿ ಗೆಲುವು ಸಾಧಿಸಿರುವ ರಾಜವಂಶಸ್ಥ ಯದುವೀರ್‌ಗೆ ಮಾರ್ಗದರ್ಶನ ಮಾಡುವುದಾಗಿ ತಾಯಿ ಪ್ರಮೋದಾದೇವಿ ತಿಳಿಸಿದ್ದಾರೆ.
ಮೈಸೂರು: ಎಲ್ಲರ ಸಹಕಾರ ಮತ್ತು ಶ್ರಮದಿಂದ ನನ್ನ ಮಗ ಲೋಕಸಭಾ ಚುನಾವಣೆಯಲ್ಲಿ ಯದುವೀರ್ ಗೆದ್ದಿದ್ದಾನೆ. ಮುಂದೆ ಒಳ್ಳೆಯ ಕೆಲಸ ಮಾಡುತ್ತಾನೆ ಎಂಬ ನಂಬಿಕೆ ಇದೆ ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಹೇಳಿದರು.
ಮಂಗಳವಾರ ಸುದ್ದಿಗಾರರೊಡನೆ ಮಾತನಾಡಿ, ನಮ್ಮ ಮನೆಗೆ ಅಧಿಕಾರ ಹೊಸದಲ್ಲ.
ಹಿಂದೆಯೂ ನಮ್ಮ ಮನೆಯವರು ಸಂಸದರಾಗಿದ್ದರು. ಈಗ ಮತ್ತೆ ಅಧಿಕಾರ ಬಂದಿದೆ.
ಆಗ ಅಧಿಕಾರದಲ್ಲಿದ್ದಾಗಲೂ ನಾನೂ ಅದನ್ನು ನೋಡಿಕೊಳ್ಳುತ್ತಿದ್ದೆ. ಈಗಲೂ ಮಗನಿಗೆ ಮಾರ್ಗದರ್ಶನ ನೀಡುತ್ತೇನೆ ಎಂದರು.ಅರಮನೆಯ ವ್ಯಾಜ್ಯಗಳಿಗೂ ಈಗ ಬಂದಿರುವ ಅಧಿಕಾರಕ್ಕೂ ಸಂಬಂಧ ಇಲ್ಲ. ಅವುಗಳ ಪಾಡಿಗೆ ಅವು ನಡೆಯುತ್ತವೆ.
ಎಲ್ಲಾ ಸರ್ಕಾರಗಳು ಇದ್ದಾಗಲೂ ಅದು ನಡೆಯುತ್ತದೆ, ಈಗಲೂ ಅದೇ ರೀತಿ ನಡೆಯುತ್ತದೆ ಎಂದು ಅವರು ಹೇಳಿದರು.