ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಇವೆರಡೂ ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ವಿದ್ಯಾರ್ಥಿಗಳಿಗೆ ಯೋಗಾಸನ ಹಾಗೂ ಪ್ರಾಣಯಾಮಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಹೆಚ್ಚು ಹೆಚ್ಚು ಪರೀಕ್ಷೆ ಎದುರಿಸಲು ಹಾಗೂ ಪರೀಕ್ಷೆಗಳಲ್ಲಿ ಯಶಸ್ಸು ಕಾಣಲು ಅತ್ಯಂತ ಸಹಕಾರಿಯಾಗುತ್ತವೆ.

ಕುಷ್ಟಗಿ: ವಿದ್ಯಾರ್ಥಿಗಳಲ್ಲಿ ಸ್ಮರಣಶಕ್ತಿ ಹಾಗೂ ಏಕಾಗ್ರತೆ ಹೆಚ್ಚಲು ಪ್ರಾಣಾಯಾಮ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಯೋಗ ತರಬೇತಿದಾರ ಪಂಕಜ ಕುಮಾರ ಹೇಳಿದರು.

ತಾಲೂಕಿನ ಬಿಜಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಪ್ರಾಣಾಯಾಮ ಹಾಗೂ ಯೋಗಭ್ಯಾಸ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದರು.

ಉಸಿರಾಟದೊಂದಿಗೆ ಯುಗಾಭ್ಯಾಸ ರೂಡಿಸಿಕೊಳ್ಳಬೇಕು. ಉಸಿರಾಟ ನಿಧಾನವಾದಂತೆ ನಮ್ಮ ಸಮಚಿತ್ತತೆ ಹಾಗೂ ಆಯಸ್ಸು ವೃದ್ಧಿಯಾಗುತ್ತದೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಿ ಆತ್ಮವಿಶ್ವಾಸ ಮೂಡುತ್ತದೆ ಪ್ರತಿದಿನವೂ ಐದು ಯೋಗಾಸನಗಳು ಹಾಗೂ ಐದು ಪ್ರಾಣಾಯಾಮ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಮುಖ್ಯಶಿಕ್ಷಕ ಬಸವರಾಜ ಬಾಗಲಿ ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಇವೆರಡೂ ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ವಿದ್ಯಾರ್ಥಿಗಳಿಗೆ ಯೋಗಾಸನ ಹಾಗೂ ಪ್ರಾಣಯಾಮಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಹೆಚ್ಚು ಹೆಚ್ಚು ಪರೀಕ್ಷೆ ಎದುರಿಸಲು ಹಾಗೂ ಪರೀಕ್ಷೆಗಳಲ್ಲಿ ಯಶಸ್ಸು ಕಾಣಲು ಅತ್ಯಂತ ಸಹಕಾರಿಯಾಗುತ್ತವೆ. ಇವುಗಳನ್ನು ಜೀವನದುದ್ದಕ್ಕೂ ರೂಢಿಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ವೀರನಗೌಡ ಪೊಲೀಸ್ ಪಾಟೀಲ್, ಶಿಕ್ಷಕ ವಿಜಯಕುಮಾರ ಬಿರಾದಾರ, ಪ್ರಸನ್ನ ಕುಮಾರ ಭಿಕ್ಷಾವತಿಮಠ, ವಿದ್ಯಾರ್ಥಿ ಪ್ರತಿನಿಧಿ ಚಂದ್ರಶೇಖರ ಕಲಕೇರಿ, ಮಹಾಲಕ್ಷ್ಮಿ ವೀರಾಪುರ ವೇದಿಕೆಯಲ್ಲಿ ಉಪಸ್ಥಿತರಿದ್ದು ತರಗತಿ ಯಶಸ್ವಿಗೊಳಿಸಿದರು.

ಒಟ್ಟು 128 ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡು ವಿವಿಧ ಯೋಗಾಸನ, ಪ್ರಾಣಾಯಾಮ ಹಾಗೂ ಅಕ್ಯೂ ಪ್ರೆಶರ್ ನಂತಹ ವಿದ್ವತ್ತುಗಳನ್ನು ಕಲಿತರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ವಿಜಯಲಕ್ಷ್ಮಿ ದೇಸಾಯಿ ತರಬೇತಿ ನೀಡಿದ ಒಟ್ಟು 16 ಹಂತದ ಏರೋಬಿಕ್ಸ್ ಕ್ರೀಡಾ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.