ಸಾರಾಂಶ
ತಾಲೂಕಿನ ಪಾಳ್ಯ ಗ್ರಾಮದ ಗೋಪಾಲಸ್ವಾಮಿ ದೇಗುಲದಲ್ಲಿ ಮಂಗಳವಾರ ತಡರಾತ್ರಿ ತಯಾರಿಸಲಾಗಿದ್ದ ಪ್ರಸಾದವನ್ನು ಬುಧವಾರ ಬೆಳಗ್ಗೆ ಸೇವಿಸಿದ್ದ 20ಕ್ಕೂ ಹೆಚ್ಚು ಮಂದಿಯಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಘಟನೆ ಜರುಗಿದೆ.
ಕೊಳ್ಳೇಗಾಲ: ತಾಲೂಕಿನ ಪಾಳ್ಯ ಗ್ರಾಮದ ಗೋಪಾಲಸ್ವಾಮಿ ದೇಗುಲದಲ್ಲಿ ಮಂಗಳವಾರ ತಡರಾತ್ರಿ ತಯಾರಿಸಲಾಗಿದ್ದ ಪ್ರಸಾದವನ್ನು ಬುಧವಾರ ಬೆಳಗ್ಗೆ ಸೇವಿಸಿದ್ದ 20ಕ್ಕೂ ಹೆಚ್ಚು ಮಂದಿಯಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಘಟನೆ ಜರುಗಿದೆ.
ಪಾಳ್ಯ ಗ್ರಾಮದ ಗೋಪಾಲಸ್ವಾಮಿ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ವಿಶೇಷ ಪೂಜೆಯೂ ಪಕಾಳಿನಾಯಕ ಕುಟುಂಬದವರ ಸಹಕಾರದೊಂದಿಗೆ ಪುರೋಹಿತರಾದ ಬಾಲಕೃಷ್ಣ ಅವರ ಸಾರಥ್ಯದೊಂದಿಗೆ ಜರುಗಿತು. ಈ ವೇಳೆ ರಾತ್ರಿ ಮೊದಲಿಗೆ ಬಾತ್ ಅನ್ನು ಭಕ್ತಾಧಿಗಳಿಗೆ ಪ್ರಸಾದವನ್ನಾಗಿ ನೀಡಲಾಗಿತ್ತು. ಬಳಿಕ ತಡರಾತ್ರಿ ತನಕ ನಡೆದ ಪೂಜೆಯಲ್ಲಿ ಪ್ರಸಾದವಾಗಿ ಪುಳಿಯೊಗರೆ ಮತ್ತು ಪಂಚಾಮೃತ ತಯಾರಿಸಲಾಗಿತ್ತು.ಕೆಲವು ಭಕ್ತರು ರಾತ್ರಿ ತಯಾರಾದ ಪ್ರಸಾದವನ್ನು ಬೆಳ್ಗಗೆ ಸೇವಿಸಿದ್ದಾರೆ, ಈ ಹಿನ್ನೆಲೆ ಮದ್ಯಾಹ್ನ ಹಲವರಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡಿದೆ. ತಕ್ಷಣ ಸಾರ್ವಜನಿಕರ ಸಹಕಾರದೊಂದಿಗೆ ಮೊದಲಿಗೆ ಪಾಳ್ಯ ಗ್ರಾಮದ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲದೆ ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಗೂ ಸಹಾ 15ಕ್ಕೂ ಹೆಚ್ಚು ಮಂದಿ ದಾಖಲಾಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಡಿವೈಎಸ್ಪಿ ಧರ್ಮೇಂದ್ರ, ಸಿಪಿಐ ಶಿವಮಾದಯ್ಯ, ಗ್ರಾಮಾಂತರ ಪಿಎಸ್ಸೈ ಸುಪ್ರೀತ್, ಪಟ್ಟಣ ಠಾಣೆಯ ವರ್ಷ ಸೇರಿದಂತೆ ಹಲವರು ಭೇಟಿ ನೀಡಿ ಆಸ್ಪತ್ರೆಗೆ ದಾಖಲಾದ ಮಂದಿಯಿಂದ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.
ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಪಾಳ್ಯ ಗ್ರಾಮದ ಸಿದ್ದಮ್ಮ, ಪುಣ್ಯವತಿ, ಲತಾ, ದೇವಿ, ಜ್ಯೊತಿ, ಪುಟ್ಟಮ್ಮ, ಸಿದ್ದಾರ್ಥ, ಗೋವಿಂದರಾಜು, ಸಿದ್ದಪ್ಪಾಜಿ ಸೇರಿದಂತೆ ಹಾಗೂ ಪಾಳ್ಯ ಆಸ್ಪತ್ರೆಯಲ್ಲಿ 15 ಕ್ಕೂ ಹೆಚ್ಚು ಮಂದಿ ಚಿಕಿತ್ಸೆಗೊಳಗಾಗಿದ್ದಾರೆ.