ಎಚ್.ಡಿ. ಕೋಟೆಯಲ್ಲಿ ಸಡಗರದ ನವರಾತ್ರಿ ಉತ್ಸವ

| Published : Oct 14 2024, 01:22 AM IST

ಎಚ್.ಡಿ. ಕೋಟೆಯಲ್ಲಿ ಸಡಗರದ ನವರಾತ್ರಿ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗ್ಗೆ ದೇವಾಲಯದಲ್ಲಿ ಸ್ವಾಮಿಗೆ ಅಭಿಷೇಕ ಕುಂಕುಮರ್ಚನೆ ಪುಷ್ಪಾರ್ಚನೆ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಪಟ್ಟಣದ ಶ್ರೀ ಲಕ್ಷ್ಮಿ ವರದರಾಜ ಸ್ವಾಮಿ ದೇವಾಲಯದಲ್ಲಿ ವಿಜಯದಶಮಿ ಅಂಗವಾಗಿ ಶನಿವಾರ ನವರಾತ್ರಿ ಉತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ನೆರವೇರಿತು.ಪ್ರತಿವರ್ಷದಂತೆಯೂ ಈ ವರ್ಷವೂ ವಿಜಯದಶಮಿಯ ಅಂಗವಾಗಿ ಪೊಲೀಸ್ ಪೂಜೆ ನಡೆಸಿಕೊಂಡು ಬರುತ್ತಿದ್ದು ವೃತ ನಿರೀಕ್ಷಕ ಶಬೀರ್ ಹುಸೇನ್ ವಿಜಯದಶಮಿಯ ಪೂಜಾ ಕಾರ್ಯದಲ್ಲಿ ತಮ್ಮ ಸಿಬ್ಬಂದಿಯೊಡನೆ ಆಗಮಿಸಿ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಬೆಳಗ್ಗೆ ದೇವಾಲಯದಲ್ಲಿ ಸ್ವಾಮಿಗೆ ಅಭಿಷೇಕ ಕುಂಕುಮರ್ಚನೆ ಪುಷ್ಪಾರ್ಚನೆ ನಡೆದ ಬಳಿಕ ಮಹಾಮಂಗಳಾರತಿ ನೆರವೇರಿ ತದನಂತರ ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ನೆರವೇರಿಸಲಾಯಿತು.ಸಂಜೆ ಶ್ರೀ ವರದರಾಜ ಸ್ವಾಮಿ ಉತ್ಸವವನ್ನು ವೃತ್ತ ನಿರೀಕ್ಷಕ ಶಬೀರ್ ಹುಸೇನ್, ದೇವಾಲಯದ ಧರ್ಮದರ್ಶಿ ಬಿ.ಎಸ್. ರಂಗ ಅಯ್ಯಂಗಾರ್ ಅವರ ಪುತ್ರ ಪ್ರಸಾದ್ ಸ್ವಾಮಿಗೆ ಪುಷ್ಪಾರ್ಚನೆ ನಡೆಸುವುದರ ಮೂಲಕ ಮೆರವಣಿಗೆ ಚಾಲನೆ ನೀಡಲಾಯಿತು. ಈ ವೇಳೆ ಪೊಲೀಸ್ ಇಲಾಖೆಯವರು ಸ್ವಾಮಿಗೆ ಗೌರವ ರಕ್ಷೆ ಸಲ್ಲಿಸಿದರು.ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಅಂತ್ಯದಲ್ಲಿ ಬನ್ನಿಮಂಟಪದಲ್ಲಿ ಕೊನೆಗೊಂಡಿತು. ಉತ್ಸವದ ಜೊತೆಯಲ್ಲಿ ಶ್ರೀ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯು ಭಾಗವಹಿಸಿದ್ದು ಜನರ ಕಣ್ಮನ ಸೆಳೆಯಿತು. ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಪಟ್ಟಣದ ಎಲ್ಲಾ ಕೋಮಿನ ಮುಖಂಡರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ರಾಮಪ್ರಿಯ, ಎಚ್.ವಿ. ತಿರುಮಲಾರ್, ಎಚ್.ವಿ. ರಘುನಾಥನ್, ಶ್ರೀಕಾಂತ್, ದೇವರಾಜ್, ಚಂದ್ರಮೌಳಿ, ಶ್ರೀಕಂಠ ಶರ್ಮ, ಮಂಜುನಾಥ್, ಪೂರ್ಣೇಶ್, ವಿನೋದ್, ಕೆಂಪರಾಜು, ಶಿವರಾಜು, ಸುಧಾಕರ್, ಮಹಿಳೆಯರು ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.