ಸಂವಿಧಾನದ ಪೀಠಿಕೆಗೆ ಆದರ್ಶವಾಗಿದ್ದವರು ಪ್ರಸಾದ್

| Published : May 21 2024, 12:35 AM IST

ಸಂವಿಧಾನದ ಪೀಠಿಕೆಗೆ ಆದರ್ಶವಾಗಿದ್ದವರು ಪ್ರಸಾದ್
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನದ ಪೀಠಿಕೆಗೆ ಆದರ್ಶವಾಗಿ ನಡೆದವರು ಸಂಸದ ವಿ.ಶ್ರೀನಿವಾಸ್‌ಪ್ರಸಾದ್‌ ಎಂದು ಸಮಾಜಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಂವಿಧಾನದ ಪೀಠಿಕೆಗೆ ಆದರ್ಶವಾಗಿ ನಡೆದವರು ಸಂಸದ ವಿ.ಶ್ರೀನಿವಾಸ್‌ಪ್ರಸಾದ್‌ ಎಂದು ಸಮಾಜಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.ನಗರದಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿ.ಶ್ರೀನಿವಾಸಪ್ರಸಾದ್‌ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಸ್ವಾಭಿಮಾನಿ ಸಂಸದ ವಿ.ಶ್ರೀನಿವಾಸಪ್ರಸಾದ್‌ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ವಿ.ಶ್ರೀನಿವಾಸಪ್ರಸಾದ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಸಂವಿಧಾನ ತತ್ವಗಳನ್ನು ತಮ್ಮಜೀವನದಲ್ಲಿ ಅಳವಡಿಸಿಕೊಂಡಿದ್ದರು. ಆದ್ದರಿಂದಲೇ ಅವರು ಸ್ವಾಭಿಮಾನಿಯಾಗಿದ್ದರು ಎಂದರು.ಅಸ್ತಂಗತನಾದ ಮೇಲೆ ಅವರ ಒಳ್ಳೆಯ ವಿಚಾರಗಳನ್ನು ಮಾತನಾಡುತ್ತೇವೆ. ಅವರು ರಾಜಕೀಯವಾಗಿ ಮಾಡುತ್ತಿದ್ದ ಟೀಕೆಗಳು, ಅಭಿವೃದ್ಧಿಯ ವಿಚಾರವಾಗಿತ್ತು. ಜನರಿಗೆ ಸ್ಪಂದನೆ ನೀಡುತ್ತಿದ್ದರು. ಅಸಮಾನತೆ ತೊರೆದು ಅಭಿವೃದ್ಧಿಗೆ ಒತ್ತು ನೀಡಿದ್ದರು. ಅತಿರಥ ಮಹಾರಥರಿದ್ದ ಈ ಚಾಮರಾಜನಗರದಲ್ಲಿ ಲೋಕಸಭಾ ಕ್ಷೇತದ ಜನರು ಸುದೀರ್ಘ ನಾಯಕರನ್ನಾಗಿ ಸ್ವೀಕಾರ ಮಾಡಿ ಅವರನ್ನು 30 ವರ್ಷಗಳ ಕಾಲ ಬೆಳೆಸಿದ್ದೇ ಮಹಾನ್ ನೀತಿ ಸಮ ಸಮಾಜದ ನಿರ್ಮಾಣಕ್ಕೆ ನಿರಂತರವಾಗಿ ಹೋರಾಟ ಮಾಡಿದರು ಎಂದರು.

ಪ್ರತಿಯೊಂದು ರಾಜಕೀಯ ಪಕ್ಷಗಳು ತಮ್ಮದೇ ಆದ ಸಿದ್ಧಾಂತಗಳನ್ನು ಹೊಂದಿರುತ್ತದೆ. ರಾಜಕೀಯವೇ ಬೇರೆ ಸಿದ್ದಾಂತವೇ ಬೇರೆ. ರಾಜಕೀಯದಲ್ಲಿ ಅಧಿಕಾರ ಶಾಶ್ವತವಲ್ಲ, ಆದರೆ ಅಧಿಕಾರ ಸಿಕ್ಕಿದಾಗ ಜನರ ಕಷ್ಟಕ್ಕೆ ಸ್ಪಂದಿಸಿದಾಗ ಜನರು ಅವರನ್ನು ನಾಯಕರನ್ನಾಗಿ ಮಾಡುತ್ತಾರೆ. ಇದು ವಿ.ಶ್ರೀನಿವಾಸ ಪ್ರಸಾದರಲ್ಲಿ ಕಾಣುತ್ತೇವೆ ಎಂದರು.ತಮ್ಮ ತತ್ವಸಿದ್ದಾಂತವನ್ನು ಪ್ರಸಾದ್‌ ಎಂದೂ ಬಿಟ್ಟುಕೊಡಲಿಲ್ಲ. ನಮ್ಮ ಮುಂದಿನ ಪೀಳಿಗೆಗೆ ಅವರ ಹೋರಾಟಗಳನ್ನು ಆದರ್ಶಗಳನ್ನ ಮೈಗೂಡಿಸಿಕೊಳ್ಳಬೇಕು ಎಂದರು.ಶ್ರೀನಿವಾಸಪ್ರಸಾರ್‌ ಅವರು ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವಗುಣ ಬೆಳೆಸಿಕೊಂಡು, ಬಹಳ ಚಿಕ್ಕ ವಯಸ್ಸಿನಲ್ಲಿಯೇ ರಾಜಕೀಯಕ್ಕೆ ಬಂದವರು ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಎಂದು ರಾಜಿ ಮಾಡಿಕೊಳ್ಳಲಿಲ್ಲ. ಅವರಲ್ಲಿದ್ದ ಕಾಳಜಿಯಿಂದಾಗಿ ಅಷ್ಟು ಎತ್ತರಕ್ಕೆ ಬೆಳದರು. ಎಲ್ಲಾ ವರ್ಗದ ಜನರನ್ನುಗೌರವಿಸುತ್ತಿದ್ದರು. ಸಹಾಯ ಮಾಡುವ ಗುಣವನ್ನು ಹೊಂದಿದ್ದರು. ಯಾವುದೇ ವಿಚಾರದಲ್ಲಿ ರಾಜಿ ಮಾಡಿಕೊಂಡಿದ್ದೇ ಇಲ್ಲ ಎಂದರು.

ಸುತ್ತೂರು ಶಿವರಾತ್ರಿ ದೇಶಿಕೆಂದ್ರಸ್ವಾಮೀಜಿ ಮಾತನಾಡಿ, ಬುದ್ದ, ಬಸವ, ಅಂಬೇಡ್ಕರ್‌ರನ್ನು ಸ್ಮರಿಸುತ್ತಾ ಅವರ ಹಾದಿಯಲ್ಲಿ ನಡೆದವರು ಶ್ರೀನಿವಾಸಪ್ರಸಾದ್‌. ಅವರು ಒಳ್ಳೆಯ ವಿಷಯಗಳನ್ನು ಗ್ರಹಿಸುವ ವಿಶೇಷ ಶಕ್ತಿ ಹೊಂದಿದ್ದರು. ಬಸವಣ್ಣನ ವಿಚಾರಗಳ ಬಗ್ಗೆ ಅತ್ಯಂತ ಕಾಳಜಿ ವಹಿಸಿದ್ದರು ಎಂದರು.

ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ವಿ.ಶ್ರೀನಿವಾಸಪ್ರಸಾದ್ ಅವರು ಆದರ್ಶಗಳು, ಸ್ವಾಭಿಮಾನಿ ವ್ಯಕ್ತಿತ್ವವನ್ನು ಬಿಟ್ಟು ಹೋಗಿದ್ದಾರೆ. ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರೊ.ಸಿ.ನಾಗಣ್ಣ ನುಡಿ ನಮನ ಸಲ್ಲಿಸಿ, ಪ್ರಸಾದ್‌ ಅವರ ವಿಚಾರಗಳು ನಮ್ಮ ಜತೆ ಯಾವಾಗಲೂ ಇರುತ್ತದೆ. ಬದುಕಿನ ಹೋರಾಟದ ಕಥೆಯನ್ನು ಅವರು ಹೇಳುತ್ತಿದ್ದರು ಎಂದರು.ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಮಾತನಾಡಿ, ಎಂದಿಗೂ ಸ್ವಾಭಿಮಾನವನ್ನು ಬಿಟ್ಟುಕೊಡದ ವಿ.ಶ್ರೀನಿವಾಸ್ ಪ್ರಸಾದ್‌ ಟಿಕೆಟ್ ವಿಚಾರವಾಗಿ ನೇರವಾಗಿ ದೇವೇಗೌಡರನ್ನೇ ಬೈಯ್ದಿದ್ದರು. ರಾಜಕೀಯವಾಗಿ ಅನೇಕರಿಗೆ ಮಾರ್ಗದರ್ಶನ ನೀಡಿದರು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ನನ್ನ ರಾಜಕೀಯ ಬೆಳವಣಿಗೆಯಲ್ಲಿ ಪ್ರಸಾದ್ ಮಹತ್ತರ ಪಾತ್ರ ವಹಿಸಿದ್ದು, ಉಪ್ಪಾರರ ಬಗ್ಗೆ ಅಪಾರ ಕಾಳಜಿ ವಹಿಸಿದ್ದರು. ಕ್ಷೇತ್ರದ ಜನರ ನಾಡಿಮಿಡಿತ ಹೊಂದಿದ್ದರು ಎಂದರು.

ಶಾಸಕ ಎ.ಆರ್.ಕೃಷ್ಣಮೂರ್ತಿ, ಮಾಜಿ ಸಂಸದ ಎಂ.ಶಿವಣ್ಣ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಎನ್. ನಾಗಯ್ಯ, ಡಾ. ಮೋಹನ್ ಪ್ರತಿಮಾ ಪ್ರಸಾದ್‌ ಮಾತನಾಡಿದರು. ಭಾಗ್ಯಲಕ್ಷ್ಮಿ ವಿ.ಶ್ರೀನಿವಾಸ್ ಪ್ರಸಾದ್, ಪೂರ್ಣಿಮಾ ಪ್ರಸಾದ್, ಪೂನಂ ಪ್ರಸಾದ್ ಮಾಜಿ ಶಾಸಕರಾದ ಎಸ್ .ಜಯಣ್ಣ, ಹರ್ಷವರ್ಧನ್, ಮುಖಂಡರಾದ ಎಂ. ರಾಮಚಂದ್ರ, ಅಯ್ಯನಪುರ ಶಿವಕುಮಾರ್, ಬಿ.ಕೆ.ರವಿಕುಮಾರ್, ಆರ್. ಮಹದೇವ್, ಹೊಂಗನೂರುಚಂದ್ರು, ಸದಾಶಿವಮೂರ್ತಿ, ಇತರರು ಇದ್ದರು.